ದಾವಣಗೆರೆ

ಹಾಸನದ ವಿದ್ಯಾರ್ಥಿನಿ ಸರಸ್ವತಿ ಮತ್ತು ದಾವಣಗೆರೆಯ ವಿನಯ್

ಹಾಸನ,ಮಾರ್ಚ್,1 : ಉಕ್ರೇನ್ ಪ್ರಮುಖ ನಗರ ಖಾರ್ಕಿವ್‌ನಲ್ಲಿ ಹಾಸನದ ವಿದ್ಯಾರ್ಥಿನಿ ಸರಸ್ವತಿ ಮತ್ತು ದಾವಣಗೆರೆಯ ವಿನಯ್ ಸಿಲುಕಿದ್ದಾರೆ. ಪೋಷಕರಿಗೆ ಕರೆ ಮಾಡಿದ್ದ ಸರಸ್ವತಿ ಇಲ್ಲಿ ತಮ್ಮ ಪರಿಸ್ಥಿತಿಯನ್ನು ಪೋಷಕರಿಗೆ ವಿವರಿಸಿದ್ದಾರೆ. ಮಗಳ ಮಾತು ಕೇಳಿ ಪೋಷಕರು ತುಂಬಾ ಆತಂಕ ಗೊಂಡಿದ್ದಾರೆ ತನ್ನ ಮಗಳಿಗಾಗಿ ಕಣ್ಣೀರಿಟ್ಟರು. ಪಶ್ಚಿಮ ಗಡಿಗೆ ತೆರಳಲು ಯತ್ನಿಸಿದರೂ ಅವಕಾಶ ಸಾಧ್ಯವಾಗುತ್ತಿಲ್ಲ. ಬೆಳಿಗ್ಗೆ ನಾಲ್ಕು ಗಂಟೆಯಲ್ಲಿ ಬಾಂಬ್ ಶಬ್ದ ಕೇಳಿಸಿತು. ಬಂಕರ್‌ನಲ್ಲಿದ್ದ ನೂರು ಜನರ ಪೈಕಿ ಕೆಲವರು ಹೊರಗೆ ಹೊರಟಿದ್ದಾರೆ..ಉಕ್ರೇನ್ ಸೈನಿಕರು ನಮ್ಮ ಸ್ನೇಹಿತರ ಮೇಲೆ […]

ಹಾಸನದ ವಿದ್ಯಾರ್ಥಿನಿ ಸರಸ್ವತಿ ಮತ್ತು ದಾವಣಗೆರೆಯ ವಿನಯ್ Read More »

ಯುಕ್ರೇನ್ ನಿಂದ ದಾವಣಗೆರೆಯ 3 ವಿದ್ಯಾರ್ಥಿಗಳು ಸುರಕ್ಷಿತ ವಾಪಾಸು

ದಾವಣಗೆರೆ.ಫೆ.27; ಯುದ್ಧ ಪೀಡಿತ ಯುಕ್ರೇನ್ ದೇಶದಿಂದ ದಾವಣಗೆರೆ ಜಿಲ್ಲೆಯ ಮೂವರು ವಿದ್ಯಾರ್ಥಿಗಳು ಸುರಕ್ಷಿತವಾಗಿ ಜಿಲ್ಲೆಗೆ ವಾಪಾಸಾಗಿದ್ದಾರೆ. ಕೇಂದ್ರ ಸರ್ಕಾರ ವ್ಯವಸ್ಥೆ ಮಾಡಿದ್ದ ಮೊದಲ ವಿಮಾನದಲ್ಲಿ ದಾವಣಗೆರೆ ಭಗತ್ ಸಿಂಗ್ ನಗರದ ಮೊಹಮದ್ ಅಬಿದ್ ಅಲಿ , ವಿದ್ಯಾನಗರದ ಸೈಯಿದ್ ಹಬೀಬ ಮತ್ತು ಎರಡನೇ ವಿಮಾನದಲ್ಲಿ ಹೊನ್ನಾಳಿ ತಾಲೂಕಿನ ಕುಂದೂರು ಗ್ರಾಮದ ಪ್ರಿಯಾ ಅವರುಗಳು ಸುರಕ್ಷಿತವಾಗಿ ತಮ್ಮ ಊರುಗಳಿಗೆ ಮರಳಿದ್ದಾರೆ. ತಮ್ಮ ಮಕ್ಕಳನ್ನು ಸುರಕ್ಷಿತವಾಗಿ ದೇಶಕ್ಕೆ ವಾಪಾಸು ಕರೆತಂದ ಕೇಂದ್ರ ಸರ್ಕಾರದ ಕಾರ್ಯಕ್ಕೆ ವಿದ್ಯಾರ್ಥಿಗಳ ಪೋಷಕರು ಕೃತಜ್ಞತೆ ಸಲ್ಲಿಸಿದ್ದಾರೆ.

ಯುಕ್ರೇನ್ ನಿಂದ ದಾವಣಗೆರೆಯ 3 ವಿದ್ಯಾರ್ಥಿಗಳು ಸುರಕ್ಷಿತ ವಾಪಾಸು Read More »

ಫೆ.28 ರಂದು ಜಿಲ್ಲಾ ಉಸ್ತುವಾರಿ ಸಚಿವ ಆಗಮನ

ದಾವಣಗೆರೆ,ಫೆ,26 : ನಗರಾಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಬಸವರಾಜ್ ಫೆ.28 ರಂದು ಜಿಲ್ಲೆಯಲ್ಲಿ ಪ್ರವಾಸ ಹಮ್ಮಿಕೊಂಡಿದ್ದಾರೆ. ಅಂದು ಬೆಳಿಗ್ಗೆ ಬೆಂಗಳೂರಿನಿಂದ ಹೊರಟು ಬೆ.11ಕ್ಕೆ ಹೊನ್ನಾಳಿ ಪ್ರವಾಸಿ ಮಂದಿರಕ್ಕೆ ಆಗಮಿಸುವರು. ನಂತರ ಹೊನ್ನಾಳಿ ಪಟ್ಟಣದಲ್ಲಿ ಹೊನ್ನಾಳಿ ನೂತನ ಕಂದಾಯ ಉಪ ವಿಭಾಗದ ಉಪ ವಿಭಾಗಾಧಿಕಾರಿ ಕಛೇರಿ ಉದ್ಘಾಟನಾ ಸಮಾರಂಭ ಹಾಗೂ ಸಂಜೀವಿನಿ ಯೋಜನೆ ಅಡಿಯಲ್ಲಿ ಸ್ತ್ರೀಶಕ್ತಿ ಸಂಘಗಳಿಗೆ ಸುತ್ತುನಿಧಿ ಚೆಕ್ ವಿತರಣೆ ಹಾಗೂ ಸಾಮಾಜಿಕ ಭದ್ರತಾ ಯೋಜನೆಯಡಿ ಫಲಾನುಭವಿಗಳಿಗೆ ವಿವಿಧ ಸೌಲಭ್ಯಗಳ ವಿತರಣಾ ಕಾರ್ಯಕ್ರಮದಲ್ಲಿ ಭಾಗವಹಿಸುವರು.

ಫೆ.28 ರಂದು ಜಿಲ್ಲಾ ಉಸ್ತುವಾರಿ ಸಚಿವ ಆಗಮನ Read More »

ಫೆ.27 ರಿಂದ ಜಿಲ್ಲೆಯಲ್ಲಿ ರಾಷ್ಟ್ರೀಯ ಪಲ್ಸ್ ಪೋಲಿಯೋ ಕಾರ್ಯಕ್ರಮ

ದಾವಣಗೆರೆ,ಫೆ,26 : ಪ್ರಸಕ್ತ ಸಾಲಿನ ರಾಷ್ಟ್ರೀಯ ಪಲ್ಸ್ ಪೋಲಿಯೋ ಕಾರ್ಯಕ್ರಮವನ್ನು ಫೆ. 27 ರಿಂದ ಮಾ. 02 ರವರೆಗೆ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ತಿಳಿಸಿದ್ದಾರೆ. ಪೋಲಿಯೋ ಕಾಯಿಲೆಯು ಒಂದು ವೈರಸ್‍ನಿಂದ ಹರಡುವ ಕಾಯಿಲೆಯಾಗಿದ್ದು, ಈ ಖಾಯಿಲೆಯಿಂದ ಶಾಶ್ವತ ಅಂಗವಿಕಲತೆ ಉಂಟಾಗುತ್ತದೆ. ಅನಾದಿಕಾಲದಿಂದಲೂ ಈ ಖಾಯಿಲೆಯು ನಮ್ಮ ನಡುವೆ ಇದ್ದು, ನಮ್ಮ ನಡುವಿನ ಬಹಳಷ್ಟು ಮಕ್ಕಳಿಗೆ ಶಾಶ್ವತ ಅಂಗವಿಕಲತೆಯನ್ನು ಉಂಟು ಮಾಡುತ್ತಿತ್ತು. ಬಳಿಕ ಇದರ ಪ್ರಭಂದಕವಾಗಿ ಲಸಿಕೆಯನ್ನು ಕಂಡು ಹಿಡಿಯಲಾಯಿತು. ಭಾರತದಲ್ಲಿ ಸಾರ್ವತ್ರಿಕ

ಫೆ.27 ರಿಂದ ಜಿಲ್ಲೆಯಲ್ಲಿ ರಾಷ್ಟ್ರೀಯ ಪಲ್ಸ್ ಪೋಲಿಯೋ ಕಾರ್ಯಕ್ರಮ Read More »

ಗಂಗಾ ಆರತಿ

ದಾವಣಗೆರೆ, ಫೆಬ್ರವರಿ 20: ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇಂದು ಉತ್ತರದಲ್ಲಿ ಗಂಗಾ ಆರತಿ ಮಾದರಿಯಲ್ಲಿ ದಕ್ಷಿಣದಲ್ಲಿ ಹರಿಹರದಲ್ಲಿ ತುಂಗಭದ್ರಾ ನದಿ ತಟದಲ್ಲಿ ತುಂಗಾ ಆರತಿ ಪ್ರಯುಕ್ತ 108 ಯೋಗ ಮಂಟಪಗಳ ನಿರ್ಮಾಣ ಕಾರ್ಯಕ್ಕೆ ಶಿಲಾನ್ಯಾಸ ನೆರವೇರಿಸಿದರು. ಹರಿಹರದ ಪಂಚಮಸಾಲಿ ಪೀಠದ ಶ್ರೀ ವಚನಾನಂದ ಸ್ವಾಮಿಗಳು, ಸಚಿವರಾದ ಬಿ.ಎ. ಬಸವರಾಜ, ಮುರುಗೇಶ್ ನಿರಾಣಿ, ಸಂಸದ ಜಿ.ಎಂ.ಸಿದ್ದೇಶ್ವರ ಮೊದಲಾದವರು ಉಪಸ್ಥಿತರಿದ್ದರು.

ಗಂಗಾ ಆರತಿ Read More »

ಫೆ. 19 ರವರೆಗೆ ಜಿಲ್ಲೆಯಾದ್ಯಂತ ನಿಷೇಧಾಜ್ಞೆ ಜಾರಿ

ದಾವಣಗೆರೆ,ಫೆ,16 : ಜಿಲ್ಲೆಯಲ್ಲಿ ಶಾಂತಿ ಪಾಲನೆ ಹಾಗೂ ಕಾನೂನು ಸುವ್ಯವಸ್ಥೆ ಕಾಪಾಡುವ ಉದ್ದೇಶದಿಂದ ದಾವಣಗೆರೆ ಜಿಲ್ಲೆಯಾದ್ಯಂತ ಭಾರತೀಯ ದಂಡ ಪ್ರಕ್ರಿಯೆ ಸಂಹಿತೆ ಕಲಂ 144 ರನ್ವಯ ನಿಷೇಧಾಜ್ಞೆಯನ್ನು ಫೆ. 16 ರಂದು ಬೆಳಿಗ್ಗೆ 06 ಗಂಟೆಯಿಂದ ಫೆ. 19 ರಂದು ಸಂಜೆ 06 ಗಂಟೆಯವರೆಗೆ ಜಾರಿಗೊಳಿಸಿ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಅವರು ಆದೇಶ ಹೊರಡಿಸಿದ್ದಾರೆ. ಹಿಜಾಬ್ ಹಾಗೂ ಕೇಸರಿ ಶಾಲು ವಿವಾದಕ್ಕೆ ಸಂಬಂಧಿಸಿದಂತೆ ರಾಜ್ಯ ಉಚ್ಛ ನ್ಯಾಯಾಲಯದಲ್ಲಿ ವಿಚಾರಣೆ ಮುಂದುವರೆದಿದ್ದು, ನ್ಯಾಯಾಲಯವು ಈಗಾಗಲೆ ಮಧ್ಯಂತರ ತೀರ್ಪು ನೀಡಿದೆ.

ಫೆ. 19 ರವರೆಗೆ ಜಿಲ್ಲೆಯಾದ್ಯಂತ ನಿಷೇಧಾಜ್ಞೆ ಜಾರಿ Read More »

ಮನೆ ಮಂಜೂರಾತಿಗೆ ಅರ್ಜಿ ಸಲ್ಲಿಸಲು ಫೆ.28 ಕೊನೆಯ ದಿ‌ನ

ದಾವಣಗೆರೆ,ಫೆ,16 : ಡಾ ಬಿ.ಆರ್ ಅಂಬೇಡ್ಕರ್ ಅಭಿವೃದ್ದಿ ನಿಗಮವು 2021-22 ನೇ ಸಾಲಿನ ಪರಿಶಿಷ್ಟ ಜಾತಿ ಅಲೆಮಾರಿ, ಅರೆಅಲೆಮಾರಿ, ಸೂಕ್ಷ್ಮ ಮತ್ತು ಅತಿಸೂಕ್ಷ್ಮ ಸಮುದಾಯಗಳ ಅಭಿವೃದ್ಧಿ ಕೋಶದ ವಸತಿ ಯೋಜನೆಯಡಿಯಲ್ಲಿ ಫಲಾಪೇಕ್ಷಿಗಳಿಂದ ಮನೆ ನಿರ್ಮಿಸಿಕೊಳ್ಳಲು ಅರ್ಜಿ ಆಹ್ವಾನಿಸಲಾಗಿದೆ. ಫಲಾಪೇಕ್ಷಿಗಳು ಅರ್ಜಿಯನ್ನು ಆನ್‍ಲೈನ್ ಮೂಲಕ www.adcl.karnataka.gov.in ಅಥವಾ ಆಫ್‍ಲೈನ್ ಮೂಲಕ ಅರ್ಜಿ ನಮೂನೆ ಡೌನ್‍ಲೋಡ್ ಮಾಡಿಕೊಂಡು ಅಗತ್ಯ ದಾಖಲಾತಿಗಳೊಂದಿಗೆ ನಿಗಮದ ಜಿಲ್ಲಾ ಕಚೇರಿಯಲ್ಲಿ ಸಲ್ಲಿಸಬಹುದಾಗಿದೆ. ಆಫ್‍ಲೈನ್ ಮೂಲಕ ಅರ್ಜಿ ಸಲ್ಲಿಸುವ ಫಲಾಪೇಕ್ಷಿಗಳು ನಿಗಮ/ಕೋಶದ ಜಿಲ್ಲಾ ಕಛೇರಿಯನ್ನು ಸಂಪರ್ಕಿಸಿ ಉಚಿತವಾಗಿ

ಮನೆ ಮಂಜೂರಾತಿಗೆ ಅರ್ಜಿ ಸಲ್ಲಿಸಲು ಫೆ.28 ಕೊನೆಯ ದಿ‌ನ Read More »

ಹಿಜಾಬ್, ಕೇಸರಿ ಶಾಲು ವಿವಾದ

ದಾವಣಗೆರೆ,14 : ಜಿಲ್ಲೆಯಲ್ಲಿ ಶಾಂತಿಪಾಲನೆ ಮತ್ತು ಕಾನೂನು ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ದಾವಣಗೆರೆ ಜಿಲ್ಲೆಯಾದ್ಯಂತ ಫೆ.14 ರ ಬೆಳಿಗ್ಗೆ 06 ರಿಂದ ಫೆ.15 ರ ಬೆಳಿಗ್ಗೆ 6.00 ಗಂಟೆಯವರೆಗೆ ಭಾರತೀಯ ದಂಡ ಸಂಹಿತೆ 1973ರ ಕಲಂ 144 ರನ್ವಯ ನಿಷೇಧಾಜ್ಞೆ ಜಾರಿಗೊಳಿಸಿ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಅವರು ಆದೇಶ ಹೊರಡಿಸಿದ್ದಾರೆ. ನಿಷೇಧಿತ ಪ್ರದೇಶದ ವ್ಯಾಪ್ತಿಯಲ್ಲಿ ಯಾವುದೇ ಧರ್ಮದ ಅಥವಾ ಯಾವುದೇ ಸಂಘಟನೆಗಳ ಮುಖಂಡರುಗಳು ಮತ್ತು ನಾಯಕರುಗಳು ಶಾಲಾ ಕಾಲೇಜುಗಳ ಆವರಣದೊಳಗೆ ಪ್ರವೇಶಿಸುವುದನ್ನು ನಿಷೇಧಿಸಲಾಗಿದೆ. ಶಾಲಾ ಕಾಲೇಜುಗಳಲ್ಲಿ ಶಿಕ್ಷಕರು

ಹಿಜಾಬ್, ಕೇಸರಿ ಶಾಲು ವಿವಾದ Read More »

ಹೊಸ ನ್ಯಾಯಬೆಲೆ ಅಂಗಡಿ ಮಂಜೂರಾತಿಗೆ ಅರ್ಜಿ ಆಹ್ವಾನ

ದಾವಣಗೆರೆ,13: ದಾವಣಗೆರೆ ತಾಲ್ಲೂಕು ಚಟ್ಟೋಬನಹಳ್ಳಿ ತಾಂಡ ಹಾಗೂ ನರಗನಹಳ್ಳಿ ಗೊಲ್ಲರಹಟ್ಟಿ ಗ್ರಾಮದ ಪಡಿತರ ಚೀಟಿದಾರರ ಹಿತದೃಷ್ಠಿಯಿಂದ ಮತ್ತು ಸಾರ್ವಜನಿಕ ವಿತರಣಾ ವ್ಯವಸ್ಥೆಯನ್ನ ಪರಿಣಾಮಕಾರಿಗೊಳಿಸಲು ಈ ವ್ಯಾಪ್ತಿಯಲ್ಲಿ ಹೊಸದಾಗಿ ನ್ಯಾಯಬೆಲೆ ಅಂಗಡಿ ಮಂಜೂರು ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಭರ್ತಿ ಮಾಡಿದ ಅರ್ಜಿಗಳನ್ನು ಅಗತ್ಯ ದೃಢೀಕೃತ ದಾಖಲೆಗಳೊಂದಿಗೆ ಪ್ರಕಟಣೆ ಹೊರಡಿಸಿದ ದಿನಾಂಕದಿಂದ 30 ದಿವಸದೊಳಗಾಗ ಜಂಟಿ ನಿರ್ದೇಶಕರು, ಆಹಾರ ನಾಗರೀಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಇಲಾಖೆ ದಾವಣಗೆರೆ ಇವರಿಗೆ ಸಲ್ಲಿಸಬೇಕು. ಚಟ್ಟೋಬನಹಳ್ಳಿ ತಾಂಡ ಗ್ರಾಮ ವ್ಯಾಪ್ತಿಗೆ ಮಂಜೂರು ಮಾಡಲು

ಹೊಸ ನ್ಯಾಯಬೆಲೆ ಅಂಗಡಿ ಮಂಜೂರಾತಿಗೆ ಅರ್ಜಿ ಆಹ್ವಾನ Read More »

ಮಕ್ಕಳನ್ನು ವಸತಿ ಶಾಲೆಗೆ ಸೇರಿಸಬೇಕೆ

ದಾವಣಗೆರೆ,7 : ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ವ್ಯಾಪ್ತಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ವಸತಿ ಶಾಲೆಗಳಿಗೆ 2022-2023 ನೇ ಶೈಕ್ಷಣಿಕ ಸಾಲಿನಲ್ಲಿ 6ನೇ ತರಗತಿ ಪ್ರವೇಶಕ್ಕಾಗಿ ವಿದ್ಯಾರ್ಥಿಗಳಿಂದ ಆನ್‍ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ಮೊರಾರ್ಜಿ ದೇಸಾಯಿ, ಕಿತ್ತೂರು ರಾಣಿ ಚೆನ್ನಮ್ಮ, ಇಂದಿರಾಗಾಂಧಿ, ಡಾ.ಬಿ.ಆರ್.ಅಂಬೇಡ್ಕರ್, ಪರಿಶಿಷ್ಟ ಜಾತಿ/ಪರಿಶಿಷ್ಟ ವರ್ಗಗಳ ಪ್ರತಿಭಾನ್ವಿತ ವಸತಿ ಶಾಲೆ ಹಾಗೂ ಮಾಯಕೊಂಡ ವಸತಿ ಶಾಲೆಗಳಿಗೆ 6ನೇ ತರಗತಿ ಪ್ರವೇಶಕ್ಕಾಗಿ ಆನ್‍ಲೈನ್‍ನಲ್ಲಿ ಅರ್ಜಿ ಆಹ್ವಾನಿಸಲಾಗಿದೆ. ಪ್ರಸ್ತುತ 5ನೇ ತರಗತಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ಸಮೀಪದ ವಸತಿ

ಮಕ್ಕಳನ್ನು ವಸತಿ ಶಾಲೆಗೆ ಸೇರಿಸಬೇಕೆ Read More »

Translate »
Scroll to Top