ಬೇಲೂರು: ಮೂಡಿಗೆರೆ ಶಾಸಕ ಎಂ.ಪಿ.ಕುಮಾರಸ್ವಾಮಿ ಅವರ ಕಾರು ಗುದ್ದಿ ಮಹಿಳೆಯೊಬ್ಬರು ಮೃತಪಟ್ಟಿರುವ ಘಟನೆ ಬೇಲೂರು ಸಮೀಪ ನಡೆದಿದೆ.
ಪಟ್ಟಣದ ಗೆಂಡೇಹಳ್ಳಿ ರಸ್ತೆಯಲ್ಲಿರುವ ಹನುಮಂತನಗರದ ಹೂವಮ್ಮ (65) ಮೃತಪಟ್ಟ ದುರ್ಧೈವಿಯಾಗಿದ್ದಾರೆ. ಸಂಜೆ 4.45 ರ ಸುಮಾರಿನಲ್ಲಿ ಮೊರಾರ್ಜಿ ಶಾಲೆಯ ಬಳಿ ಇರುವ ತಮ್ಮ ಮನೆಯ ಮುಂಭಾಗದಲ್ಲಿ ರಸ್ತೆಯ ಪಕ್ಕ ನಿಂತಿದ್ದಾಗ ಗೆಂಡೇಹಳ್ಳಿ ಕಡೆಯಿಂದ ಆಗಮಿಸಿದ ಕಾರು ಗುದ್ದಿದೆ. ಕಾರು ಗುದ್ದಿದ ರಭಸಕ್ಕೆ ಹೂವಮ್ಮ ಕೆಳಕ್ಕೆ ಬಿದ್ದಿದ್ದಾರೆ. ತಕ್ಷಣ ಆಸ್ಪತ್ರೆಗೆ ಕರೆತಂದರೂ ಪ್ರಯೋಜನವಾಗದೆ ಅಸುನೀಗಿದ್ದಾರೆ.

ಕಾರಿನಲ್ಲಿ ಶಾಸಕರು ಇಲ್ಲದೆ ಚಾಲಕ ಪ್ರವೀಣ್ ಮಾತ್ರ ಇದ್ದನೆಂದೂ ಕಾರನ್ನು ಸರ್ವೀಸ್‌ಗೆ ಬಿಡಲು ತೆರಳುತ್ತಿದ್ದರೆಂದು ತಿಳಿದುಬಂದಿದೆ. ಕಾರನ್ನು ಚಾಲಕನೇ ಪೊಲೀಸ್ ಠಾಣೆಗೆ ತೆಗೆದುಕೊಂಡು ಹೋಗಿ ನಿಲ್ಲಿಸಿದ್ದಾರೆ.