ಹರಿಹರ ; ಹರಿಹರದಲ್ಲಿ ಕಾರ್ಯಕ್ರಮಕ್ಕೆ ಭೇಟಿ ನೀಡಿದ್ದ ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರಿಗೆ ಮಾಯಕೊಂಡ ವಿಧಾನಸಭಾ ಕ್ಷೇತ್ರದ ಬಿಜೆಪಿ ಕಾರ್ಯದರ್ಶಿ ಹಾಗೂ ಪ್ರಬಲ ಆಕಾಂಕ್ಷಿ ಜಿ.ಎಸ್. ಶ್ಯಾಮ್ ಮತ್ತು ಅವರ ಸ್ನೇಹ ಬಳಗವು ಆತ್ಮೀಯವಾಗಿ ಸನ್ಮಾನಿಸಿ ಗೌರವಿಸಿತು. ಈ ಸಂದರ್ಭದಲ್ಲಿ ಶ್ಯಾಮ್ ಅವರು ವಿಜಯೇಂದ್ರ ಬಳಿ ಮಾಯಕೊಂಡ ಕ್ಷೇತ್ರದಲ್ಲಿ ಬಿಜೆಪಿ ಪಕ್ಷ ಬಲವರ್ಧನೆ ಹಾಗೂ ತಮ್ಮ ಗೆಲುವಿಗೆ ಜನಬಲಕ್ಕೆ ಬೇಕಾದ ಸಲಹೆ, ಸೂಕ್ತ ಮಾರ್ಗದರ್ಶನ ಪಡೆದರು.
ಅಲ್ಲದೆ ಶ್ಯಾಮ್ ಅವರ ರಾಜಕೀಯ ಉತ್ಸಾಹ, ಪಕ್ಷ ಸಂಘಟನೆಯ ಪ್ರಯತ್ನಕ್ಕೆ ಮೆಚ್ಚುಗೆಯ ಜೊತೆಗೆ ಸ್ಪೂರ್ತಿ ತುಂಬಿದರು. ಈ ವೇಳೆ ಮಾಯಕೊಂಡ ಕ್ಷೇತ್ರದ ಮುಖಂಡರು ಹಾಗೂ ಉಪಸ್ಥಿತರಿದ್ದರು.