ಬೇಲೂರಿನ ಎರಡು ಕಟ್ಟಡ-ಸೇತುವೆ ಪಾರಂಪರಿಕ ಪಟ್ಟಿಗೆ: ಒತ್ತಾಯ

ಬೇಲೂರು : ಶ್ರೀಚನ್ನಕೇಶವಸ್ವಾಮಿ ದೇಗುಲ ಇಲ್ಲಿರುವುದರಿಂದ ಬೇಲೂರು ಪಟ್ಟಣವನ್ನು ವಿಶ್ವಪಾರಂಪರಿಕ ಪಟ್ಟಿಗೆ ಸೇರಿಸಲಾಗುತ್ತಿದ್ದು ಮೊದಲ ಹಂತವಾಗಿ ಈಗಾಗಲೇ ತಾತ್ಕಾಲಿಕ ಪಟ್ಟಿಗೆ ಸೇರ್‍ಪಡೆಗೊಂಡಿದೆ. ವಿಶ್ವಪಾರಂಪರಿಕ (ಯುನೊಸ್ಕೋ) ಪಟ್ಟಿಗೆ ಬೇಲೂರನ್ನು ಸೇರ್‍ಪಡೆಗೊಳಿಸುವ ನಿಟ್ಟಿನಲ್ಲಿ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ಹಾಗೂ ಮಾಜಿ ಸಚಿವ ಹೆಚ್.ಡಿ.ರೇವಣ್ಣ ಇವರ ಪಾತ್ರ ಮಹತ್ತರವಾದದು. ಬೇಲೂರು ಪಟ್ಟಣ ಯುನೊಸ್ಕೊಗೆ ಸೇರ್‍ಪಡೆಗೊಂಡರೆ ಪ್ರವಾಸೋಧ್ಯಮದಕ್ಕೆ ಸಂಬಂಧಿಸಿದಂತೆ ವಿವಿಧ ಆಯಾಮಗಳಲ್ಲಿ ಪ್ರವಾಸಿಕೇಂದ್ರ ಅಭಿವೃದ್ಧಿ ಹೊಂದಲಿದೆ ಎಂಬುದರ ಜತೆಗೆ ದೇಗುಲದ ಭದ್ರತೆ, ರಕ್ಷಣೆ ಇವುಗಳಲ್ಲಿಯೂ ಮಹತ್ತರ ಬೆಳವಣಿಗೆ ಆಗಲಿದೆ.


ಇದರೊಂದಿಗೆ ಬ್ರಿಟೀಷರ ಕಾಲದ ೧೫೨ ವರ್ಷ ಪೂರ್ಣಗೊಂಡಿರುವ ಬೇಲೂರಿನ ಪ್ರಥಮ ಬಾಲಕರ ಸರ್ಕಾರಿ ಮಾಧ್ಯಮಿಕ ಕನ್ನಡ ಶಾಲೆಯ ಕಟ್ಟಡ ಮತ್ತು ಬಸವೇಶ್ವರ ವೃತ್ತದ ಸಮೀಪ ಇರುವ ಹಳೆ ತಹಸೀಲ್ದಾರ್ ಕಚೇರಿ ಕಟ್ಟಡ ಮತ್ತು ಯಗಚಿ ನದಿಯ ಹಳೆ ಕಲ್ಲಿನ ಸೇತುವೆಯನ್ನು ಪಾರಂಪರಿಕ ಕಟ್ಟಡಗಳೆಂದು ಘೋಷಿಸುವಂತೆ ಒತ್ತಾಯ ಕೇಳಿಬರುತ್ತಿದೆ. ಹಳೆ ತಹಸೀಲ್ದಾರ್ ಕಚೇರಿ ಮಿನಿವಿಧಾನಸೌಧಕ್ಕೆ ಸ್ಥಳಾಂತರಗೊಂಡ ನಂತರ ಈ ಕಟ್ಟಡವನ್ನು ಒಡೆದು ವಾಣಿಜ್ಯ ಮಳಿಗೆ ನಿರ್ಮಿಸುವ ಉದ್ದೇಶ ಹೊಂದಲಾಗಿತ್ತು. ಆದರೆ ಇಲ್ಲಿನ ಸಂಶೋಧಕ ಡಾ.ಶ್ರೀವತ್ಸ ಎಸ್.ವಟಿ. ಅವರು ಅಂದಿನ ಜಿಲ್ಲಾಧಿಕಾರಿಯನ್ನು ಭೇಟಿಯಾಗಿ ೧೦೦ ವರ್ಷ ಪೂರ್ಣಗೊಂಡಿರುವ ಬ್ರಿಟೀಷರ ಕಾಲದ ಕಟ್ಟಡ ಎಂಬುದಕ್ಕೆ ದಾಖಲೆ ಒದಗಿಸಿ ಕಟ್ಟಡ ತೆರವಾಗುವುದನ್ನು ತಪ್ಪಿಸಿದ್ದಲ್ಲದೆ, ಈ ಕಟ್ಟಡದಲ್ಲಿ ಸರ್ಕಾರದ ಮ್ಯೂಸಿಯಂ ಆರಂಭಕ್ಕೆ ಪ್ರಯತ್ನ ನಡೆಸಿದ್ದರು. ಆನಂತರದ ಬೆಳವಣಿಗೆಯಲ್ಲಿ ಮ್ಯೂಸಿಯಂ ಆರಂಭ ಸ್ಥಗಿತಗೊಂಡಿತು. ಪಾರಂಪರಿಕ ಕಟ್ಟಡವನ್ನು ಈಗಿರುವ ರೀತಿಯಲ್ಲೇ ಉಳಿಸಿಕೊಳ್ಳುವ ವ್ಯವಸ್ಥೆ ಆಗಲಿದೆ. ಈ ಎರಡೂ ಕಟ್ಟಡಗಲ್ಲಿ ಯಾವುದೇ ರೀತಿಯ ದುರಸ್ತಿ ಇತ್ಯಾದಿಗಗಳ ಮಾಡುವಾಗ ಹಾಲಿ ಇರುವಂತೆಯೇ ಯಥಾಸ್ಥಿತಿಯಲ್ಲೇ ನವೀಕರಿಸಬೇಕಾಗುತ್ತದೆ. ಯಾವುದೇ ರೀತಿಯಲ್ಲಿ ಬದಲಾವಣೆ ಮಾಡುವಂತಿರುವುದಿಲ್ಲ ಹಾಗೂ ಚ್ಯುತಿ ಬರುವಂತಿಲ್ಲ ಎನ್ನಲಾಗಿದೆ. ಈ ಕಟ್ಟಡದೊಂದಿಗೆ ಕಲ್ಲುಗಳಿಂದಲೇ ಕಮಾನಿನಿ ಆಕಾರದಲ್ಲಿ ನಿರ್ಮಿಸಿರುವ ಶಿಥಿಲಾವಸ್ಥೆಯಲ್ಲಿರುವ ಯಗಚಿ ನದಿಯ ಹಳೆ ಸೇತುವೆಯನ್ನು ಸ್ಮಾರಕಗಳ ಪಟ್ಟಿಗೆ ಸೇರ್‍ಪಡೆಗೊಳಿಸಿದರೆ ಅದರ ಜೀರ್ಣೋದ್ದಾರವಾದರೂ ಆಗುತ್ತಿತ್ತೇನೊ ಎನ್ನುವುದು ಕೆಲವರ ಅಭಿಪ್ರಾಯವಾಗಿದೆ.

Leave a Comment

Your email address will not be published. Required fields are marked *

Translate »
Scroll to Top