ಮರಿಯಮ್ಮನಹಳ್ಳಿ: ನಟ ಪುನೀತ್ ರಾಜ್ ಕುಮಾರ್ ನಿಧನದ ಹಿನ್ನಲೆ ಮರಿಯಮ್ಮನಹಳ್ಳಿಯಲ್ಲಿ ನೂರಾರು ಪುನೀತ್ ಅಭಿಮಾನಿಗಳು ಮೊಂಬತ್ತಿ ಹಿಡಿದು ಮುಖ್ಯಬೀದಿಯಲ್ಲಿ ಸಾಗುವ ಮೂಲಕ ಸಂತಾಪ ಸೂಚಿಸಿದರು. ಇದೇ ವೇಳೆಯಲ್ಲಿ ಯುವ ಅಭಿಮಾನಿಗಳು ಅಳುತ್ತ ಪುನೀತ್ ರಾಜ್‍ಕುಮಾರ್ ರವರ ಭಾವಚಿತ್ರವನ್ನು ಹಿಡಿದುಕೊಂಡು ಬಿಕ್ಕಿ, ಬಿಕ್ಕಿ ಅತ್ತು ಬಾಸ್ ಇಷ್ಟು ಬೇಗ ನಮ್ಮನ್ನು ಬಿಟ್ಟೋದ್ರಾ ಎಂದು ಗೋಳಾಡಿದ ಪ್ರಸಂಗ ನಡೆಯಿತು. ನಂತರ ಪಟ್ಟಣದ ನಾಣಿಕೆರೆ ವೃತ್ತದಲ್ಲಿ ಪುನೀತ್ ರಾಜ್‍ಕುಮಾರ್ ಅವರ ಭಾವಚಿತ್ರಕ್ಕೆ ಹೂವಿನ ಮಾಲೆ ಹಾಕಿ. ದೀಪ ಬಳಗಿ ಪುನೀತ್ ರವರ ಆತ್ಮಕ್ಕೆ ಶಾಂತಿ ಸಿಗಲೆಂದು ಸಂತಾಪ ಸೂಚಿಸಿದರು. ನಂತರ ಜೈ, ಪುನೀತ್ ರಾಜ್ ಕುಮಾರ್ ಗೆ ಜೈ, ಯುವರತ್ಮಗೆ ಜೈ ಎಂದು ಘೋಷಣೆಗಳನ್ನು ಕೂಗುತ್ತಿದ್ದರು. ನೆಚ್ಚಿನ ನಟನ ಅಗಲಿಕೆಯಿಂದ ನೊಂದ ಅಭಿಮಾನಿಗಳು ಯುವರತ್ನನನ್ನು ನೆನೆದು ಗೋಳಾಡಿದರು. ನಂತರ ಕರವೇ ಅಧ್ಯಕ್ಷ ಈ.ರಮೇಶ್ ಬ್ಯಾಲಕುಂದಿ ಮಾತನಾಡಿ, ಪುನೀತ್ ರಾಜ್‍ಕುಮಾರ್ ರವರು ಕನ್ನಡ ಚಿತ್ರರಂಗದ ಯೂತ್ ಐಕಾನ್ ಎಂದೇ ಪ್ರಸಿದ್ಧರಾದವರು 46 ವರ್ಷ ಚಿತ್ರರಂಗದಲ್ಲಿ ಬೆಳಗಿದ ಅದ್ಭುತ ನಟನೊಬ್ಬನನ್ನು ಕಳೆದುಕೊಂಡು ಕನ್ನಡ ಚಿತ್ರರಂಗ ಮತ್ತು ಕರ್ನಾಟಕ ನಿಜವಾಗಿಯೂ ಬಡವಾಗಿದೆ.
ಜನ್ಮಜಾತ ಪ್ರತಿಭೆಯಿಂದ ಪಾತ್ರಗಳಿಗೆ ಜೀವ ತುಂಬಿದ್ದ ಪುನೀತ್ ರಾಜ್ ಕುಮಾರ್ ಅವರು ಮರೆಯಾಗಿರುವುದು ಯಾರಿಗೂ ನಂಬಲಸಾಧ್ಯವಾದದ್ದು. ಬಾಲನಟನಾಗಿ 1985 ರಲ್ಲಿ ‘ಬೆಟ್ಟದ ಹೂವು’ ಚಿತ್ರದ ಮುಗ್ಧ ರಾಮು ಪಾತ್ರಕ್ಕಾಗಿ ಪುನೀತ್ ಅವರು 33 ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯಲ್ಲಿ ಅತ್ಯುತ್ತಮ ಬಾಲ ಕಲಾವಿದ ಪ್ರಶಸ್ತಿಯನ್ನು ಪಡೆದು ತಾನೊಬ್ಬ ಭವಿಷ್ಯದ ದೊಡ್ಡ ಪ್ರತಿಭೆ ಎನ್ನುವುದನ್ನು ತೋರಿದ್ದರು. 2002ರಲ್ಲಿ ಅಪ್ಪು ಚಿತ್ರದ ಮೂಲಕ ನಾಯಕನಾಗಿ ಭರ್ಜರಿ ಪುನರಾಗಮನ ಮಾಡಿದ್ದರು. ಎಂದು ಹೇಳಿದರು. ಇದೇ ಸಂದರ್ಭದಲ್ಲಿ ಪಟ್ಟಣದಲ್ಲಿ ಸ್ವಲ್ಪ ಹೊತ್ತು ಟ್ರಾಫಿಕ್ ಜಾಮ್ ಕೂಡ ಆಗಿತ್ತು. ಪಟ್ಟಣದ ಪುನೀತ್ ರಾಜ್‍ಕುಮಾರ್ ಅಭಿಮಾನಿಗಳಿಗೆ ಪಟ್ಟಣ ಪೊಲೀಸರು ಶಾಂತಿಯುತವಾಗಿ ಸಂತಾಪ ಸೂಚಿಸಿ ಎಂದು ಪಿ.ಎಸ್.ಐ.ಹನುಮಂತಪ್ಪ ತಳವಾರ್, ಪಿ.ಎಸ್.ಐ.ಮೀನಾಕ್ಷಿ ಹಾಗೂ ಸಿಬ್ಬಂದಿಗಳು ಮನವಿ ಮಾಡಿದರು.
ಈ ಸಂಧರ್ಭದಲ್ಲಿ ಗುಂಡಾ ಸೋಮಣ್ಣ, ಶ್ರೀನಿವಾಸ, ಪ್ರಕಾಶ್, ಅಕ್ಷಯ್, ಮಂಜುನಾಥ, ದುರುಗಪ್ಪ, ನಾಗರಾಜ, ರವಿಕಿರಣ್, ವೆಂಕಟೇಶ, ಪ್ರವೀಣ್, ವಿಷ್ಣು, ಮಂಜು ಮತ್ತು ಪುನೀತ್ ರಾಜ್‍ಕುಮಾರ್ ಯುವ ಅಭಿಮಾನಿಗಳು ಇತರರಿದ್ದರು.