ಮಕ್ಕಳ ಜೊತೆ ಮಕ್ಕಳಂತೆ ಆಟವಾಡಿದ ನಟ ಯಶ್ !
ಫಾದರ್ಸ್ ಡೇ ದಿನದಂದು ನಟ ಯಶ್ ಮತ್ತು ರಾಧಿಕಾ ಇನ್ಸ್ಟಾಗ್ರಾಮ್ ನಲ್ಲಿ ಯಶ್ ಮಕ್ಕಳ ಜೊತೆ ಲಾಗ ಹಾಕುತ್ತಿರುವ ಫೋಟೋ ಒಂದನ್ನ ಹಂಚಿಕೊಂಡಿದ್ದಾರೆ .
ಅಪ್ಪನ ತ್ಯಾಗ ಮತ್ತು ಪ್ರೀತಿಯನ್ನು ಸ್ಮರಿಸಲು ಪ್ರತಿವರ್ಷ ಜೂನ್ 3ನೇ ಭಾನುವಾರ ವಿಶ್ವ ಅಪ್ಪಂದಿರ ದಿನ ಆಚರಿಸಲಾಗುತ್ತದೆ. ಸೋಶಿಯಲ್ ಮೀಡಿಯಾದಲ್ಲಿ ಫಾದರ್ಸ್ ಡೇ ಪೋಸ್ಟ್‌ಗಳು ವೈರಲ್ ಆಗುತ್ತಿದೆ. ಸೆಲೆಬ್ರೆಟಿಗಳು ತಮ್ಮ ಜೀವನದಲ್ಲಿ ಬೆಂಬಲ ಮತ್ತು ಮಾರ್ಗದರ್ಶನ ನೀಡುವ ಹೀರೊ ಹ್ಯಾಟ್ಸಪ್ ಹೇಳುತ್ತಿದ್ದಾರೆ.
ಕನ್ನಡ ಸಿನಿಮಾ ತಾರೆಯರು ಕೂಡ ತಮ್ಮ ತಂದೆಯ ಬಗ್ಗೆ ವಿಶೇಷ ಪೋಸ್ಟ್ ಮಾಡಿ ಗೌರವ ಸೂಚಿಸುತ್ತಿದ್ದಾರೆ. ಯಶ್ ಮಕ್ಕಳ ಜೊತೆ ಇರುವ ವೀಡಿಯೋ ಹಂಚಿಕೊಂಡು “ವಿಶ್ವದ ಅತ್ಯುತ್ತಮ ಅಪ್ಪನಿಗೆ, ತಂದೆಯ ದಿನಾಚರಣೆಯ ಶುಭಾಶಯಗಳು” ಎಂದು ಪೋಸ್ಟ್ ಮಾಡಿದ್ದಾರೆ. ನಟ ಜಗ್ಗೇಶ್, ನಟಿ ಶ್ರುತಿ ಸೇರಿ ಹಲವರು ಈ ವಿಶೇಷ ದಿನದಂದು ಅಪ್ಪನಿಗೆ ಗೌರವ ಸಲ್ಲಿಸುತ್ತಿದ್ದಾರೆ.
ಅಪ್ಪ.. ನನ್ನ(ಆ)ಗಸ.. ನನ್ನ(ಪ್ರ)ಪಂಚ ನನ್ನತಪ್ಪಿಗೆ ಅಪ್ಪ ಡಂಡಿಸಿ ಮಂಡಿಯೂರಿಸಿ ಶಿಕ್ಷಿಸಿದಾಗ.. ಸಂತೈಸುವ ಅಮ್ಮ ದೇವರಂತೆ ಕಂಡಳು! ಕಾಲಉರುಳಿ ತಂದೆಯಾಗಿ ತಾತನಾಗಿ ನಿರ್ಗಮಿಸಿದ ಅಪ್ಪನ ನೆನೆದಾಗ ನನ್ನಯಶಸ್ಸಿನ ಬದುಕಿಗೆ ಅಧ್ಯಾಪಕ ಆಗಿದ್ದ ಅಪ್ಪ. ತಂದೆಯ ತ್ಯಾಗ ತಂದೆಯಾದಾಗ ಅರಿವು.. ತನ್ನನ್ನೆ ನೀಡಿ ಪ್ರೀತಿಮಾತ್ರ ಬೇಡುವ ಅನಾಥ ಅಪ್ಪ ಐ ಲವ್ ಯು” ಎಂದು ನಟ ಜಗ್ಗೇಶ್ ಬರೆದುಕೊಂಡಿದ್ದಾರೆ. ತಂದೆಯ ಜೊತೆಗಿನ ಫೋಟೊಗಳನ್ನು ಹಂಚಿಕೊಂಡಿದ್ದಾರೆ. “ತಮ್ಮ ಮಕ್ಕಳಿಗಾಗಿ ತನ್ನ ಪ್ರಪಂಚವನ್ನೇ (ಮತ್ತು ತನ್ನನ್ನೇ) ತಲೆಕೆಳಗಾಗಿ ಮಾಡುವ ವಿಶ್ವದ ಅತ್ಯುತ್ತಮ ಅಪ್ಪನಿಗೆ. ತಂದೆಯ ದಿನಾಚರಣೆಯ ಶುಭಾಶಯಗಳು” ಎಂದು ರಾಧಿಕಾ ಪಂಡಿತ್ ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಯಶ್ ಮಗಳು ಐರಾ ಹಾಗೂ ಮಗ ಯಥರ್ವ್ ಜೊತೆ ಆಟ ಆಡುತ್ತಿರುವ ವೀಡಿಯೋ ಹಾಕಿದ್ದಾರೆ. ಅದರಲ್ಲಿ ಯಶ್, ಮಕ್ಕಳ ಜೊತೆ ಮಗುವಾಗಿ ಪಲ್ಟಿ ಹೊಡೆಯುತ್ತಾ ಆಡುತ್ತಿರುವುದನ್ನು ನೋಡಬಹುದು.
‘ರಾಮಾಯಣ’ ಹಾಗೂ ‘ಟಾಕ್ಸಿಕ್’ ಸಿನಿಮಾ ಕೆಲಸಗಳಲ್ಲಿ ಯಶ್ ಬ್ಯುಸಿಯಾಗಿದ್ದಾರೆ. ಮೊದಲಿನಿಂದಲೂ ಯಶ್ ಫ್ಯಾಮಿಲಿಗೆ ಹೆಚ್ಚು ಸಮಯ ಕೊಡುತ್ತಾ ಬರ್ತಿದ್ದಾರೆ. ಈ ಬಗ್ಗೆ ಆಗಾಗ್ಗೆ ರಾಧಿಕಾ ಪೋಸ್ಟ್ ಮಾಡಿ ತಿಳಿಸುತ್ತಾರೆ. ಇನ್ನು ಮಕ್ಕಳಿಗಾಗಿ ರಾಧಿಕಾ ಸಿನಿಮಾಗಳಿಂದ ದೂರ ಉಳಿದು ಅವರ ಲಾಲನೆ ಪಾಲನೆ ಮಾಡುತ್ತಿದ್ದಾರೆ. ಪತಿಗೂ ಬೆಂಬಲವಾಗಿ ನಿಂತಿದ್ದಾರೆ. 7 ವರ್ಷಗಳ ಹಿಂದೆ ರಾಧಿಕಾ ಪಂಡಿತ್ ಮಗಳು ಐರಾಗೆ ಜನ್ಮ ನೀಡಿದ್ದರು. 5 ವರ್ಷಗಳ ಹಿಂದೆ ಮಗ ಯಥರ್ವ್‌ನನ್ನು ದಂಪತಿ ಸ್ವಾಗತಿಸಿದ್ದರು. ಬಹಳ ಅದ್ಧೂರಿಯಾಗಿಯೇ ಮಕ್ಕಳ ನಾಮಕರಣ, ಹುಟ್ಟುಹಬ್ಬ ಆಚರಿಸುತ್ತಾ ಬರ್ತಿದ್ದಾರೆ. ಆಗಾಗ್ಗೆ ಫ್ಯಾಮಿಲಿ ಪ್ರವಾಸ ಕೈಗೊಳ್ಳುತ್ತಾರೆ. ಯಶ್ ಈಗ ಚಿತ್ರ ನಿರ್ಮಾಣ ಸಂಸ್ಥೆ ಸಹ ಹುಟ್ಟುಹಾಕಿದ್ದಾರೆ. ಮಾನ್‌ಸ್ಟರ್ ಮೈಂಡ್ಸ್ ಕ್ರಿಯೇಷನ್ಸ್ ಬ್ಯಾನರ್ ಅಡಿಯಲ್ಲಿ ‘ಟಾಕ್ಸಿಕ್’ ಹಾಗೂ ‘ರಾಮಾಯಣ’ ಚಿತ್ರಗಳಿಗೆ ಸಹ ನಿರ್ಮಾಪಕರಾಗಿದ್ದಾರೆ. ಜಾಹೀರಾತುಗಳಿಂದಲೂ ಆದಾಯ ಗಳಿಸುತ್ತಿದ್ದಾರೆ. ರಾಕಿಂಗ್ ಸ್ಟಾರ್ ಹೊಸ ಲುಕ್ ಸಖತ್ ವೈರಲ್ ಆಗುತ್ತಿದೆ. ಇತ್ತೀಚೆಗೆ ಮಾಜಿ ಸಿಎಂ ಯಡಿಯೂರಪ್ಪ ಮೊಮ್ಮಗ ಹಾಗೂ ತೆಲುಗು ನಟ ನಾಗಾರ್ಜುನ ಪುತ್ರ ಅಖಿಲ್ ಮದುವೆ ಸಮಾರಂಭಗಳಲ್ಲಿ ಯಶ್ ಕಾಣಿಸಿಕೊಂಡಿದ್ದರು. ಮಡದಿ ರಾಧಿಕಾ ಜೊತೆ ನಗರದ ರೆಸ್ಟೋರೆಂಟ್‌ಗೆ ಹೋಗಿದ್ದ ವೀಡಿಯೋ ಸಹ ವೈರಲ್ ಆಗಿತ್ತು.
ಗೀತು ಮೋಹನ್ ದಾಸ್ ನಿರ್ದೇಶನದ ಆಕ್ಷನ್ ಥ್ರಿಲ್ಲರ್ ‘ಟಾಕ್ಸಿಕ್’ ಸಿನಿಮಾ ಮುಂದಿನ ವರ್ಷ ಮಾರ್ಚ್ 19ಕ್ಕೆ ತೆರೆಗೆ ಬರಲಿದೆ. ಇನ್ನು ದೀಪಾವಳಿಗೆ ‘ರಾಮಾಯಣ’ ಚಿತ್ರದ ಮೊದಲ ಭಾಗ ಬಿಡುಗಡೆ ಆಗಲಿದೆ. ರಾವಣನಾಗಿ ಚಿತ್ರದಲ್ಲಿ ಯಶ್ ಬಣ್ಣ ಹಚ್ಚಿದ್ದಾರೆ.