ಹರಿಹರ,ಮಾ,2 : ಮಹಾಶಿವರಾತ್ರಿ ನಿಮಿತ್ತ ಹರಿಹರ ಕುರುಹಿನಶೆಟ್ಟಿ ಸಮಾಜ ಪ್ರೌಢ ಸಂಘದ ವತಿಯಿಂದ ಮೆಟ್ಟಿಲು ಹೊಳೆ ರಸ್ತೆಯಲ್ಲಿರುವ ಶ್ರೀ ನೀಲಕಂಟೇಶ್ವರ ಸ್ವಾಮಿಗೆ ಬೆಳಗ್ಗೆಯಿಂದ ರಾತ್ರಿಯವರೆಗು ರುದ್ರಾಭಿಷೇಕ , ಕ್ಷೀರಾಭಿಷೇಕ ಪೂಜಾಕಾರ್ಯಕ್ರಮಗಳು ನಡೆಯಿತು. ಈ ಬಾರಿ ವಿಷೇಶವಾಗಿ ಸಮಾಜದ ಮಹಿಳೆಯರಿಂದ ಲೋಕಕಲ್ಯಾಣಾರ್ಥಕ್ಕಾಗಿ ಮನೋವಾoಛಿತ ಫಲ ಸಿದ್ಧಿಗಾಗಿ 11,111 ಮೃತ್ತಿಕೆಯಿಂದ ಮಾಡಿದ ಭೂಲಿಂಗಗಳನ್ನು ಪ್ರತಿಷ್ಠಾಪನೆ ಮಾಡಿ ಅವುಗಳಿಗೆ ಶ್ರೀ ಶಂಭುಲಿಂಗೇಶ್ವರ ಶಾಸ್ತ್ರಿ ಯವರ ನೇತೃತ್ವದಲ್ಲಿ ಭಸ್ಮಾರ್ಚನೆ, ಶಿವ ಬಿಲ್ವಾರ್ಚನೆ, ಶಿವನಾಮವಳಿಯ ಜಪ ಮಾಡಿದರು. ಈ ಕಾರ್ಯಕ್ರಮವು ಭಾರಿ ವಿಜೃಂಭಣೆಯಿಂದ ಜರುಗಿತು. ಬಂದ ಭಕ್ತ ಮಹಿಳಾ ಮಾತೆಯರಿಗೆ ಸಮಾಜದ ಮಹಿಳೆಯರಿಂದ ಉಡಿ ತುಂಬಲಾಯಿತು.
11,111 ಭೂಲಿಂಗಗಳನ್ನು ಓಂಕಾರ, ಶಿವಲಿಂಗ, ತ್ರಿಶೂಲ, ಡಮರುಗ, ಸ್ವಸ್ಟಿಕ್, ಓಂ ನಮ:ಶಿವಾಯ ಎಂಬ ಕಲಾಕೃತಿಗಳಲ್ಲಿ ಜೋಡಿಸಿ ನೋಡುಗರ ಮನ ಸೆಳೆಯುವಂತಿತ್ತು. ವಿಶೇಷ ದರ್ಶನಕ್ಕಾಗಿ ಕೋಡಿಯಾಲ ಹೊಸಪೇಟೆ ಪುಣ್ಯಕೋಟಿ ಮಠದ ಶ್ರೀ ಜಗದೀಶ್ವರ ಮಹಾಸ್ವಾಮಿಗಳು, ಪ್ರಜಾಪಿತ ಭ್ರಹ್ಮಕುಮಾರಿ ಈಶ್ವರಿ ವಿಶ್ವವಿಧ್ಯಾಲಯದ ಶಿವದೇವಿ ಅಕ್ಕನವರು ಆಶೀರ್ವಚನ ನೀಡಿ ಮಹಿಳೆಯರ ಈ ಮಹತ್ಕಾರ್ಯಕ್ಕೆ ಷ್ಲಾಘನಿಯ ವ್ಯಕ್ತಪಡಿಸಿದರು. ಮಾಜಿ ಶಾಸಕರಾದ ಬಿ ಪಿ ಹರೀಶ್, ಬಿಜೆಪಿ ಜಿಲ್ಲಾ ಅಧ್ಯಕ್ಷರಾದ ಅನಗವಾಡಿ ವೀರೇಶ್, ಹರಿಹರ ಬಿಜೆಪಿ ಮುಖಂಡರಾದ ಚಂದ್ರಶೇಖರ್ ಪೂಜಾರ್, ನಗರಸಭೆ ಸದಸ್ಯರಾದ ರಜನಿ, ಮಾಜಿ ನಗರಸಭೆ ಅಧ್ಯಕ್ಷರಾದ ರೇವಣಸಿದ್ದಪ್ಪ ಮತ್ತು ನಗರಸಭೆ ಸದಸ್ಯರಾದ ಸಿದ್ದೇಶ್ ಆಗಮಿಸಿ ದರ್ಶನವನ್ನು ಪಡೆದರು. ಸಾರ್ವಜನಿಕರು ಸಹ ದರ್ಶನ ಪಡೆದು ಶಿವನ ಕೃಪೆಗೆ ಪಾತ್ರರಾದರು.
ಈ ಸಂದರ್ಭದಲ್ಲಿ ಸಮಾಜದ ಅಧ್ಯಕ್ಷರಾದ ಬಸವರಾಜ್ ಇಂಡಿ, ಗೌರವಾಧ್ಯಕ್ಷರಾದ ನಾಗರಾಜ್ ಭಂಡಾರಿ, ದೇವೇಂದ್ರಪ್ಪ ಮ್ಯಾಳ ಮುಖಂಡರುಗಳಾದ ಅಣ್ಣಪ್ಪ ಶ್ಯಾವಿ, ಶ್ರೀನಿವಾಸ್ ಇಂಡಿ, ಪುಟ್ಟಪ್ಪ ಬುಟ್ಟಾ, ಜಗನ್ನಾಥ್ ಬುಟ್ಟಾ, ನಾಗರಾಜ್ ಅಗಡಿ ,ಚಂದ್ರಪ್ಪ ಭಂಡಾರಿ, ಕೃಷ್ಣಮೂರ್ತಿ ಇಂಡಿ, ನಿಂಗರಾಜ್ ಡಿವಿಜಿ , ಮಂಜು ಗಡ್ಡದ್, ಗೋವಿಂದ್ ಗಡ್ಡದ್, ಕೋಟೇಶ್ ಭಂಡಾರಿ ಚಂದ್ರಶೇಖರ್ ಅಂಮ್ರದ್, ಚಂದ್ರು ಅಮ್ರದ್, ಹರೀಶ್ ಇಂಡಿ, ಮಹಿಳಾ ಪ್ರಮುಖರಾದ ಭಾರತಿ ಶ್ಯಾವಿ, ಅಮಿತಾ ಇಂಡಿ, ರೇಖಾ ಶ್ಯಾವಿ, ಮಂಜುಳಾ ಬುಟ್ಟಾ, ಸಾವಿತ್ರಮ್ಮ ಸಕ್ರೀಗಡ್ಡಿ, ಸ್ನೇಹ ಬಳ್ಳಾರಿ, ಲೀಲಾವತಿ, ಸುಜಾತಾ ಅಮ್ರದ್, ಮಧು ಅಮ್ರದ್, ಶೋಭಾ, ಹಾಗೂ ಬoಧುಗಳೆಲ್ಲರೂ ಉಪಸ್ಥಿತರಿದ್ದು ಮಹಾಶಿವರಾತ್ರಿ ಕಾರ್ಯಕ್ರಮವನ್ನು ಯಶಸ್ವಿ ಗೊಳಿಸಿದರು.