ಚಿಕ್ಕಬಳ್ಳಾಪುರ : ಬಾಗೇಪಲ್ಲಿ ತಾಲ್ಲೂಕಿನ ಗೂಳೂರು ಬಳಿ ನಡೆಯುತ್ತಿರುವ ಕಲ್ಲುಗಣಿಗಾರಿಕೆಯಿಂದ ಕಲ್ಲುದಿಮ್ಮಿಗಳು ತುಂಬಿದ ಲಾರಿಗಳ ಸಂಚಾರ ನಡೆಯುತ್ತಿದ್ದು, ಇದಕ್ಕೆ ಗ್ರಾಮಸ್ಥರ ವಿರೋಧ ವ್ಯಕ್ತಪಡಿಸಿ ಲಾರಿಗಳ ಸಂಚಾರ ನಿಲ್ಲಿಸುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ಜಿಲೆಟಿನ್ ಕಡ್ಡಿಗಳ ಸ್ಪೋಟ ಮತ್ತು ಲಾರಿಗಳ ಹಾವಳಿಗೆ ಗ್ರಾಮಸ್ಥರು ಹೈರಾಣಾಗಿದ್ದು, ಗ್ರಾಮಸ್ಥರು ತಮ್ಮ ಜೀವವನ್ನು ಕೈಯಲ್ಲಿ ಹಿಡಿದು ಜೀವನ ನಡೆಸುವಂತಾಗಿದೆ. ಈ ಭಾಗದಲ್ಲಿ ನಿತ್ಯ ಕಲ್ಲುದಿಮ್ಮಿಗಳು ತುಂಬಿದ ಲಾರಿಗಳು ಓಡಾಡುತ್ತಿದ್ದು, ಇದರಿಂದ ಗ್ರಾಮಸ್ಥರು ಕಿರುಕುಳ ಅನುಭವಿಸುವಂತಾಗಿದೆ
ಅಲ್ಲದೆ ಕಲ್ಲು ಗಣಿಗಾರಿಕೆಯಿಂದ ಬರುತ್ತಿರುವ ದೂಳಿನಿಂದ ಬೆಳೆ ನಾಶವಾಗುತ್ತಿದ್ದು, ರಸ್ತೆಗಳ ಸುಸ್ಥಿತಿಯಿಂದ ಜನರು ತತ್ತರವಾಗುತ್ತಿದ್ದಾರೆ. ಈ ನಿಟ್ಟಿನಲ್ಲಿ ಅಕ್ರಮ ಕಲ್ಲುಗಣಿಗಾರಿಕೆ ನಿಲ್ಲಿಸಬೇಕೆಂದು ಗ್ರಾಮಗಳ ಜನರ ಆಗ್ರಹ ವ್ಯಕ್ತಪಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಬಾಗೇಪಲ್ಲಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದು, ಪೊಲೀಸರ ಸರ್ಪಗಾವಲಿನಲ್ಲಿ ಲಾರಿಗಳನ್ನು ಕಳುಹಿಸಲಾಯಿತು. ಪೊಲೀಸರ ವರ್ತನೆಗೆ ಬೇಸತ್ತ ಗ್ರಾಮಸ್ಥರು ವಿರೋಧ ವ್ಯಕ್ತ ಪಡಿಸಿದ್ದಾರೆ.
ವರದಿ: ಮಾನಸ್