ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ತುಮಕೂರು ಅಭಿವೃದ್ಧಿಗೆ ಶ್ರಮಿಸುತ್ತನೆ

ತುಮಕೂರು, ಜನವರಿ, 26 : ಮಾನವ ಸಂಪನ್ಮೂಲ ಒಳಗೊಂಡಂತೆ, ಕೃಷಿ ಹಾಗೂ ಕೈಗಾರಿಕಾ ಕ್ಷೇತ್ರದಲ್ಲಿ ಮುಂಚೂಣಿ ಯಲ್ಲಿರುವ ತುಮಕೂರು ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ, ಶ್ರಮಿಸುವುದಾಗಿ, ಜಿಲ್ಲಾ ಉಸ್ತುವಾರಿ ಹಾಗೂ ಗೃಹ ಸಚಿವ ಶ್ರೀ ಆರಗ ಜ್ಞಾನೇಂದ್ರ ರವರು ತಿಳಿಸಿದ್ದಾರೆ. ಜಿಲ್ಲಾ ಕೇಂದ್ರ ತುಮಕೂರು ನಗರದಲ್ಲಿ, 73ನೇ ಗಣರಜ್ಯೋತ್ಸವದಂದು, ರಾಷ್ಟ್ರ ಧ್ವಜಾರೋಹಣ ನೆರವೇರಿಸಿ, ಸುದ್ದಿಗಾರರೊಂದಿಗೆ, ಮಾತನಾಡಿದ ಸಚಿವರು, ಜಿಲ್ಲೆಯಲ್ಲಿ ಶಾಸಕರೂ ಸೇರಿದಂತೆ, ಎಲ್ಲಾ ಜನಪ್ರತಿನಿಧಿ ಗಳನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಅಭಿವೃದ್ಧಿಗೆ ಶ್ರಮಿಸುತ್ತೇನೆ ಎಂದರು. ಜಿಲ್ಲೆಯು ಕೃಷಿ, ಶಿಕ್ಷಣ ಕ್ಷೇತ್ರದಲ್ಲಿ ಈಗಾಗಲೇ ತನ್ನ ಛಾಪು ಮೂಡಿಸಿದ್ದು ಕೈಗಾರಿಕ ಕ್ಷೇತ್ರದಲ್ಲಿಯೂ ದಾಪುಗಾಲು ಇಡುತ್ತಿದೆ. ಇದಕ್ಕೆ ಪೂರಕವಾಗಿ ರಾಜ್ಯ ಸರಕಾರ ಮೂಲಸೌಕರ್ಯ ಗಳ ಅಭಿವೃದ್ಧಿಗೆ ಒತ್ತು ಕೊಡಲಾಗುವುದು, ಎಂದು ಹೇಳಿದರು. ಪ್ರಶ್ನೆ ಯೊಂದಕ್ಕೆ ಉತ್ತರಿಸಿದ ಸಚಿವರು, ಇದುವರೆಗೆ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಶ್ರೀ ಮಾಧು ಸ್ವಾಮಿಯವರು ನನ್ನ ಆತ್ಮೀಯ ಸ್ನೇಹಿತ ರು, ಹಾಗೂ ಅವರ ಮಾರ್ಗದರ್ಶನ ಪಡೆಯುತ್ತೇನೆ, ಎಂದರು.

ಸಂಪುಟದಲ್ಲಿ ಹಿರಿಯರಾಗಿರುವ ಶ್ರೀ ಮಾಧೂಸ್ವಾಮಿ ಹಾಗೂ ಶ್ರೀ ಅಶೋಕ್ ರವರಿಗೆ, ಮುಖ್ಯಮಂತ್ರಿ ಗಳು ಇನ್ನೂ ಹೆಚ್ಚಿನ ಜವಾಬ್ದಾರಿ ನಿರ್ವಹಣೆ ನೀಡುವ ಆಲೋಚನೆ ಇರಬಹುದು, ಎಂದರು. ಬಿಜೆಪಿ ಬಿಟ್ಟು ಕೆಲ ಶಾಸಕರು, ಕಾಂಗ್ರೆಸ್ ಸೇರುತ್ತಾರೆ ಎಂದು ಕಾಂಗ್ರೆಸ್ ನಾಯಕರ ಹೇಳಿಕೆ ಬಗ್ಗೆ ಕಿಡಿ ಕಾರಿದ, ಸಚಿವರು ” ಪಕ್ಷ ಬಿಡಲು ತಲೆ ಕೆಟ್ಟಿರಬೇಕಷ್ಟೆ” ಎಂದರು. ರಾಷ್ಟ್ರ ಮಟ್ಟದಲ್ಲಿ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿಯವರು ದೇಶಕ್ಕೆ ಸಮರ್ಥ ನಾಯಕತ್ವ ನೀಡುತ್ತಿದ್ದು, ಎಲ್ಲಾ ಕ್ಷೇತ್ರಗಳಲ್ಲೂ ರಾಷ್ಟ್ರ ಮುನ್ನಡೆ ಸಾಧಿಸುತ್ತಿದೆ, ಅದೇ ರೀತಿಯಲ್ಲಿ, ಮುಖ್ಯಮಂತ್ರಿ ಶ್ರೀ ಬಸವರಾಜ್ ಬೊಮ್ಮಾಯಿ ಅವರ ನಾಯಕತ್ವದಲ್ಲಿ ರಾಜ್ಯವೂ ಅಭಿವೃದ್ಧಿ ದೃಷ್ಠಿ ಯಲ್ಲಿ ಮುನ್ನಡೆ ಸಾಧಿಸುತ್ತಿದೆ, ಎಂದರು. ತುಮಕೂರು ನಗರ ಶಾಸಕ ಶ್ರೀ ಜ್ಯೋತಿ ಗಣೇಶ್ ಒಳಗೊಂಡಂತೆ ಇತರ ಹಿರಿಯ ನಾಯಕರೂ ಉಪಸ್ಥಿತ ರಿದ್ದರು.

Leave a Comment

Your email address will not be published. Required fields are marked *

Translate »
Scroll to Top