ಮನು ಕುಲಕ್ಕೆ ಕಂಟಕ ಈ ಕುಲಾಂತರಿ ತಳಿ – ಅಂಚೆ ಕೊಟ್ರೇಶ್

ಕರ್ನಾಟಕ ರಾಜ್ಯದ ರೈತರಿಗೆ ಹಾಗೂ ಕನ್ನಡದ ಜನತೆಗೆ ವಿಷ ಉಣ್ಣಿಸುವ ಕುಲಾಂತರಿ ತಳಿಗಳ ಹರಿಕಾರರಾದ ಬಹುರಾಷ್ಟ್ರೀಯ ಕಂಪನಿಗಳಿಗೆ ಕರ್ನಾಟಕ ಸರ್ಕಾರವು (ಓಔಅ) ನೋ ಅಬ್ಜೆಕ್ಷನ್ ಸರ್ಟಿಫಿಕೇಟ್ ಕೊಡಬಾರದು ಎಂದು “ಸಾವಯವ ರೈತ ಸ್ವಾಭಿಮಾನಿ ರೈತ “ಎನ್ನುವ ಧ್ಯೇಯವಾಕ್ಯದಡಿ ಯಲ್ಲಿ ಸ್ವಾಭಿಮಾನಿ ರೈತ ಅಂಚೆ ಕೊಟ್ರೇಶ್ ಅವರು ಕರ್ನಾಟಕ ಸರ್ಕಾರದ ಪ್ರಧಾನ ಕಾರ್ಯದರ್ಶಿಗಳಿಗೆ ಖಾರವಾಗಿ ಪತ್ರ ಬರೆದಿದ್ದಾರೆ. ಕುಲಾಂತರಿ ತಳಿ ಎನ್ನುವುದು ಪ್ರಕೃತಿ ಸೃಷ್ಟಿಗೆ ಸವಾಲು ಹಾಕುವ ಕೆಲಸ, ಮೀನಿನ ಗುಣ ಪಡೆದ ನೀರಲ್ಲಿ ಬೆಳೆಯುವ ಟೊಮೊಟೊ, ಮಿಂಚು ಹುಳುವಿನ ಜೀನ್ ಸೇರಿಸಿ ಕತ್ತಲಲ್ಲಿ ಮಿನುಗುವ ತಂಬಾಕಿನ ಗಿಡ, ತಿಂಗಳ ಕಾಲ ಕೆಡದೆ ಉಳಿಯುವ ಆಲೂಗಡ್ಡೆ, ಮಣ್ಣಿನಲ್ಲಿರುವ ವಿಷಕಾರಿ ಏಕಾಣುಜೀವಿಯ ತಳಿ ಸೂತ್ರವನ್ನು ಕತ್ತರಿಸಿ ಬದನೆಗೆ ಸೇರಿಸಿ ಬಿಟಿ ಬದನೆ ಹೀಗೆಲ್ಲಾ ತರಕಾರಿಗಳಿಗೆ ಪ್ರಾಣಿಯ ಜೀನ್ಸ್ ಗಳನ್ನು ಹಾಕಿ ಕುಲಗೆಡಿಸುವ ಕುಲಾಂತರಿ ತಳಿ ತರುವ ವಿದೇಶಿ ಕಂಪನಿಗಳನ್ನು ಕರ್ನಾಟಕದಿಂದ ಹಾಗೂ ಭಾರತ ದೇಶದಿಂದ ಓಡಿಸಬೇಕೆಂದು ಖಾರವಾಗಿ ಅಂಚೆ ಕೊಟ್ರೇಶ್ ತಮ್ಮ ಪತ್ರದಲ್ಲಿ ಪ್ರತಿಕ್ರಿಯಿಸಿದ್ದಾರೆ, 1982ರಲ್ಲಿ ಮೊದಲ ನಿರೋಧಕ ತಂಬಾಕು ಗಿಡವು ಮೊದಲ ಕುಲಾಂತರಿ ಬೆಳೆಯಾಗಿದೆ. ಇದರ ಮೊದಲ ಪ್ರಾಯೋಗಿಕ ಪರೀಕ್ಷೆ ಫ್ರಾನ್ಸ್, ಯು.ಎಸ್.ಎ ನಲ್ಲಿ 1986ರಲ್ಲಿ ನಡೆಯಿತು. ಚೀನಾ ದೇಶವು ವೈರಾಣ ನಿರೋಧಕ ತಂಬಾಕು ಗಿಡವನ್ನು 1921ರಲ್ಲಿ ಮಾರುಕಟ್ಟೆಗೆ ಪರಿಚಯಿಸಿ ಮೊದಲ ಬಾರಿಗೆ ಕುಲಾಂತರಿ ಬೆಳೆಗಳನ್ನು ವ್ಯಾಪಾರೀಕರಣ ಮಾಡಿತು. ಮತ್ತು ಈ ಬೆಳೆಯನ್ನು 1997ರಲ್ಲಿ ಹಿಂತೆಗೆದುಕೊಂಡಿತು. ಮೊದಲ ಕುಲಾಂತರಿ ಬೆಳೆಯು ವ್ಯಾಪಾರಕ್ಕಾಗಿ ಅನುಮೋದನೆಗೊಂಡಿದ್ದು 1997 ರ ಯುನೈಟೆಡ್ ಸ್ಟೇಟ್ಸ್ ನಲ್ಲಿ , ಪ್ರಕೃತಿ ತನ್ನ ಕೆಲಸವನ್ನು ತಾನೆ ಮಾಡುತ್ತದೆ, ತನ್ನ ಮಡಿಲಲ್ಲಿರುವ ಎಲ್ಲ ಜೀವಿಗಳಿಗೆ ಬೇಕಾದ ಸವಲತ್ತನ್ನು ಅದೇ ನೀಡಿದೆ, ಆದರೆ ಈ ಜೀವಿಗಳಲ್ಲಿ ಅತಿ ಬುದ್ಧಿ ಇರುವ ಮಾನವ ಮಾತ್ರ ಪ್ರಕೃತಿಗೆ ವಿರೋಧವಾದ ಕೆಲಸಕ್ಕೆ ಕೈ ಹಾಕುತ್ತಾನೆ ಸೃಷ್ಟಿಕಾರ್ಯ ಎನ್ನುವುದು ಗಂಡು-ಹೆಣ್ಣಿನ ಸಮ್ಮಿಲನದಿಂದ ಆಗಬೇಕೇ ಹೊರತು ಇದಕ್ಕೆ ವಿರುದ್ಧವಾದ ಕ್ರಿಯೆಯೇ ಕುಲಾಂತರಿ ಎಂದು ಅಂಚೆ ಕೊಟ್ರೇಶ್ ತಮ್ಮ ಪತ್ರದಲ್ಲಿ ಪ್ರತಿಕ್ರಿಯಿಸಿದ್ದಾರೆ, ಒಂದು ಬೆಳೆಗೆ ಒಂದು ಕುಲ ಎನ್ನುವ ತತ್ವ ಇದೆ, ವಂಶಾಭಿವೃದ್ಧಿ ಎನ್ನುವ ಕಾರ್ಯ ಕುಲಾಂತರಿಯಲ್ಲಿಲ್ಲ , ಅಲ್ಲದೆ ಆಲೂಗಡ್ಡೆ ಟಮೋಟೊ ಬದನೆ ಸಾಸುವೆ ಬಟಾಣಿ ಮುಂತಾದ ತರಕಾರಿ ಸಸ್ಯಗಳಿಗೆ ಅನ್ಯ ಕುಲದ ಜೇಡ ಹಂದಿ ಮಿಂಚುಹುಳ ಮುಂತಾದ ಜೀವಿಯ ತಳಿ ಸೂತ್ರಗಳನ್ನ ಸೇರಿಸಿ ಸೃಷ್ಟಿಯಾದ ಸಸ್ಯಗಳೇ ಈ ಕುಲಾಂತರಿ ಸಸ್ಯಗಳು , ಇದರಿಂದ ಕರ್ನಾಟಕದ ಜನತೆಯ ಆರೋಗ್ಯ ಕೆಡುವುದಲ್ಲದೆ ಕರ್ನಾಟಕ ರೈತರ ಆತ್ಮಹತ್ಯೆಗಳು ಹೆಚ್ಚಾಗುತ್ತಿವೆ ಎಂದು ಅಂಚೆ ಕೊಟ್ರೇಶ್ ಅವರು ತಮ್ಮ ಪತ್ರದಲ್ಲಿ ಪ್ರತಿಕ್ರಿಯಿಸಿದ್ದಾರೆ , ಕಾಡಿ­ನಲ್ಲಿ ಇರುವ ಬದ­ನೆ­ಯನ್ನು ಹಾಗೇ ತಿಂದರೆ ಅದು ಪ್ರಕೃತಿ. ಕಾಡಿನ ಬದ­ನೆಗೆ ನಾಡ ಬದ­ನೆ­ಯನ್ನು ಸೇರಿಸಿ ಅದ­ಕ್ಕೊಂದು ಸಂಸ್ಕಾರ ನೀಡಿ ತಿಂದರೆ ಅದು ಸಂಸ್ಕೃತಿ. ಇವೆ­ರಡು ಬಿಟ್ಟು ಮತ್ತೊಂದು ಇದೆ, ಇರುವ ಬದ­ನೆಗೆ ಯಾವುದೋ ಜೀವಿಯ ಜೀನ್‌ ತಂದು ಸೇರಿಸಿ, ಅದನ್ನು ಮಾರ್ಪ­ಡಿಸಿ ಅದು ಮುಂದೆಂದು ತನ್ನ ಸಂತಾ­ನ­ವನ್ನು ಪಡೆ­ಯ­ದಿ­ರುವ ಹಾಗೇ ಮಾಡು­ವುದು ವಿಕೃತಿ. ಇದನ್ನು ಇಂದು ಬಹು­ರಾ­ಷ್ಟ್ರೀಯ ಬೀಜ ಕಂಪ­ನಿ­ಗಳು ಮಾಡು­ತ್ತಿವೆ.
ಭಾರತ ಸಾಮಾ­ಜಿ­ಕ­ವಾಗಿ, ಭೌಗೋ­ಳಿ­ಕ­ವಾಗಿ ಮಾತ್ರ ವೈವಿ­ಧ್ಯ­ವಾ­ಗಿ­ರದೆ, ಇಲ್ಲಿನ ಬೇಸಾ­ಯ­ಗ­ಳಲ್ಲೂ ವೈವಿ­ಧ್ಯ­ವಾ­ಗಿದೆ.

ತರ­ಕಾ­ರಿ­ಯಲ್ಲೂ ಸಹ. ನಮ್ಮ­ಲ್ಲಿನ ಬಹು­ತೇಕ ಜನರು ಉಪ­ಯೋ­ಗಿ­ಸುವ ಬದನೆ ವೈವಿ­ಧ್ಯ­ತೆ­ಯಿಂದ ಕೂಡಿ­ರುವ ತರ­ಕಾ­ರಿ­ಗ­ಳ­ಲ್ಲೊಂದು. ವಿದೇಶಿ ಕಂಪನಿ ತಮ್ಮ ನೆಲ­ವನ್ನು ಬಿಟ್ಟು ನಮ್ಮ­ಲ್ಲಿಗೆ ಬಂದು ಬಹು­ವ­ದನೆ'ಯಾದ ಬದ­ನೆಯಕುಲ’ಗೆಡಿ­ಸುವ ಕಾರ್ಯ­ವನ್ನು ಮಾಡು­ತ್ತಿವೆ. ಅಂದರೆ ಕುಲಾಂ­ತರಿ ತಳಿ­ಯನ್ನು ತಯಾರು ಮಾಡು­ತ್ತಿವೆ. ಆಸ್ಟ್ರಿಯಾ, ಇಟಲಿ ಮತ್ತು ಕೆಲವು ಯುರೋಪ್‌ ದೇಶ­ಗ­ಳಲ್ಲಿಕುಲಾಂ­ತರಿ’ ತಳಿ ಆಹಾ­ರ­ವನ್ನು ನಿಷೇಧ ಮಾಡಿ­ರು­ವಾ­ಗಲೇ ನಮ್ಮ­ಲ್ಲಿಗೆ ಅವರು ಬಂದಿ­ದ್ದಾರೆ. ಮಣ್ಣಿ­ನ­ಲ್ಲಿ­ರುವ ಬ್ಯಾಸಿ­ಲಸ್‌ ಥುರ­ನ್‌­ಜೆ­ನಿ­ಸಸ್‌ ಎನ್ನುವ ಬ್ಯಾಕ್ಟೀ­ರಿ­ಯಾಕ್ಕೆ ಬಿಟಿ ಎನ್ನು­ತ್ತಾರೆ. ಇದಕ್ಕೆ ಕಾಯಿ ಮತ್ತು ಕಾಂಡ ಕೊರಕ ಕೀಟ­ಗ­ಳಿಗೆ ಮಾರ­ಕ­ವಾ­ಗ­ಬಲ್ಲ ಪ್ರೋಟೀನು ಉತ್ಪಾ­ದಿ­ಸುವ ಸಾಮ­ರ್ಥ್ಯ­ವಿದೆ. ಕೀಟ­ಗ­ಳಿಗೆ ಮೃತ್ಯು­ಕಾ­ರ­ಕ­ವಾ­ಗ­ಬಲ್ಲ ಬ್ಯಾಕ್ಟಿ­ರೀ­ಯಾದ ವಂಶ­ವಾಯಿ(ಜೀನ್‌)ಯನ್ನು ನಮ್ಮ­ಲ್ಲಿಯ ಬದ­ನೆ­ಯೊ­ಳಗೆ ಸೇರಿ­ಸು­ತ್ತಾರೆ. ಇದು ಹೊಲಿ­ಗೆ­ಯವ ಪ್ಯಾಂಟನ್ನು ಕತ್ತ­ರಿಸಿ ಹೋಲಿ­ದಷ್ಟು ಸುಲ­ಭ­ವಲ್ಲ. ಅತ್ಯಾ­ಧು­ನಿಕ ಸಲ­ಕ­ರ­ಣೆ­ಗಳು ಬೇಕು. ಇದು ಕೋಟ್ಯಾಂ­ತರ ಡಾಲರ್‌ ಖರ್ಚಿನ ಬಾಪತ್ತು , ಹೀಗೆ ತಯಾ­ರಿ­ಸಿದ ಬದನೆ, ಬಿಟಿ­ಯನ್ನು ತನ್ನ ಮೈಯೊ­ಳಗೆ ತುಂಬಿಸಿ ಕೊಳ್ಳು­ತ್ತದೆ. ಇದೊಂದು ರೀತಿ ಮೈಯೆಲ್ಲಾ ವಿಷ ಇರುವಪೂತನಿ'ಯಾಗಿ­ರು­ತ್ತದೆ. ಹೀಗಿ­ರು­ವಾಗ ಬದ­ನೆಯ ಮೇಲೆ ದಾಳಿ ಮಾಡುವ ಕಾಂಡ­ಕೊ­ರಕ, ಕಾಯಿ­ಕೊ­ರಕ ಹುಳು­ಗಳ ಬಾಧೆ ಇದಕ್ಕೆ ಇರು­ವು­ದಿಲ್ಲ. ಕಾರ­ಣ­ವಿಷ್ಟೇ ಬಿಟಿ ಬದ­ನೆ­ಯನ್ನು ತಿಂದ ಹುಳು­ಗಳ ಜೀರ್ಣಾಂಗ ವ್ಯವಸ್ಥೆ ಹದ­ಗೆಟ್ಟು ಸಾಯು­ತ್ತವೆ. ಔಷಧಿ ಹೊಡೆ­ಯುವ ಸಮ­ಸ್ಯೆ­ಯಿ­ರು­ವು­ದಿಲ್ಲ. ಇಳು­ವರಿ ತಾನಾ­ಗಿಯೇ ಹೆಚ್ಚಾ­ಗು­ತ್ತದೆ. ಇದ­ನ್ನೆಲ್ಲಾ ನೋಡಿ­ದಾಗಅಬ್ಬಾ! ಎಂತಹ ತಂತ್ರ­ಜ್ಞಾನ? ಆಗ­ಬ­ಹುದು’ ಎಂದು ಕೊಂಡರೆ ತಪ್ಪಾ­ಗು­ತ್ತದೆ. ರಾತ್ರಿ ಕಂಡ ಬಾವಿಗೆ ಹಗಲು ಬಿದ್ದಂತೆ' ಆಗು­ತ್ತದೆ. ಕಾಂಡ­ವನ್ನೇ ತಿಂದು ಜೀರ್ಣಿ­ಸಿ­ಕೊ­ಳ್ಳುವ ಹುಳು­ಗಳೇ ಸಾಯ­ಬೇ­ಕಾ­ದರೆ. ಬದ­ನೆ­ಯನ್ನು ನಿತ್ಯದ ಆಹಾ­ರ­ಗ­ಳಲ್ಲಿ ಒಂದಾ­ನ್ನಾ­ಗಿಸಿ ಕೊಂಡ ಮನು­ಷ್ಯನಗತಿ’ ಎನಾ­ಗ­ಬಾ­ರದು? ಇಂತಹ ಪ್ರಯೋಗ ಈಗಾ­ಗಲೇ ಉಡು­ಪಿಯ ಮಟ್ಟು­ಗು­ಳ್ಳದ ಮೇಲಾ­ಗಿ­ರು­ವುದು ವಿಷಾ­ಧ, ಬಿಟಿಯ ದುಷ್ಪ­ರಿ­ಣಾ­ಮದ ಬಗ್ಗೆ ಹೇಳು­ವಾಗ ಬಿಟಿ ಹತ್ತಿ ನೆನ­ಪಾ­ಗು­ತ್ತದೆ. ಯಾವುದೇ ಕೀಟ­ಗಳು ದಾಳಿ ಮಾಡಲು ಸಾಧ್ಯ­ವಿಲ್ಲ ಎನ್ನುವ ಬಿಟಿ ತಳಿ­ಗ­ಳಿಗೆ ರಸ­ಹೀ­ರುವ ಕೀಟ­ಗಳು ದಾಳಿ­ನ­ಡೆ­ಸು­ತ್ತವೆ ಎನ್ನು­ವು­ದನ್ನು ಸರ್ಕಾರಿ ದಾಖ­ಲೆ­ಗಳು ಹೇಳು­ತ್ತವೆ. ಬಿಟಿ ಹತ್ತಿ­ಯನ್ನು ಬೆಳೆದ ರೈತ ಕೀಟ­ನಾ­ಶ­ಕ­ವನ್ನು ಬಳ­ಸ­ಬೇ­ಕಾ­ಗು­ತ್ತದೆ. ಅದಕ್ಕೆ ಮತ್ತಷ್ಟು ಹಣ­ವನ್ನು ವ್ಯಯ ಮಾಡ­ಬೇ­ಕಾ­ಗು­ತ್ತದೆ. ಬಿಟಿ­ಹತ್ತಿ ಬೆಳೆದ ಆಂದ್ರ­ಪ್ರ­ದೇ­ಶದ ವಿಧರ್ಭ ಪ್ರಾಂತ್ಯದ ರೈತರೇ ಆತ್ಮ­ಹತ್ಯೆ ಮಾಡಿ­ಕೊಂ­ಡ­ವ­ರಲ್ಲಿ ಹೆಚ್ಚು.


ಬೆಳೆಯ ನಂತರ ಗಿಡದ ಬಿಟಿ ಜೀನ್‌ ಮಣ್ಣಿನ ಬ್ಯಾಕ್ಟೀ­ರಿಯಾ ವರ್ಗಾ­ವ­ಣೆ­ಯಾ­ಗುವ ಸಾಧ್ಯತೆ ಇದೆ. ಬಿಟಿ ಬೀಟ್‌­ರೂ­ಟ್‌­ನಲ್ಲಿ ಇದು ಆಗಿದೆ. ಮಣ್ಣಿನ ಸೂಕ್ಷ್ಮ­ಜೀ­ವಿ­ಗಳ ಮೇಲೆ ಬಿಟಿ­ಯಿಂ­ದಾ­ಗುವ ಪರಿ­ಣಾ­ಮದ ಅಧ್ಯ­ಯ­ನ­ಗಳು ಆಗಿಲ್ಲ' , ಇನ್ನೂ ಬಿಟಿ­ಬ­ದ­ನೆ­ಯನ್ನು ತಿಂದ ಮನು­ಷ್ಯನ ಜೀರ್ಣಾಂ­ಗದ ಕರು­ಳಿನ ಬ್ಯಾಕ್ಟೀ­ರಿ­ಯಾಕ್ಕೆ ವರ್ಗಾ­ವ­ಣೆ­ಯಾ­ಗುವ ಸಂಭವ ಹೆಚ್ಚಿದೆ. ಇದ­ರಿಂದ ರೋಗ ನಿರೋ­ಧಕ ಶಕ್ತಿಯ ಮೇಲೆ ಅಡ್ಡ ಪರಿ­ಣಾಮ ಬೀರು­ವುದು ಮಾತ್ರ­ವ­ಲ್ಲದೇ ಜೀವ­ಕೋ­ಶ­ಗಳು ಅಸ­ಹ­ಜ­ವಾಗಿ ಬೆಳೆ­ಯುವ ಸಾಧ್ಯ­ತೆ­ಯಿದೆ. ಬಿಟಿಯ ಉಪು­ತ್ಪ­ನ್ನ­ಗ­ಳನ್ನು ತಿಂದ ದನ­ಕ­ರು­ಗಳು, ಕುರಿ­ಗಳು ಸಾವ­ನ್ನ­ಪ್ಪಿ­ರು­ವುದು ಕಂಡು­ಬಂ­ದಿದೆ. ಬಿಟಿ ತಳಿ­ಗ­ಳನ್ನು ಬೆಳೆ­ಯುವ ಪ್ರದೇ­ಶ­ಗ­ಳಲ್ಲಿ ಕೆಲಸ ಮಾಡು­ವ­ವ­ರಿಗೆ ಅಲರ್ಜಿ, ತುರಿಕೆ, ದದ್ದು­ಗಳು ಎದ್ದ ವರ­ದಿ­ಗಳು ಈಗಾ­ಗಲೇ ಪ್ರಕ­ಟ­ಗೊಂ­ಡಿದೆ. ಇದ­ಲ್ಲೆ­ಕ್ಕಿಂತ ಹೆಚ್ಚಾಗಿ ನಮ್ಮ ರಾಜ್ಯ­ದಲ್ಲಿ ಸಾವ­ಯವ ಕೃಷಿ ನೀತಿ­ಯನ್ನು ಜಾರಿ­ಗೊ­ಳಿ­ಸಿದೆ. ಸಾವ­ಯವ ಮಿಷನ್‌ ಕೆಲಸ ಮಾಡು­ತ್ತಿದೆ. ಸಾವ­ಯವ ಗ್ರಾಮ­ಗಳು ರಚಿ­ತ­ವಾ­ಗಿದೆ. ಹೀಗಿ­ರು­ವಾಗ ಕುಲಾಂ­ತರಿ ತಳಿ­ಯಲ್ಲಿ ಕೃಷಿ ಮಾಡಿ­ದರೆ ಸಾವ­ಯವ ಧೃಢೀ­ಕ­ರಣ ನೀಡು­ವಂ­ತಿಲ್ಲ. ಸಾವ­ಯವ ರೀತಿ­ಯ­ಲ್ಲಿಯೇ ಬಿಟಿ ತಳಿ­ಗ­ಳನ್ನು ಬೆಳೆ­ಸಿ­ದ್ದರೂಸಾವ­ಯವ ಲೇಬಲ್‌’ ಹಚ್ಚಿ ಮಾರು­ವಂ­ತಿಲ್ಲ. ಜೀನ್‌’ ತಂತ್ರ­ಜ್ಞಾನ ಸಾಮಾನ್ಯ ಜನ­ರಿಗೆ ಸಿಗು­ವು­ದಿಲ್ಲ. ಯಾಕೆಂ­ದರೆ, ಅವು­ಗಳ ಪೇಟೆಂಟ್‌ ಬಹು­ರಾ­ಷ್ಟ್ರೀಯ ಕಂಪ­ನಿಯ ಕಪಿ­ಮು­ಷ್ಟಿ­ಯ­ಲ್ಲಿದೆ. ಕುಲಾಂ­ತರಿ ತಳಿ­ಯನ್ನು ಬೆಳೆಯ ಬೇಕೆಂ­ದರೆ ಕಂಪ­ನಿಗೆ ಮಾರು­ಹೋ­ಗ­ಬೇಕು. ಅವರು ನೀಡುವ ಜೀಬ­ವನ್ನೇ ಬಿತ್ತ­ಬೇಕು. ಕುಲಾಂ­ತರಿ ತಳಿ­ಗ­ಳಿಂದ ಬೀಜ­ವನ್ನು ದ್ವಿಗು­ಣ­ಗೊ­ಳಿ­ಸ­ಲಿಕ್ಕೆ ಸಾಧ್ಯ­ವಿಲ್ಲ. ಇಳು­ವ­ರಿ­ಯನ್ನು ಮನ­ದ­ಲ್ಲಿ­ಟ್ಟು­ಕೊಂಡು ಕುಲಾಂ­ತರಿ'ಯನ್ನು ಬೆಳೆ­ಸ­ಲಿಕ್ಕೆ ತೋಡ­ಗಿ­ದರೆಬಿತ್ತನೆ ಬೀಜ­ಕ್ಕಾಗಿ’ ಪರ­ದಾ­ಡು­ವುದು ತಪ್ಪು­ವು­ದಿಲ್ಲ. ಕಂಪ­ನಿ­ಗಳು ನಮ್ಮ­ಲ್ಲಿನ ವೈವಿ­ಧ್ಯ­ತೆ­ಯನ್ನು ನಾಶ ಮಾಡಿ ಏಕ­ರೂಪ ಕೃಷಿ'ಯನ್ನು ಹೇರು­ವು­ದಕ್ಕೆ ಪ್ರಯ­ತ್ನಿ­ಸು­ತ್ತಿ­ರು­ವುದು ಇವರ ಪ್ರಯೋ­ಗ­ಗ­ಳಿಂದ ತಿಳಿ­ಯು­ತ್ತದೆ. ಅಂದರೆ ಇವರ ಮೂಲ ಉದ್ದೇಶ ರೈತ­ರಿಗೆ ಬೇಕಾ­ಗುವ ಬಿತ್ತನೆ ಬೀಜದ ಮೇಲೆ ಏಕ­ಸ್ವಾ­ಮ್ಯ­ವನ್ನು ಹೊಂದು­ವುದು ಎನ್ನು­ವುದು ಸ್ಪಷ್ಟ. ಒಂದು ದೃಷ್ಟಿ­ಯಿಂದ ನೋಡಿ­ದರೆಅಮಲು ಪದಾ­ರ್ಥದ’ ಚಟ್ಟ­ದಂತೆ ರೈತ­ರಿಗೆ ತಾವು ತಯಾ­ರಿ­ಸಿದ ಬಿಟಿ ತಳಿ­ಗ­ಳಿಂದ ಮಾಡ­ಲಿಕ್ಕೆ ಹೊರ­ಟಿ­ರು­ವುದು ಸ್ಪಷ್ಟ­ವಾ­ಗು­ತ್ತದೆ.

       ಕುಲಾಂ­ತರಿ ಬದನೆ ರೈತರ ಹೊಲಕ್ಕೆ ಬರಲು ಬಿಟ್ಟರೆ, ಅವು­ಗಳ ಹಿಂದೆ ಬಿಟಿ ಭತ್ತ, ಆಲೂ, ಟೊಮೆಟೋ, ಪಪ್ಪಾಯ, ಸೋಯಾ, ಮೆಕ್ಕೆ ಜೋಳ ಸಾಲಾಗಿ ಅಂಗ­ಳ­ದ­ಲ್ಲಯೇ ಕಾಯುತ್ತ ನಿಂತಿವೆ. ಕುಲಾಂ­ತ­ರಿಯ ಪ್ರಯೋಗ ಫಲಿ­ತಾಂಶ ಸಾರ್ವ­ಜ­ನಿ­ಕ­ರೆ­ದುರು ಪಾರ­ದ­ರ್ಶ­ಕ­ವಾಗಿ ತೆರೆ­ದಿ­ಡ­ಬೇಕು ಎನ್ನುವ ಆಗ್ರಹ ಸಂಘ­ಟ­ನೆ­ಗ­ಳದ್ದು. ರೈತರ ಪ್ರಗತಿ ನೆಪ ಮಾಡಿ­ಕೊಂಡು ಕಂಪ­ನಿ­ಗಳು ಸಾಂಪ್ರ­ದಾ­ಯಿಕ ಕೃಷಿ ಹಾಳು­ಮಾ­ಡಲು ಹೊರ­ಟಿ­ರುವ `ತಂತ್ರ'ಜ್ಞಾನ ನಮಗೆ ಬೇಕೆ?
          ಆದ್ದರಿಂದ ಕರ್ನಾಟಕ ಸರ್ಕಾರವು ಬಹುರಾಷ್ಟ್ರೀಯ ಕಂಪನಿಗಳಿಗೆ ಈ ಕುಲಾಂತರಿ ತಳಿ ಗಾಗಿ ಕೇಳಿರುವ  " ನೋ ಅಬ್ಜೆಕ್ಷನ್ ಸರ್ಟಿಫಿಕೇಟ್ " ನ್ನು ಯಾವ ಕಾರಣಕ್ಕೂ ಕೊಡಬಾರದೆಂದು ಖಡಾಖಂಡಿತವಾಗಿ ಸಾವಯವ ಕೃಷಿಕ ಅಂಚೆ  ಕೊಟ್ರೇಶ್ ರವರು ತಮ್ಮ ಪತ್ರದಲ್ಲಿ ಪ್ರತಿಕ್ರಿಯಿಸಿದ್ದಾರೆ

Leave a Comment

Your email address will not be published. Required fields are marked *

Translate »
Scroll to Top