ಕುಷ್ಟಗಿ : ಇಂದು ಸಂಜೆ ೩.೩೦ ರ ಸುಮಾರಿಗೆ ಕುಷ್ಟಗಿ ಪಟ್ಟಣ ಸೇರಿದಂತೆ ಸುತ್ತಮುತ್ತಿನ ಪ್ರದೇಶದಲ್ಲಿ ಮಿಂಚು ಗುಡುಗು ಸಿಡಿಲು ಆರ್ಭಟದ ಮಳೆಗೆ ಬಾರಿ ಮಳೆಯಾಗಿ ಕೆಲ ಕಾಲ ವಿದ್ಯುತ್ ಇಲ್ಲದೇ ಹಾಗೂ ಪಟ್ಟಣದಲ್ಲಿ ಚರಂಡಿ ನೀರು ತುಂಬಿ ರಸ್ತೆ ಮೇಲೆ ನೀರು ಹರಿದು ಪರಿಣಾಮ ಸಂಚಾರಕ್ಕೆ ತೊಂದರೆಯಾಯಿತು.
ಮಳೆರಾಯ ಸಂಜೆ ಒತ್ತಿಗೆ ಬಂದ ಕಾರಣ ಹೊಲಕ್ಕೆ ಬೇಸಾಯ ಮಾಡಲು ಹೋದ ರೈತರು ಮಳೆಯಲ್ಲಿ ನೆಂದು ಮನೆಗೆ ಮರಳಿ ಬರುವಂತದ್ದು ಕಂಡ ಬಂತು.
ಆದರೆ ಸುಮಾರು ೧೦ ದಿನಗಳ ಕಾಲ ಮಳೆರಾಯ ವಿರಾಮ ನೀಡಿದ್ದ ಮಳೆರಾಯ ಇಂದು ಸ್ವಾತಿ ಮಳೆ ಪ್ರವೇಶವಾಗಿದೆ ಆದರೆ ಒಂದೇ ಸಮನೆ ಎರಡು ತಾಸಿಗೂ ಹೆಚ್ಚು ಮಳೆ ಸುರಿದ ಪರಿಣಾಮ ಕೆಲ ಬೆಳೆಗಳಿಗೆ ನಷ್ಟವಾದರೆ ಇನ್ನು ಕೆಲ ಬೆಳೆಗಳಿಗೆ ಉತ್ತವಾಗಿದೆ ಎಂದು ರೈತರು ವಿಶ್ಲೇಷಣೆ ಮಾಡಿ ಹೇಳುವಂತದ್ದು ಕಂಡು ಬಂತು.
ಈ ಸಮಯದಲ್ಲಿ ಸಜ್ಜೆ, ಮೆಕ್ಕೆಜೋಳ ಬೆಳೆಗಳು ಕಟಾವಿಗೆ ಬಂದಿದ್ದು ರೈತರು ತಮ್ಮ ಕಟಾವಿಗೆ ಬಂದ ಬೆಳೆಯನ್ನು ರಾಶಿ ಮಾಡಿಕೊಳ್ಳುವ ಒತ್ತಿಗೆ ಮಳೆಯಾಗುತ್ತಿದೆ ಇನ್ನು ಈಗ ತಾನೇ ಬಿತ್ತನೆ ಮಾಡಿದ ಎರಿ ಹೊಲಕ್ಕೆ ಕಡಲೆ ಜೋಳ ಬಿತ್ತನೆ ಮಾಡಲಾಗಿದೆ ಇಷ್ಟಕ್ಕೆ ಮಳೆರಾಯ ಸುಮ್ಮನೆ ಇದ್ದರೆ ಉತ್ತಮವಾದ ಬೆಳೆ ಬರುತ್ತದೆ ಇಲ್ಲವಾದರೆ ಅತಿವೃಷ್ಟಿಯಿಂದ ನಷ್ಟವನ್ನು ಅನುಭವಿಸುವಂತಹ ಪರಿಸ್ಥಿತಿ ಉಂಟಾಗುತ್ತದೆ ಎಂದು ಹೇಳಬಹುದು.