ಕುಷ್ಟಗಿ : ತಾಲೂಕಿನಲ್ಲಿ ಹುಲುಸಾಗಿ ಬೆಳೆದ ಮುಂಗಾರು ಹಂಗಾಮಿನ ತೊಗರಿ ಬೆಳೆ ರೈತರು ಕೊಯ್ಲು ಮಾಡಿ ಬೆಳೆಗಳು ಕೈಗೆ ಬರುವ ಹಂತದಲ್ಲಿ ಇತ್ತು ಆದರೆ ಕೈಗೆ ಬಂತು ತುತ್ತು ಬಾಯಿಗೆ ಬರದಂತೆ ಮಳೆರಾಯನ ಆರ್ಭಟಕ್ಕೆ
ಬಂಗಾಳಕೊಳ್ಳಿಯಲ್ಲಿ ವಾಯುಭಾರ ಕುಸಿತವಾದ ಹಿನ್ನಲೆ ನಿರಂತರ ಸುರಿದ ಮಳೆಗೆ ತೊಗರಿ ಬೆಳೆ ಮತ್ತು ಕಡಲೆ ಬೆಳೆ ಸಂಪೂರ್ಣ ಹಾಳಾಗಿ ಹೋಗಿದ್ದರಿಂದ ಕುಷ್ಟಗಿ ತಾಲೂಕಿನ ತಳುಗೇರಿ ಗ್ರಾಮದ ತೊಗರಿ ಹೊಲಕ್ಕೆ ಶಾಸಕ ಅಮರೇಗೌಡ ಪಾಟೀಲ ಬಯ್ಯಾಪೂರ ಭೇಟಿ ನೀಡಿ ಮಳೆಗೆ ನೆಂದ ತೊಗರಿ ಬೆಳೆಗನ್ನು ಹಾಗೂ ಗಿಡದಲ್ಲೇ ಮೊಳಕೆ ಹೊಡೆದು ಸಸಿ ಆಯ್ದ ತೊಗರಿ ಹೊಲವನ್ನು ಪರಿಶೀಲನೆ ಮಾಡಿದರು.