ರಾಯಾಚೂರು,ಜನೆವರಿ, 25- : ಇಂದು ಸರಕಾರಿ ಪ್ರೌಢಶಾಲೆ, ಚಳಗೇರಾದಲ್ಲಿ “ಮತದಾರರ ಸಾಕ್ಷರತಾ ಕ್ಲಬ್” ಆಶ್ರಯದಲ್ಲಿ. ಪ್ರೌಢ ಶಾಲಾ ಮುಖ್ಯೋಪಾಧ್ಯಾಯರು, ಶಿಕ್ಷಕರು ಹಾಗೂ ವಿದ್ಯಾರ್ಥಿಗಳಿಗೆ ಮತದಾರರ ಕ್ಲಬ್ ನ ಸಂಚಾಲಕರಾದ “ಶ್ರೀಮತಿ ವಿಶಾಲಾಕ್ಷಮ್ಮ” “ಪ್ರತಿಜ್ಞಾವಿಧಿ” ಬೋಧಿಸಿದರು. ಮತದಾರರ ದಿನಾಚರಣೆ ಬಗ್ಗೆ ಜಿಲ್ಲಾ ಸಂಪನ್ಮೂಲ ವ್ಯಕ್ತಿ “ಅರವಿಂದಕುಮಾರ ದೇಸಾಯಿ” ಪ್ರಸ್ತಾವಿಕವಾಗಿ ಮಾತನಾಡಿದರು..
ಶಿಕ್ಷಕರಾದ ಶಾಕೀರ್ ಬಾಬಾ, ಶರಣಪ್ಪ ಪರಸಾಪುರ, ಬಸವರಾಜ ಪಿ, ಸಿದ್ದನಗೌಡ ಪೊಲೀಸ್ ಪಾಟೀಲ್, ಪ್ರಶಿಕ್ಷಣಾರ್ಥಿಗಳಾದ ಲಾಲ್ ಮಹಮ್ಮದ್ ಅತ್ತಾರ್, ಪೂರ್ಣಿಮಾ ಅರಹುಣಸಿ, ಮಂಜುಳಾ ಗುರುವಿನ ಇದ್ದರು. ಅಧ್ಯಕ್ಷತೆಯನ್ನು “ರಾಯಪ್ಪ ಹೂಗಾರ” ವಹಿಸಿ ಮತದಾರರ ದಿನಾಚರಣೆಯ ಮಹತ್ವ ತಿಳಿಸಿದರು.