ಕುಷ್ಟಗಿ:- ಉತ್ತಮವಾಗಿ ಇರುವಂತ ನುರಿತ ಶಿಕ್ಷಕರಿಂದ ನೀಡುವಂತ ಸ್ಪರ್ಧಾತ್ಮಕ ತರಬೇತಿ ಪಡೆದು ಪ್ರತಿಯೊಂದು ಪುಸ್ತಕ ಹಾಗೂ ನ್ಯೂಸ್ ಪತ್ರಿಕೆ ಓದು ಮೂಲಕ ಶಿಕ್ಷಕರ ಹೇಳಿದ ಪಾಠವನ್ನು ಕಲಿತು ಮನೆಯಲ್ಲಿ ಕನಿಷ್ಠ 5 ರಿಂದ 6 ತಾಸು ನಿರಂತರ ಓದಿ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಪಾಸಾಗಿ ತಂದೆ ತಾಯಿಯ ಕೀರ್ತಿ ತಂದು ಕುಟುಂಬದ ಜೀವನ ನಿರ್ವಹಣೆ ಮಾಡಲು ಚಲ ಬಿಡದೆ ಸ್ಪರ್ಧಾತ್ಮಕ ಪರೀಕ್ಷೆ ಎದರಿಸಿ 100 ಕ್ಕು 100 ರಷ್ಟು ಅಂಕಗಳನ್ನು ಗಳಿಸಿ ಸರಕಾರಿ ನೌಕರಸ್ಥರಾಗಬೇಕು ಎಂದು ರಾಜ್ಯ ಕುರಿ ಮತ್ತು ಉಣ್ಣೆ ನಿಗಮ ಮಂಡಳಿ ಅಧ್ಯಕ್ಷ ಶರಣು ಬಿ ತಳ್ಳಿಕೇರಿ ಹೇಳಿದರು.
ಶಾಸಕ ಅಮರೇಗೌಡ ಪಾಟೀಲ ಬಯ್ಯಾಪೂರ ಇವರ ಆಸೆಯಂತೆ ಹಾಗೂ ತಹಶೀಲ್ದಾರ ಸಿದ್ದೇಶ ಎಂ, ಕ್ಷೇತ್ರ ಶಿಕ್ಷಣಾಧಿಕಾರಿಗಳ ನೇತೃತ್ವದಲ್ಲಿ ಕುಷ್ಟಗಿ ತಾಲೂಕಿನ ಸ್ಪರ್ಧಾತ್ಮಕ ಪರೀಕ್ಷೆ ಬರೆಯುವಂತ ವಿದ್ಯಾರ್ಥಿಗಳಿಗೆ ಓದಲು ಉಚಿತವಾಗಿ ಸ್ಪರ್ಧಾತ್ಮಕ ಪರೀಕ್ಷೆ ಪುಸ್ತಕ ಉಚಿತವಾಗಿ ವಿತರಣೆ ಮಾಡಿ ಮಾತನಾಡಿದ ಅವರು ಈ ಬಡವರ ಮಕ್ಕಳು ಸ್ಪರ್ಧಾತ್ಮಕ ಪರೀಕ್ಷೆ ಬರೆಯಬೇಕು ಎಂದರೆ ಸಾಕಷ್ಟು ಹಣವನ್ನು ಕೊಟ್ಟು ತರಬೇತಿ ಪಡೆಯಬೇಕು ಆದರೆ ಇವತ್ತು ಕುಷ್ಟಗಿ ತಾಲೂಕಾ ಆಡಳಿತದಿಂದ ಸ್ಪರ್ಧಾತ್ಮಕ ಪರೀಕ್ಷೆ ಎದರಿಸುವಂತ ವಿದ್ಯಾರ್ಥಿಗಳಿಗೆ ನುರಿತ ಶಿಕ್ಷಕರಿಂದ ಸತತವಾಗಿ ಸುಮಾರು ಮೂರು ತಿಂಗಳಗಳ ಕಾಲ ತರಬೇತಿ ನೀಡಿತ್ತಿರುವದು ದೊಡ್ಡ ಸಾಧನೆವಾಗಿದೆ ಎಂದರು.
ಆದರೆ ಕಳೆದ 10 ದಿನಗಳ ಹಿಂದೆ ನಡೆದ ಕಾರ್ಯಕ್ರಮದಲ್ಲಿ ಆಕಸ್ಮಿಕ ಈ ಕಾರ್ಯಕ್ರಮಕ್ಕೆ ಬಂದ ನಾನು ಈ ತರಬೇತಿ ನೀಡುವಂತದನ್ನು ಕಂಡು ಬಹಳ ಸಂತೋಷವಾಯಿತು.ಆದ್ದರಿಂದ ಇವತ್ತು ನಾನು ಕೆವಲ ಕೆ.ಇ.ಬಿ ಲೈನ್ ಮೇನ್ ಮಗನಾಗಿದ್ದು ನನ್ನ ತಂದೆಗೆ ಉನ್ನತ ಮಟ್ಟದ ಅಧಿಕಾರಿಯಾಗಬೇಕು ಎಂದು ಆಸೆಯಾಗಿತ್ತು ಆದರೆ ನಮ್ಮ ತಂದೆ ತಾಯಿಯ ಆಸೆಯಂತೆ ನಾನು ಉನ್ನತ ಅಧಿಕಾರಿ ಆಗಲು ಸಾಧ್ಯವಾಗಲಿಲ್ಲ ಹಿರಿಯ ಆಶ್ರಿವಾದದಿಂದ ಮತ್ತು ಗುರುಗಳ ಆಶ್ರೀವಾದದಿಂದ ನಿರಂತರ ಹೋರಾಟದ ಪರಿಶ್ರಮದಿಂದ ಇವತ್ತು ರಾಜಕಾರಣಿಯಾಗಿ ಜನರ ಸೇವೆ ಮಾಡಲು ಮುಂದಾಗಿದ್ದೇನೆ ತಾ.ಪಂ ಅಧ್ಯಕ್ಷನಾಗಿ ಜಿಲ್ಲಾ ಪಂಚಾಯತ ಚುನಾವಣೆಗೆ ಸ್ಪರ್ಧಿಸಿ ಇವತ್ತು ರಾಜ್ಯ ಕುರಿ ಮತ್ತು ಉಣ್ಣೆ ನಿಗಮ ಅಭಿವೃದ್ಧಿ ಅಧ್ಯಕ್ಷನಾಗಿ ನಿಮ್ಮ ಮುಂದೆ ಬಂದಿರುವೆ ನಾನು ಕೂಡ ಒಬ್ಬ ಕಳ ಮಟ್ಟದ ಅಧಿಕಾರಿ ಮಗನಾಗಿ ಬಂದವನಾಗಿದ್ದು ಆದ್ದರಿಂದ ಈ ತರಬೇತಿ ನಡೆಸಲು ಯಾವ ರೀತಿಯಲ್ಲಿ ಸಲಹೆ ಸಹಕಾರ ಬೇಕು ಮತ್ತು ತರಬೇತಿ ಪಡೆಯುವಂತ ವಿದ್ಯಾರ್ಥಿಗಳು ಓದಲು ಯಾವ ಪುಸ್ತಕ ಬೇಕು ಆ ಎಲ್ಲಾ ಪುಸ್ತಕವನ್ನು ಖರೀದಿಸಿ ಪುಸ್ತಕ ತಂದು ಕೊಡುತ್ತೇನೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ವಿದ್ಯುತ್ ನಿಗಮ ಮಂಡಳಿ ಸದಸ್ಯ ಮುತ್ತು ರಾಠೋಡ್, ತಹಶೀಲ್ದಾರ ಸಿದ್ದೇಶ ಎಂ, ಕ್ಷೇತ್ರ ಕ್ಷೇತ್ರಶಿಕ್ಷಾಣಾಧಿಕಾರಿ ಚನ್ನಬಸಪ್ಪ ಮಗ್ಗದ್, ಕ್ಷೇತ್ರ ಸಮನ್ವಯ ಕ್ಷೇತ್ರಶಿಕ್ಷಾಧಿಕಾರಿ ಶ್ರೀ ಶೈಲ್ ಸೋಮನಕಟ್ಟಿ, ಶಶಿಧರ ಕವಲಿ, ಸಿ.ಡಿ.ಪಿ.ಓ ಅಮರೇಶ, ಜೀವನಸಾಬ ಬಿನ್ನಾಳ, ಮಾಹಾಂತೇಶ ಹಡಪದ್ ಸೇರಿದಂತೆ ಹಲವಾರರು ಉಪಸ್ಥಿತರಿದ್ದರು.