ಕೌಶಲ್ಯಾಧಾರಿತ ಯುವಕರಿಂದಲೆ ಸದೃಢ ಭಾರತ ನಿರ್ಮಾಣ

ಇಂದು ವಿಶ್ವ ಯುವ ಕೌಶಲ್ಯ ದಿನ

 ಇಂದಿನ ಜಗತ್ತು ಯುವ ಜಗತ್ತು  ಪ್ರಪಂಚವು ಯುವ ಜನಾಂಗದ ಕೌಶಲ್ಯದ ಮೇಲೆ ನಿಂತಿದೆ ಇಡೀ ಜಗತ್ತಿನ ಭವಿಷ್ಯ ಕೂಡ ಕೌಶಲ ಆಧಾರಿತ ಸದೃಢ ಯುವಕರ ಮೇಲೆ ಅವಲಂಬಿತವಾಗಿದೆ.

ಪ್ರಪಂಚದಲ್ಲಿ ಅತಿ ಹೆಚ್ಚು ಯುವ ಸಮುದಾಯ ಹೊಂದಿರುವ ದೇಶವೆಂದರೆ ಅದು ಭಾರತ ಭಾರತವು ಯುವ ಶಕ್ತಿಯ ಬಂಡಾರವನ್ನೇ ಹೊಂದಿದೆ ಭಾರತದ ಶಕ್ತಿ ಅಂದರೆ ಯುವಶಕ್ತಿ ರಾಷ್ಟ್ರ ನಿರ್ಮಾಣದಲ್ಲಿ ಸದೃಢ ಯುವಕರು ಕೌಶಲ್ಯಾಧಾರಿತ ಯುವಕರು ದೇಶವನ್ನು ಅಭಿವೃದ್ಧಿ   ಪಡಿಸುವಲ್ಲಿ  ಪ್ರಮುಖ ಪಾತ್ರ ವಹಿಸುತ್ತಾರೆ.

 

2014 ರಲ್ಲಿ ಜುಲೈ 15 ರಂದು ವಿಶ್ವಸಂಸ್ಥೆಯ ಸಾಮನ್ಯ ಸಭೆಯಲ್ಲಿ, ವಿಶ್ವ ಯುವ ಕೌಶಲ್ಯ ದಿನವನ್ನಾಗಿ ಘೋಷಿಸಲಾಯಿತು. ಅಂದಿನಿಂದ ಪ್ರತಿ ವರ್ಷವೂ ವಿಶ್ವ ಯುವ ಕೌಶಲ್ಯ ದಿನವನ್ನ ಆಚರಣೆ ಮಾಡುತ್ತ ಬರಲಾಗುತ್ತಿದೆ.

ಪ್ರತಿ ವರ್ಷ ಜುಲೈ 15ರಂದು ವಿಶ್ವ ಯುವ ಕೌಶಲ್ಯ ದಿನವನ್ನು ಆಚರಣೆ ಮಾಡಲಾಗುತ್ತದೆ. ಯುವಜನೆತೆಯಲ್ಲಿ ಕೌಶಲ್ಯ ಅಭಿವೃದ್ಧಿಯ ದೃಷ್ಟಿಯಿಂದ ಮತ್ತು ಕೌಶಲ್ಯದ ಪ್ರಾಮುಖ್ಯತೆಯನ್ನು ಸಾರುವ ಉದ್ದೇಶದಿಂದ ಪ್ರತಿ ವರ್ಷ ವಿಶ್ವ ಯುವ ಕೌಶಲ್ಯ ದಿನವನ್ನ ಆಚರಣೆ ಮಾಡಲಾಗುತ್ತದೆ.

ಯುವಜನತೆಯಲ್ಲಿ ವೃತ್ತಿ, ಜೀವನ ಕೌಶಲ್ಯ, ಉದ್ಯಮ ಹೀಗೆ ವಿವಿಧ ಕ್ಷೇತ್ರಗಳಲ್ಲಿ ಅಗತ್ಯವಾದ ಕೌಶಲ್ಯವನ್ಜು ಮೈಗೂಡಿಸಿಕೊಳ್ಳಬೇಕು ಮತ್ತು ಕೌಶಲ್ಯದ ಪ್ರಯೋಜನಗಳನ್ನು ಪಡೆಯಬೇಕು ಎನ್ನುವ ಉದ್ದೇಶದಿಂದ, ವಿಶ್ವ ಯುವ ಕೌಶಲ್ಯ ದಿನವನ್ನು ಆಚರಿಸಿ ಅದರ ಮಹತ್ವವನ್ನು ತಿಳಿಸುವ ಉದ್ದೇಶವಾಗಿದೆ. ಈ ದಿನದಂದು ಉದ್ಯೋಗದಾತರು, ಉದ್ಯಮ ಮತ್ತು ಉದ್ಯೋಗ ಬಯಸುವವರು ಹೀಗೆ ಸಮಾಜದ ವಿವಿಧ ಕ್ಷೇತ್ರಗಳಲ್ಲಿ ತರಬೇತಿ ಮತ್ತು ನೈಪುಣ್ಯತೆ ಸಾಧಿಸುವಂತೆ ಯುವಜನೆತಯನ್ನು ಪ್ರೇರೆಪಿಸಲಾಗುತ್ತದೆ.

2014 ರಲ್ಲಿ ಜುಲೈ 15 ರಂದು ವಿಶ್ವಸಂಸ್ಥೆಯ ಸಾಮನ್ಯ ಸಭೆಯಲ್ಲಿ, ವಿಶ್ವ ಯುವ ಕೌಶಲ್ಯ ದಿನವನ್ನಾಗಿ ಘೋಷಿಸಲಾಯಿತು. ಅಂದಿನಿಂದ ಪ್ರತಿ ವರ್ಷವೂ ವಿಶ್ವ ಯುವ ಕೌಶಲ್ಯ ದಿನವನ್ನ ಆಚರಣೆ ಮಾಡುತ್ತ ಬರಲಾಗುತ್ತಿದೆ. 2030 ರವೆಳೆಗೆ ಎಲ್ಲ ವರ್ಗದವರಿಗೂ ಸಂಪೂರ್ಣ ಶಿಕ್ಷಣ, ತಾಂತ್ರಿಕ ಶಿಕ್ಷಣ ಮತ್ತು ವೃತ್ತಿಪರ ಕೌಶಲ್ಯ ಒದಗಿಸುವ ಗುರಿಯನ್ನು ವಿಶ್ವ ಸಂಸ್ಥೆ ಹೊಂದಿದೆ.

  ಸರ್ಕಾರದಿಂದ 25,000 ಅಭ್ಯರ್ಥಿಗಳಿಗೆ ತಾಂತ್ರಿಕ ತರಬೇತಿ

ವಿಶ್ವ ಸಂಸ್ಥೆಯ ಈ ಗುರುಯನ್ನು ಸಾಧಿಸಲು ವಿಶ್ವ ಸಂಸ್ಥೆಯ ಸದಸ್ಯ ರಾಷ್ಟ್ರಗಳು ಕೈಜೋಡಿಸಬೇಕು ಮತ್ತು ಯುವ ಜನತೆಗೆ ಪೂರಕ ವಾತಾವರಣ ನಿರ್ಮಿಸಬೇಕು ಎಂದು ವಿಶ್ವಸಂಸ್ಥೆ ಕೋರಿಕೊಂಡಿದೆ.

ಇದಕ್ಕೆ ಪೂರಕ ಎಂಬಂತೆ ಭಾರತ ದೇಶದಲ್ಲಿ ಕೂಡ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಸಹಯೋಗದಲ್ಲಿ ಹಲವು ಕೌಶಲ್ಯ ಅಭಿವೃದ್ಧಿ ತರಬೇತಿ ಯೋಜನೆಗಳನ್ನು ಜಾರಿಗೊಳಿಸಲಾಗಿದೆ. ಶಿಕ್ಷಣದ ಜತೆಗೆ ಉದ್ಯೋಗ ಒದಗಿಸಲು ಕೌಶಲ್ಯದ ಅಗತ್ಯತೆ, ಪೂರಕ ವಾತಾವರಣ ನಿರ್ಮಾಣಕ್ಕೆ ವಿಶ್ವ ಸಂಸ್ಥೆಯ ನಿರ್ದೇಶನದಂತೆ ಹಲವು ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಲಾಗಿದೆ.

 

ಕೇಂದ್ರ ಸರ್ಕಾರವು ಹಲವಾರು ಕಾರ್ಯಕ್ರಮಗಳನ್ನು ಕೈಗೊಂಡಿದ್ದು, ಅಪ್ರೆಂಟಿಸ್‌ಶಿಪ್, ತಾಂತ್ರಿಕ ತರಬೇತಿ ಕಾರ್ಯಕ್ರಮಗಳು ಇತರೆ ಯೋಜನೆಗಳ ಮೂಲಕ ಯುವ ಜನೆತೆ ಅಗತ್ಯ ಕೌಶಲ್ಯಗಳನ್ನು ಪಡೆದುಕೊಳ್ಳುವಂತೆ ಮಾಡಿದೆ. ಯುವಕರು ಕೌಶಲ್ಯಗಳನ್ನು ಪಡೆಯಲು ಮತ್ತು ಮುಂಬರುವ ವೃತ್ತಿ ಅವಕಾಶಗಳಿಗೆ ಅರ್ಹರಾಗಲು ಪ್ರೋತ್ಸಾಹಿಸುವ ಉದ್ದೇಶದಿಂದ ಸರ್ಕಾರವು ವಿವಿಧ ಯೋಜನೆಗಳನ್ನು ಆರಂಭಿಸಿದೆ.

ವಿಶ್ವ ಯುವ ಕೌಶಲ್ಯ ದಿನವನ್ನು ಪ್ರಪಂಚದಾದ್ಯಂತ ಅದ್ಭುತವಾಗಿ ಆಚರಿಸಲಾಗುತ್ತದೆ. ಯುವಕರ ಕೌಶಲ್ಯವನ್ನು ಅಭಿವೃದ್ಧಿಪಡಿಸಲು ಮತ್ತು ಅದರ ಪ್ರಯೋಜನಗಳ ಬಗ್ಗೆ ಅವರಿಗೆ ಅರಿವು ಮೂಡಿಸಲು ಪ್ರತಿ ವರ್ಷ ಈ ದಿನವನ್ನು ಆಚರಿಸಲಾಗುತ್ತದೆ.

ವಿಶ್ವ ಯುವ ಕೌಶಲ್ಯ ದಿನವನ್ನು  ಯುವಕರನ್ನು ಸ್ವಯಂ-ಉದ್ಯೋಗದೊಂದಿಗೆ ಸ್ವಾವಲಂಬಿಗಳನ್ನಾಗಿ ಮಾಡುವುದು ಇದರ ಉದ್ದೇಶವಾಗಿದೆ. ಪ್ರಸ್ತುತ, ಭಾರತವು ವಿಶ್ವದಲ್ಲೇ ಅತಿ ಹೆಚ್ಚು ಯುವಕರನ್ನು ಹೊಂದಿರುವ ದೇಶವಾಗಿದೆ.

 

ಇಂದಿನ ಯುವಕರಿಗೆ ಉತ್ತಮ ಸಾಮಾಜಿಕ ಆರ್ಥಿಕ ಪರಿಸ್ಥಿತಿಗಳನ್ನು ಸಾಧಿಸುವುದು ಗುರಿಯಾಗಿದೆ. ಲಕ್ಷಾಂತರ ಆಸೆಗಳು ಯುವ ಶಕ್ತಿಯಲ್ಲಿ, ಲಕ್ಷಾಂತರ ಭರವಸೆಗಳು ಯುವ ಶಕ್ತಿಯಲ್ಲಿವೆ. ಲಕ್ಷಾಂತರ ಆಕಾಂಕ್ಷೆಗಳು ಯುವ ಶಕ್ತಿಯಲ್ಲಿವೆ.

ಯುವ ಶಕ್ತಿಯಿಂದ ದೇಶದ ಅಡಿಪಾಯ. ಯುವ ಶಕ್ತಿಯಿಂದ ದೇಶದ ಭವಿಷ್ಯವಿದೆ. ದೇಶದ ಉದಯಕ್ಕೆ ಯುವ ಶಕ್ತಿಯೇ ಕಾರಣ. ದೇಶದ ಅವನತಿಗೆ ಯುವ ಶಕ್ತಿಯೇ ಕಾರಣ.

ಶಿಕ್ಷಣವೇ ಉತ್ತಮ ಸ್ನೇಹಿತ. ವಿದ್ಯಾವಂತ ವ್ಯಕ್ತಿಯನ್ನು ಎಲ್ಲೆಡೆ ಗೌರವಿಸಲಾಗುತ್ತದೆ, ಶಿಕ್ಷಣವು ಸೌಂದರ್ಯ ಮತ್ತು ಕೌಶಲ್ಯವನ್ನು ಕಳಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಹಾಗೂ ಯುವಕರನ್ನು ಗೆಲ್ಲಿಸುತ್ತದೆ.

 

* ವೆಂಕಟೇಶ್ ಬಾಬು ಎಸ್ ಸಹಾಯಕ ಪ್ರಾಧ್ಯಾಪಕರು ದಾವಣಗೆರೆ

Facebook
Twitter
LinkedIn
WhatsApp
Email
Telegram

Leave a Comment

Your email address will not be published. Required fields are marked *

Translate »
Scroll to Top