ಬಳ್ಳಾರಿ: ರಾಘವ ಕಲಾ ಮಂದಿರದಲ್ಲಿ ಆಯೋಜನಗೊಂಡಿದ್ದ ವೈ ನಾಗೇಶ್ ಶಾಸ್ತ್ರಿ ಸಾಹಿತ್ಯ ಸಂಘದ ಸರ್ವಸದಸ್ಯರ ಸಾಮಾನ್ಯ ಸಭೆಯಲ್ಲಿ ನೂತನ ಪದಾಧಿಕಾರಗಳ ಆಯ್ಕೆ ಮತ್ತು ಸಂಘದ ಕಾರ್ಯಚಟುವಟಿಕೆಗಳ ಬಗ್ಗೆ ಸುದೀರ್ಘವಾಗಿ ಚರ್ಚಿಸಲಾಯಿತು.
ಸಂಘದ ಅಧ್ಯಕ್ಷರಾದ ಡಾ. ಮಲ್ಲಿಕಾರ್ಜುನ ಗೌಡರು ಹಾಗು ರಮೇಶಗೌಡ ಪಾಟೀಲ್ ಇವರು ವಯೋ ಸಹಜ ಸಮಸ್ಯಗಳಿಂದಾಗಿ ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಿದ್ದರಿಂದ ನೂತನ ಕಾರ್ಯಕಾರಿ ಮಂಡಳಿಯನ್ನು ಆಯ್ಕೆ ಮಾಡಲಾಯಿತು.
ಗೌರವ ಅಧ್ಯಕ್ಷರಾಗಿ ಹಿರಿಯರಾದ ಡಾ. ಹೆಚ್ ಮಲ್ಲಿಕಾರ್ಜುನ ಗೌಡರು, ಅದ್ಯಕ್ಷರಾಗಿ ಡಾ.ಎಸ್ ಮಂಜುನಾಥ್ , ಉಪಾಧ್ಯಕ್ಷರಾಗಿ ಕೆ ಪಂಪನ ಗೌಡರು, ಕಾರ್ಯದರ್ಶಿ ಗಳಾಗಿ ಚಾಂದ್ ಪಾಷ ,ಸಹ ಕಾರ್ಯದರ್ಶಿಯಾಗಿ ವನಜಾಕ್ಷಿ ,ಖಜಾಂಚಿಯಾಗಿ ಡಿ ನಾಗರತ್ನಮ್ಮ ಇವರನ್ನು ಸರ್ವಾನುಮತದಿಂದ ಆಯ್ಕೆಮಾಡಲಾಯಿತು.
ಕಾರ್ಯಕಾರಿ ಸಮಿತಿ ಸದಸ್ಯರಾಗಿ ಕೆ.ಬಿ ಸಿದ್ಧಲಿಂಗಪ್ಪ , ಎ.ಎಂ.ಪಿ ವೀರೇಶಸ್ವಾಮಿ. ಅಚ್ಚಪ್ಪ ನಾಗರಾಜ, ರಮೇಶಗೌಡ ಪಾಟೀಲ್ , ಬಿ.ಸುಮಾರೆಡ್ಡಿ , ಬಿ ರಮಣಪ್ಪ ಇವರನ್ನು ಸರ್ವಾನುಮತದಿಂದ ಆಯ್ಕೆಮಾಡಲಾಯಿತು.
ನಂತರ ಸಂಘದ ಕಾರ್ಯ ಚಟುವಟಿಕೆಗಳನ್ನು ಕುರಿತು ಚರ್ಚಿಸಲಾಗಿ, ಕೆ.ಬಿ ಸಿದ್ಧಲಿಂಗಪ್ಪ ಅವರು ಸಂಘ ನಡೆದು ಬಂದ ಹಾದಿಯನ್ನು ವಿವರಿಸಿದರು .
ಈ ಸಭೆಯಲ್ಲಿ ಸಂಘದ ಹಿರಿಯ ಸದಸ್ಯರಾದ ಸುಶೀಲ ಶಿರೂರು, ಹಾವಿನಾಳು ಶರಣಬಸಪ್ಪ, ಸಿ.ಚೆನ್ನಬಸವಣ್ಣ, ಡಾ.ಮಹಿಪಾಲ್, ಡಾ.ಅರವಿಂದ ಪಾಟೀಲ್, ಕುಮುದಿನಿ, ಸರೋಜ ಬ್ಯಾತನಾಳ್, ಡಾ.ಯೋಗಾನಂದರೆಡ್ಡಿ , ಬಿ.ಎಂ ಬಸವರಾಜ, ನಾಗರತ್ನಮ್ಮ , ಅಚ್ಚಪ್ಪ ಉಮಾ , ಪ್ರಭುದೇವ ಕಪ್ಪಗಲ್ಲು , ಕೆ ಮೃತ್ಯುಂಜಯ, ಕೆ.ಎಂ ಜಂಬುನಾಥ ಇತರರು ಉಪಸ್ಥಿತರಿದ್ದು, ಅಮೂಲ್ಯ ಸಲಹೆ ಸೂಚನೆಗಳನ್ನು ನೀಡಿದರು.
ನೂತನ ಕಾರ್ಯದರ್ಶಿಗಳಾದ ಚಾಂದ್ ಪಾಷ ಕೊನೆಯಲ್ಲಿ ವಂದನೆ ಸಲ್ಲಿಸಿದರು.