ಬೆಂಗಳೂರು, ಫೆ, 13 : ಕರ್ನಾಟಕ ಎಲೆಕ್ಟ್ರಾನಿಕ್ ವಾಹನಗಳ ತಾಣವಾಗಿ ಬೆಳವಣಿಗೆಯಾಗುತ್ತಿದ್ದು, ಈ ಬಾರಿಯ ಬಜೆಟ್ನಲ್ಲಿ ಎಲೆಕ್ಟ್ರಾನಿಕ್ ವಾಹನ ವಲಯದ ಉತ್ತೇಜನಕ್ಕೆ ವಿಶೇಷ ಅನುದಾನ ದೊರೆಯುವ ನಿರೀಕ್ಷೆ ಇದೆ ಎಂದು ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ಹೇಳಿದ್ದಾರೆ. ನಾಗರ ಭಾವಿಯಲ್ಲಿ ಎ2ಎಂ ಆಟೋ ಮೊಬೈಲ್ಸ್ ಪ್ರವೈಟ್ ಲಿಮಿಟೆಡ್ ಮತ್ತು ಎಸ್.ಟಿ. ಎಲೆಕ್ಟ್ರಿಕ್ ವಲಯದಲ್ಲಿ ಇದೇ ಮೊದಲ ಬಾರಿಗೆ ಬೈಕ್ ಗಳು, ಸ್ಕೂಟರ್ ಗಳ ವಾಹನಗಳ ಮಳಿಗೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಕೇಂದ್ರ ಬಜೆಟ್ನಲ್ಲಿ ಎಲೆಕ್ಟ್ರಾನಿಕ್ ವಾಹನಗಳ ಬಳಕೆಗೆ ವಿಶೇಷ ಉತ್ತೇಜನ ನೀಡಿದ್ದು, ಪ್ರತಿ ಐದು ಕಿಲೋ ಮೀಟರ್ ಗೆ ಚಾರ್ಜರ್ ಕೇಂದ್ರಗಳನ್ನು ಅಳವಡಿಸಲು ಪ್ರಸ್ತಾಪಿಸಲಾಗಿದೆ. ಇಂಧನ ಉಳಿತಾಯ ಹಾಗೂ ಪರಿಸರ ಉಳಿಸುವುದಕ್ಕಾಗಿ ಜನರು ಹೆಚ್ಚಿನ ಪ್ರಮಾಣದಲ್ಲಿ ಎಲೆಕ್ಟ್ರಾನಿಕ್ ವಾಹನಗಳ ಬಳಕೆಗೆ ಮುಂದಾಗಬೇಕು ಎಂದು ಕರೆ ನೀಡಿದರು
ಭಾರತದಲ್ಲಿ ಮಾಲೀನ್ಯ ಮಟ್ಟ ಮಿತಿ ಮೀರಿದ್ದು, ಇ-ಸಾರಿಗೆ ವ್ಯವಸ್ಥೆಯನ್ನು ಅಳವಡಿಸಿಕೊಳ್ಳದೇ ಪರ್ಯಾಯ ಮಾರ್ಗವೇ ಇಲ್ಲದಂತಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಜಗತ್ತು ಬೆಂಗಳೂರಿನತ್ತ ನೋಡುತ್ತಿದ್ದು, ಸಿಲಿಕಾನ್ ನಗರಿ ಎಲೆಕ್ಟ್ರಿಕ್ ವಾಹನಗಳನ್ನು ಅಳವಡಿಸಿಕೊಳ್ಳುತ್ತಿದೆ. ಇದಕ್ಕೆ ಪೂರಕವಾಗಿ ನಾಗರ ಭಾವಿಯಲ್ಲಿ ಎ2ಎಂ ಆಟೋ ಮೊಬೈಲ್ಸ್ ಮತ್ತು ಎಸ್.ಟಿ. ಎಲೆಕ್ಟ್ರಿಕ್ ವಾಹನಗಳ ಜತೆಗೆ ಶೀಘ್ರದಲ್ಲೇ ಬಳಕೆಯಲ್ಲಿರುವ ವಾಹನಗಳನ್ನು ಎಲೆಕ್ಟ್ರಿಕಲ್ ವಾಹನಗಳನ್ನಾಗಿ ಪರಿವರ್ತಿಸುವ ರಿಟ್ರೋಫಿಟ್ಟಿಂಗ್ ತಂತ್ರಜ್ಞಾವನ್ನು ಸಹ ಅಳವಡಿಸಲಾಗುತ್ತಿದೆ. ಇದು ಉತ್ತಮ ಬೆಳವಣಿಗೆ ಎಂದರು. ನಾಗರ ಭಾವಿಯಲ್ಲಿ ಎ2ಎಂ ಆಟೋ ಮೊಬೈಲ್ಸ್ ಪ್ರವೈಟ್ ಲಿಮಿಟೆಡ್ ಮತ್ತು ಎಸ್.ಟಿ. ಎಲೆಕ್ಟ್ರಿಕ್ ವಾಹನಗಳ ವ್ಯವಸ್ಥಾಪಕ ನಿರ್ದೇಶಕರಾದ ಡಾ, ಸೌಮ್ಯ ಮತ್ತು ಇತರ ಸಮಾನ ಮನಸ್ಕರ ತಂಡ ಪರಿಸರ ಸಮಸ್ಯೆಗಳನ್ನು ತಗ್ಗಿಸಲು ಕೇಂದ್ರ ಸರ್ಕಾರ ಎಲೆಕ್ಟ್ರಿಕಲ್ ವಾಹನಗಳನ್ನು [ಇವಿ] ಉತ್ತೇಜಿಸುತ್ತಿದೆ. ಎಲೆಕ್ಟ್ರಿಕಲ್ ವಾಹನಗಳು ಪಳೆಯುಳಿಕೆ ಇಂಧನ ಬಳಸುವ ವಾಹನಗಳನ್ನು ಬದಲಿಸಲಿದೆ. ಪೆಟ್ರೋಲ್ ವಾಹನಗಳನ್ನು ಎಲೆಕ್ಟ್ರಾನಿಕ್ ವಾಹನಗನ್ನಾಗಿ ಪರಿವರ್ತಿಸುವ ತಂತ್ರಜ್ಞಾನವನ್ನು ಸಹ ಅಳವಡಿಸಲಾಗುತ್ತಿದೆ.
ಸುದ್ದಿಗಾರರ ಜತೆ ಮಾತನಾಡಿದ ಡಾ. ಸೌಮ್ಯ, ಬೆಂಗಳೂರು ನಗರದಲ್ಲಿ ಎಲೆಕ್ಟ್ರಿಕಲ್ ವಾಹನಗಳಿಗೆ ಪೂರಕ ವಾತಾವರಣವನ್ನು ನಿರ್ಮಿಸುತ್ತಿದ್ದು, ಚಾರ್ಜಿಂಗ್ ಕೇಂದ್ರಗಳನ್ನು ಸ್ಥಾಪಿಸಲು ಸರ್ಕಾರ ವಿಪುಲ ಅವಕಾಶಗಳನ್ನು ಕಲ್ಪಿಸುತ್ತಿದೆ. ಕೇಂದ್ರ ಸರ್ಕಾರದ ಇ ವಾಹನಗಳ ನಿಯಮಗಳು ಸಹ ಎಲೆಕ್ಟ್ರಿಕ್ ವಾಹನಗಳಿಗೆ ಪೂರಕವಾಗಿದೆ. ಹಸಿರು ಭಾರತ ನಿರ್ಮಿಸುವ ಮತ್ತು ಮಾಲೀನ್ಯವನ್ನು ಶೂನ್ಯ ಮಟ್ಟಕ್ಕೆ ತಗ್ಗಿಸುವ ದಿಸೆಯಲ್ಲಿ ಎಲೆಕ್ಟ್ರಿಕಲ್ ವಾಹನಗಳು ಸಹಕಾರಿಯಾಗಲಿವೆ ಎಂದರು. ನಾಗರಭಾವಿಯ ಶೋರೂಮ್ ನಲ್ಲಿ ಭಾರತದ ಜನಪ್ರಿಯ ಮತ್ತು ಮೊದಲ ಕೊಮಾಕಿ ಎಲೆಕ್ಟ್ರಿಕ್ ಸ್ಕೂಟರ್ ಬ್ರ್ಯಾಂಡ್ ವಾಹನಗಳು ಇಲ್ಲಿ ಲಭ್ಯವಿದ್ದು, ಇದರ ಜತೆಗೆ ಅಸ್ತಿತ್ವದಲ್ಲಿರುವ ವಾಹನಗಳನ್ನು ಎಲೆಕ್ಟ್ರಿಕಲ್ ವಾಹನಗಳನ್ನಾಗಿ ಪರಿವರ್ತಿಸುವ ರಿಟ್ರೋಫಿಟ್ಟಿಂಗ್ ಸೇವೆಗಳನ್ನು ನೀಡುವುದು ಮುಂದಿನ ಉಪ ಕ್ರಮವಾಗಿದೆ ಎಂದರು.
ಎ2ಎಂ ಆಟೋ ಮೊಬೈಲ್ಸ್ ಮತ್ತು ಎಸ್.ಟಿ. ಎಲೆಕ್ಟ್ರಿಕ್ ವಾಹನಗಳ ವಿಶೇಷತೆ ಎಂದರೆ ಶೇ 90 ರಷ್ಟು ಭಾರತೀಯ ಉತ್ಪನ್ನಗಳಾಗಿದ್ದು, ಮೇಕ್ ಇನ್ ಇಂಡಿಯಾಗೆ ಆದ್ಯತೆ ನೀಡಲಾಗಿದೆ. ಪ್ರತಿಯೊಂದು ಚಾರ್ಜಿಂಗ್ ಗೆ 80 ರಿಂದ 280 ಕಿಲೋಮೀಟರ್ ಸಂಚರಿಸುವ, ಗಂಟೆಗೆ 90 ಕಿಲೋಮೀಟರ್ ವೇಗ, ಕೈಗೆಟುಕುವ ದರ, ಉತ್ತಮ ಮೈಲೇಜ್, ಬ್ಯಾಟರಿ ಹೊರತೆಗೆದು ಸುಲಭವಾಗಿ ಚಾರ್ಜಿಂಗ್ ಮಾಡುವ ಮತ್ತು ಈ ಶೋರೂಂನಲ್ಲಿ ಕಡಿಮೆ ವೆಚ್ಚದಲ್ಲಿ ವಾಹನಗಳ ಸರ್ವೀಸ್ ಮಾಡುವ ಅವಕಾಶಗಳನ್ನು ಕಲ್ಪಿಸಲಾಗಿದೆ. ಕಾರ್ಯಕ್ರಮದಲ್ಲಿ ಎಲ್ತೊರ್ ಎನರ್ಜಿ ಪ್ರವೈಟ್ ಲಿಮಿಟೆಡ್ ನ ಸಂಸ್ಥಾಪಕ ಮತ್ತು ವ್ಯವಸ್ಥಾಪಕ ನಿರ್ದೇಶಕ ಪಿ., ಸುಧಾಕರ ಬಾಬು, ಎಲ್ತೋರ್ ಎನರ್ಜಿ ಪ್ರವೈಟ್ ಲಿಮಿಟೆಡ್ ನ ಸಿಇಒ, ಸಿ.ಆರ್. ವಿಜಯ ಕುಮಾರ್, ನ್ಯಾಷನಲ್ ಫೆಡರೇಷನ್ ಆಫ್ ಬ್ಲೈಂಡ್ ಕರ್ನಾಟಕದ ಪ್ರಧಾನ ಕಾರ್ಯದರ್ಶಿ ಗೌತಮ್ ಪ್ರಕಾಶ್ ಅಗರ್ವಾಲಕ್, ಪ್ರಿಯಾ ಎಲೆಕ್ಟ್ರಿಕಲ್ಸ್ ನ ಪ್ರತಿನೀತ್ ರೊಡ್ರಿಗಸ್ ಮತ್ತು ಕೊಟ್ಟಿಗೆ ಪಾಳ್ಯದ ಮಾಜಿ ಪಾಲಿಕೆ ಸದಸ್ಯ ಜಿ. ಮೋಹನ್ ಕುಮಾರ್ ಮತ್ತಿತರರು ಉಪಸ್ಥಿತರಿದ್ದರು