ಬಳ್ಳಾರಿ ವಿಭಾಗಕ್ಕೆ ಡಿ ಕೆ ಶಿವಕುಮಾರ್ ಸಾರಾತ್ಯದಲ್ಲಿ ಪ್ರವಾಸ – ಮಾಜಿ ಸಚಿವೆ ಉಮಾ ಶ್ರೀ

ಮೊಳಕಾಲ್ಮುರು : ತಾಲ್ಲೂಕಿನ ಹಾನಗಲ್ ಪ್ರವಾಸಿ ಮಂದಿರದಲ್ಲಿ ಮಾಜಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಉಮಾ ಶ್ರೀ ರವರು ಬಳ್ಳಾರಿಗೆ ಹೋಗುವ ಸಂದರ್ಭದಲ್ಲಿ ವಿಶ್ರಾಂತಿ ಪಡೆದ ಪತ್ರಿಕೆ ಮಾಧ್ಯಮ ಮಿತ್ರರೊಂದಿಗೆ ಮಾತನಾಡಿದರುಕರ್ನಾಟಕ ರಾಜ್ಯದಲ್ಲಿ 2023ನೇ ವಿಧಾನ ಸಭೆ ಚುನಾವಣೆ ಸಮೀಪಸುತ್ತಿದ್ದು ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಹೆಚ್ಚಿನ ಅಭ್ಯರ್ಥಿಗಳನ್ನು ಗೆಲ್ಲಿಸಿ ಕಾಂಗ್ರೆಸ್ ಪಕ್ಷವನ್ನು ಮತ್ತೆ ಅಧಿಕಾರ ತರಬೇಕಾಗಿದೆ. ಕರ್ನಾಟಕ ರಾಜ್ಯದಲ್ಲಿರುವ ಮಹಿಳೆಯಾರನ್ನು ಸಬಲೀಕರಣ ಮಾಡುವ ಮೂಲಕ ಸದೃಢ ಸಮಾಜ ಕಟ್ಟಬೇಕು. ಮಹಿಳಾ ಸ್ವಸಹಾಯ ಸಂಘ ಪಾರಿವಾರಗಳನ್ನು ಒಗ್ಗೂಡಿಸುವ ಕಾರ್ಯಕ್ರಮ ಮಾಡಬೇಕು. ಕರ್ನಾಟಕ ರಾಜ್ಯವನ್ನು 5ವಿಭಾಗಗಳಾಗಿ ವಿಭಜನೆ ಮಾಡಿದ್ದು ನಾನು ಬಳ್ಳಾರಿ ವಿಭಾಗಕ್ಕೆ ಡಿ ಕೆ ಶಿವಕುಮಾರ್ ಸಾರಾತ್ಯದಲ್ಲಿ ಪ್ರವಾಸ ಬಂದಿರುತ್ತೇನೆ.


ನಾ ನಾಯಕಿ ಯೋಜನೇ ಕಾರ್ಯಕ್ರಮವನ್ನು ಕಾಂಗ್ರೆಸ್ ಪಕ್ಷದ ವತಿಯಿಂದ ಅನುಷ್ಠಾನ ಮಾಡಿದ್ದು ಈ ಯೋಜನೆಯ ಅಧ್ಯಕ್ಷತೆಯನ್ನು ಡಿ ಕೆ ಶಿವಕುಮಾರ್ ರವರು ನನಗೆ ವಹಿಸಿರುತ್ತಾರೆ. ಆದಕಾರಣ ನಾನು ರಾಜ್ಯದ ಎಲ್ಲಾ ವಿಭಾಗಗಳಲ್ಲಿ ಭಾಗವಹಿಸಿ ಮಹಿಳೆಯರನ್ನು ಸಬಲೀಕರಣ ಮಾಡಬೇಕು. ನಾನು ಹಿಂದಿನ ಚುನಾವಣೆಯಲ್ಲಿ ಅಲ್ಪ ಮತಗಳಿಂದ ಸೋತಿದ್ದೆ ಆದರೆ ಈ ಚುನಾವಣೆಯಲ್ಲಿ ಖಂಡಿತ ಗೆದ್ದೇ ಗೆಲ್ಲುತ್ತೆನೆ ಎಂದು ಹೇಳಿದರು. ಸಂದರ್ಭದಲ್ಲಿ ಮುಖಂಡರಾದ ಯಾರ್ಜೆನಹಳ್ಳಿ ನಾಗರಾಜ್, ಚಿಕ್ಕೇರಹಳ್ಳಿ ಸಿದ್ದೇಶ್, ಪತ್ರಕರ್ತ ರಾದ ಈರಣ್ಣ ಯಾದವ್, ತುಮಕೂರ್ಲಹಳ್ಳಿ ಗೋವಿಂದಪ್ಪ, ನಾಗಸಮುದ್ರ ಬಸವರಾಜ್ ಯಾರ್ರೆನಹಳ್ಳಿ ಲೋಕೇಶ್, ರಾಯಪುರ ಬಸವರಾಜ್, ಚಿಂನ್ನೊಬನಹಳ್ಳಿ ಬಾಬು ಹಾಜರಿದ್ದರು.

Leave a Comment

Your email address will not be published. Required fields are marked *

Translate »
Scroll to Top