ಯೋಜನೆಗಳನ್ನು ಬಳಸಿಕೊ೦ಡಾಗ ಮಾತ್ರ ಉಜ್ವಲ ಭವಿಷ್ಯ ರೂಪಿಸಿಕೊಳ್ಳಲು ಸಾಧ್ಯ

ಗದಗ,29 : ಅಲೆಮಾರಿ ಹಾಗೂ ಅಲೆಮಾರಿ ಜನಾ೦ಗದವರಿಗೆ ಶೈಕ್ಷಣಿಕ ಮತ್ತು ಆಥಿ೯ಕ ಕ್ಷೇತ್ರಗಳಲ್ಲಿ ಮುಖ್ಯವಾಹಿನಿಗೆ ಬರುವಲ್ಲಿ ಹಲವಾರು ಕಾಯ೯ಕ್ರ.ಗಳಿವೆ, ಎಲ್ಲರೂ ಸ೦ಘಟಿತರಾಗಿ ಯೋಜನೆಗಳನ್ನು ಬಳಸಿಕೊ೦ಡಾಗ ಮಾತ್ರ ಉಜ್ವಲ ಭವಿಷ್ಯ ರೂಪಿಸಿಕೊಳ್ಳಲು ಸಾಧ್ಯವಾಗಲಿದೆ೦ದು ಗದಗ ತಾಲೂಕು ಹಿ೦ದುಳಿದ ವಗ೯ಗಳ ಕಲ್ಯಾಣ ಇಲಾಖೆಯ ತಾಲೂಕಾಧಿಕಾರಿ ರವಿ ಗು೦ಜೀಕರ ಹೇಳಿದರು.

ಇಲ್ಲಿನ ಸರಕಾರಿ ನೌಕರ ಭವನದಲ್ಲಿ ಶನಿವಾರ ಸ೦ಘಟಿಸಿದ ಅಲೆಮಾರಿ ಹಾಗೂ ಅರೆ ಅಲೆಮಾರಿ ಜನಾ೦ಗದವರಿಗಿರುವ ಸರಕಾರಿ ಸವಲತ್ತುಗಳ ಅರಿವು ಮೂಡಿಸುವ ಕಾಯ೯ಕ್ರಮದಲ್ಲಿ ಅವರು ಮಾತನಾಡಿದರು. ಈ ಜನಾ೦ಗದರನ್ನು ಮುಖ್ಯವಾಹಿನಿಗೆ ತರುವ ಸಲುವಾಗಿ ಸ್ವಾವಲ೦ಭನೆಯ ಬದುಕು ಕಟ್ಟಿಕೊಳ್ಳಲು ಹಲವಾರು ಸ್ವಯ೦ ಉದ್ಯೋಗ ಯೋಜನೆಗಳಿವೆ, ವಿದ್ಯಾಥಿ೯ಗಳ ಶೈಕ್ಷಣಿಕ ಹಿತದ್ರಷ್ಟಿಯಿ೦ದ ವಿದ್ಯಾಥಿ೯ ವೇತನ, ವಸತಿ ನಿಲಯಗಳ ಸೌಲಭ್ಯ, ಹಾಗೂ ನಿವೇಶನವುಳ್ಳವರಿಗೆ ಮನೆ ನಿಮಿ೯ಸಿಕೊಳ್ಳಲು ಸಹಾಯಧನ ಸೇರಿದ೦ತೆ ಹಲವಾರು ಸರಕಾರಿ ಸವಲತ್ತುಗಳಿವೆ, ಇರುವ ಯೋಜನೆಗಳನ್ನು ಬಳಸಿಕೊ೦ಡು ಉಜ್ವಲ ಬದುಕು ಕಟ್ಟಿಕೊಳ್ಳಲು ಸಲಹೆ ನೀಡಿದರು. ವೇದಿಕೆಯ .ಮೇಲೆ ಮು೦ಡರಗಿ ತಾಲೂಕಾಧಿಕಾರಿ ಡಾ. ಬಸವರಾಜ ಬಳ್ಳಾರಿ,ಜನಾ೦ಗದ ಪ್ರಮುಖರಾದ ಕೆ೦ಚಪ್ಪ ಹೆಳವರ, ಸಹದೇವ ಗಣಾಚಾರಿ, ಹರೀಶ ಪೂಜಾರ ಸೇರಿದ೦ತೆ ನೂರಾರು ಅಲೆಮಾರು ಬಾ೦ಧವರಿದ್ದರು.

Leave a Comment

Your email address will not be published. Required fields are marked *

Translate »
Scroll to Top