ಹಾಸನ,ಮಾರ್ಚ್,1 : ಉಕ್ರೇನ್ ಪ್ರಮುಖ ನಗರ ಖಾರ್ಕಿವ್ನಲ್ಲಿ ಹಾಸನದ ವಿದ್ಯಾರ್ಥಿನಿ ಸರಸ್ವತಿ ಮತ್ತು ದಾವಣಗೆರೆಯ ವಿನಯ್ ಸಿಲುಕಿದ್ದಾರೆ. ಪೋಷಕರಿಗೆ ಕರೆ ಮಾಡಿದ್ದ ಸರಸ್ವತಿ ಇಲ್ಲಿ ತಮ್ಮ ಪರಿಸ್ಥಿತಿಯನ್ನು ಪೋಷಕರಿಗೆ ವಿವರಿಸಿದ್ದಾರೆ. ಮಗಳ ಮಾತು ಕೇಳಿ ಪೋಷಕರು ತುಂಬಾ ಆತಂಕ ಗೊಂಡಿದ್ದಾರೆ ತನ್ನ ಮಗಳಿಗಾಗಿ ಕಣ್ಣೀರಿಟ್ಟರು. ಪಶ್ಚಿಮ ಗಡಿಗೆ ತೆರಳಲು ಯತ್ನಿಸಿದರೂ ಅವಕಾಶ ಸಾಧ್ಯವಾಗುತ್ತಿಲ್ಲ. ಬೆಳಿಗ್ಗೆ ನಾಲ್ಕು ಗಂಟೆಯಲ್ಲಿ ಬಾಂಬ್ ಶಬ್ದ ಕೇಳಿಸಿತು. ಬಂಕರ್ನಲ್ಲಿದ್ದ ನೂರು ಜನರ ಪೈಕಿ ಕೆಲವರು ಹೊರಗೆ ಹೊರಟಿದ್ದಾರೆ..ಉಕ್ರೇನ್ ಸೈನಿಕರು ನಮ್ಮ ಸ್ನೇಹಿತರ ಮೇಲೆ ಹಲ್ಲೆ ಮಾಡಿದ್ದಾರೆ. ಬಾಂಬ್ಗಳ ಸದ್ದು ಹೆಚ್ಚಾಗುತ್ತಿದೆ ಎಂದು ಸರಸ್ವತಿ ವಿಡಿಯೊ ಕಾಲ್ನಲ್ಲಿ ಅಲ್ಲಿಯ ಪರಿಸತ್ಥಿಯನ್ನು ಪೋಷಕರಿಗೆ ತಿಳಿಸಿದ್ದಾರೆ