ಕುಷ್ಟಗಿ,ಫೆ,20 :- ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಶರಣು ಬಿ ತಳ್ಳಿಕೇರಿಯವರು ಧಾರವಾಡ ಜಿಲ್ಲೆಯ ಕುಂದಗೋಳ ತಾಲೂಕಿನ ಯರಗುಪ್ಪಿಯಲ್ಲಿ ಅನುಮಾನಾಸ್ಪದವಾಗಿ ಕೊಲೆಯಾದ ಬೆಳಗಾವಿ ಜಿಲ್ಲೆಯ ವಲಸೆ ಕುರಿಗಾಹಿ ಲಕ್ಷ್ಮೀ ವಿಠ್ಠಲ್ ಕಳ್ಳಿಮನಿ(27) ಮೃತಪಟ್ಟ ಪಾರ್ಥಿವ ಶರೀರಕ್ಕೆ ಅಂತಿಮ ಶವಸಂಸ್ಕಾರ ನೆಡೆಸಲು ಕುಟುಂಬಸ್ಥರಿಗೆ ಸಾಂತ್ವಾನ ಹೇಳಿ ,ವೈಯಕ್ತಿಕವಾಗಿ ೨೫ ಸಾವಿರ ರೂಪಾಯಿ ಆರ್ಥಿಕ ಸಹಾಯ ಮಾಡಿ,ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೃಷ್ಣಕಾಂತ್ ರೊಂದಿಗೆ ಚರ್ಚಿಸಿ ,ತಕ್ಷಣವೇ ಆರೋಪಿಗಳನ್ನು ಬಂಧಿಸಿ, ಕುರಿಗಾರರಿಗೆ ಸೂಕ್ತ ಭದ್ರತೆ ನೀಡಬೇಕೆಂದು ಒತ್ತಾಯಿಸುವ ಮೂಲಕ ಮನವಿ ಸಲ್ಲಿಸಿ ಕುರಿಗಾರರ ಕುಟುಂಬಕ್ಕೆ ಧೈರ್ಯವನ್ನು ತುಂಬಿ ಎದರಬೇಡಿ ನಾವುಗಳು ಇದ್ದೇವೆ ನಿಮಗೆ ಆಸರೆಯಾಗಿ ನಿಲ್ಲುವದಕ್ಕೆ ಎಂದು ಧೈರ್ಯ ತುಂಬಿದ ಘಟನೆ ಧಾರವಾಡದಲ್ಲಿ ನೆಡೆದಿದೆ.
ಈ ಘಟನೆಗೆ ಸಂಭಂಧಿಸಿದಂತೆ ಮನವಿ ಸ್ವೀಕರಿಸಿದ ನಂತರ ಮಾತನಾಡಿದ ಧಾರವಾಡ ಪೋಲಿಸ್ ವರಿಷ್ಠಾಧಿಕಾರಿಗಳು ಕೂಡ ಸಾತ್ ನೀಡಿದ್ದು ಸೂಕ್ತ ತನಿಕೆ ನೆಡೆಸಿ ತಪ್ಪಿತಸ್ಥರ ಮೇಲೆ ಕೇಸ್ ಹಾಕಿ ಕುರಿಗಾಯಿ ಕುಟುಂಬಕ್ಕೆ ನ್ಯಾಯ ಕೊಡಿಸುವದಾಗಿ ಭರವಸೆ ನೀಡಿದ್ದಾರೆ. ಈ ಸಂದರ್ಭದಲ್ಲಿ ರಾಜ್ಯ ಬಿಜೆಪಿ ಯುವಮೋರ್ಚಾ ಪ್ರದಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಬಾಲಿಕಾಯಿ ,ಮುತ್ತಣ್ಣ, ಹನಮಂತ,ಮಣಿಕಂಠ ಶ್ಯಾಗೋಟಿ ಸೇರಿದಂತೆ ಕುರಿಗಾಯಿ ಕುಟುಂಬಸ್ಥರು ಉಪಸ್ಥಿತರಿದ್ದರು.