ದೇವನಹಳ್ಳಿ: ಕರೋನ ಸಾಂಕ್ರಾಮಿಕ ರೋಗ ನಿರ್ಮೂಲನೆ ಗೊಳಿಸುವಲ್ಲಿ ಆರೋಗ್ಯ ಇಲಾಖೆಯವರು ಕಾಲ ಕಾಲಕ್ಕೆ ನೀಡುವ ಸಲಹೆ ಮತ್ತು ಸೂಚನೆಗಳನ್ನು ನಾವು ಕಡ್ಡಾಯವಾಗಿ ಮತ್ತು ಕ್ರಮಬದ್ಧವಾಗಿ ಅನುಸರಿಸ ಬೇಕಾಗಿದೆಯೆಂದು ಮಂಡಿಬೆಲೆ ಗ್ರಾಮ ಪಂಚಾಯಿತಿಯ ದೊಡ್ಡ ತತ್ತ ಮಂಗಲ ಗ್ರಾಮ ಪಂಚಾಯಿತಿ ಸದಸ್ಯೆ ಮಂಜುಳಾ ರಮೇಶ್ ತಿಳಿಸಿದರು. ದೇವನಹಳ್ಳಿ ತಾಲ್ಲೂಕು ದೊಡ್ಡ ತತ್ತಮಂಗಲ ಗ್ರಾಮದ ನಮ್ಮೂರ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠ ಶಾಲೆಯ ಆವರಣದಲ್ಲಿ ಭಾರತ ಸರ್ಕಾರದ ಯುವಜನ ಸೇವಾ ಮತ್ತು ಕ್ರೀಡಾ ಸಚಿವಾಲಯದ ಬೆಂಗಳೂರು ಗ್ರಾಮಾಂತರ ಜಿಲ್ಲಾ ನೆಹರು ಯುವ ಕೇಂದ್ರ, ವಿಕ್ಟರಿ ಯುವಕ ಸಂಘ ವಿಜಯಪುರ ಇವರಗಳ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಲಾದ ಕೋವಿಡ್-19 ವಿರುದ್ಧ ಹೋರಾಡುವುದು ಹಾಗೂ ಸಾಮಾಜಿಕ ಜಾಗೃತಿ ಮತ್ತು ಕ್ರಿಯಾಶೀಲ ಅಭಿಯಾನದ ವಾರ್ಷಿಕ ಕಾರ್ಯಕ್ರಮಗಳನ್ನು ಉದ್ಘಾಟಿಸಿ ಮಾತನಾಡಿ ನಮ್ಮನ್ನು ಮತ್ತು ಇತರರನ್ನು ನಾವು ಸದಾ ರಕ್ಷಿಸಿಕೊಳ್ಳಲು ಜನ ಸಂದಣಿ ಯಿಂದ ದೂರ ಇರಬೇಕು ಮತ್ತು ನಾವು ಕೆಮ್ಮುವಾಗ ಮತ್ತು ಸೀನುವಾಗ ಬಳಸುತ್ತಿರುವ ಮುಖಕ್ಕೆ ಧರಿಸುವ ಮಾಸ್ಕ್ ಗಳನ್ನು ಸರಿಯಾಗಿ ಉಪಯೋಗಿಸಬೇಕು ಇದರಿಂದ ಕರೋನ ವೈರಸ್ ಒಬ್ಬರಿಂದ ಮತ್ತೊಬ್ಬರಿಗೆ ಹರಡುವಿಕೆಯನ್ನು ತಡೆಗಟ್ಟುವಲ್ಲಿ ಪ್ರಮುಖ ಪಾತ್ರ ವಹಿಸಲಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ರಾಷ್ಟ್ರೀಯ ಯುವ ಯೋಜನೆಯ ರಾಜ್ಯ ಸಂಯೋಜಕ ಡಾ. ವಿ. ಪ್ರಶಾಂತ ಯುವ ಸಂಘಟನೆಗಳು ಈ ಸಾಂಕ್ರಾಮಿಕ ಕಾಯಿಲೆ ಬಗ್ಗೆ ನಾವು ಮೊದಲು ಜನಸಾಮಾನ್ಯರಿಗೆ ಜಾಗೃತಿ ಮೂಡಿಸಬೇಕು ಹಾಗೂ ಇದರೊಂದಿಗೆ ಉತ್ತಮ ಆಹಾರ ಸೇವನೆ, ಯೋಗಾಭ್ಯಾಸ ದೊಂದಿಗೆ ಈ ಮಾರಣಾಂತಿಕ ಸೋಂಕಿನಿಂದ ದೂರವಿರಬೇಕೆಂದು. ಈ ಕಾರ್ಯಕ್ರಮದ ಅಂಗವಾಗಿ ವ್ಯಾಕ್ಸಿನೇಷನ್ ಬಗ್ಗೆ ಹರಿವು, ಕೈತೊಳೆಯುವ ವಿಧಾನಗಳ, ಯುವಕ ಸಂಘ ಯುವತಿ ಮಂಡಳಿಗಳ ಪದಾಧಿಕಾರಿಗಳಿಗೆ ಹಾಗೂ ಎನ್ಎಸ್ಎಸ್ ಸ್ವಯಂಸೇವಕರಿಗೆ ಕರೋನಾ ನಿರ್ಮೂಲನೆಯ ಬಗ್ಗೆ ತರಬೇತಿ ಹಾಗೂ ವಿವಿಧ ಸಂಘ-ಸಂಸ್ಥೆಗಳ ಯುವ ಸ್ವಯಂ ಸೇವಕರಿಗೆ ಕರೋನ ವಾರಿಯರ್ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು. ಕಾರ್ಯಕ್ರಮದ ಉಪಸ್ಥಿತಿಯಲ್ಲಿ ಎಂಟಿ ಶಿಕ್ಷಣ ಸಂಸ್ಥೆಗಳ ವ್ಯವಸ್ಥಾಪಕ ನಿರ್ದೇಶಕ ವಿಜಯ್ ಕುಮಾರ್, ದೊಡ್ಡ ತತ್ತ ಮಂಗಲ ಗ್ರಾಮದ ಯುವ ಮುಖಂಡ ಲೋಕೇಶ್, ಎನ್ಎಸ್ಎಸ್ ಸ್ವಯಂ ಸೇವಕರಾದ ಬಿ.ಎನ್.ಹೇಮಂತ್ ಗೌಡ, ಮಹಂತ್, ಆರ್ ಲಿಖಿತ್,ರವಿಕುಮಾರ್ ಹಾಗೂ ದೇವನಹಳ್ಳಿ ತಾಲೂಕಿನ ನೊಂದಾಯಿತ ಯುವಕ ಸಂಘ, ಯುವತಿ ಮಂಡಳಿಗಳ ಪದಾಧಿಕಾರಿಗಳು ಮತ್ತು ದೊಡ್ಡ ತತ್ತ ಮಂಗಲ ಗ್ರಾಮದ ಗ್ರಾಮಸ್ಥರು ಹಾಜರಿದ್ದರು.