ದಾಖಲೆಯಿಲ್ಲದ 8.23 ಲಕ್ಷ ಹಣ ಪೊಲೀಸರ ವಶ

ಕಂಪ್ಲಿ: ಲೋಕಸಭೆ ಸಾರ್ವತ್ರಿಕ ಚುನಾವಣೆ ಅಂಗವಾಗಿ ಮಾದರಿ ನೀತಿ ಸಂಹಿತೆಯು ಕಟ್ಟುನಿಟ್ಟಾಗಿ ಜಾರಿಯಲ್ಲಿದ್ದು, 91-ಕಂಪ್ಲಿ ವಿಧಾನಸಭಾ ಕ್ಷೇತ್ರದ  ವ್ಯಾಪ್ತಿಯಲ್ಲಿ ಬರುವ ಕಂಪ್ಲಿ-ಕೋಟೆ ಚೆಕ್ ಪೋಸ್ಟ್‌ನಲ್ಲಿ ಶುಕ್ರವಾರ ಮಾದರಿ ನೀತಿ ಸಂಹಿತೆ ಉಲ್ಲಂಘಿಸಿ ಅನಧಿಕೃತವಾಗಿ ದಾಖಲೆ ಇಲ್ಲದೇ ಸಾಗಿಸುತ್ತಿದ್ದ  8ಲಕ್ಷ23 ಸಾವಿರ ರೂಪಾಯಿ ಹಣವನ್ನು ಕಂಪ್ಲಿ ಪೊಲೀಸರು ವಶಕ್ಕೆ ಪಡೆಸಿದ್ದಾರೆ.

ಕಂಪ್ಲಿಯಿಂದ ಗಂಗಾವತಿ ಕಡೆಗೆ ದ್ವಿಚಕ್ರ ವಾಹನದಲ್ಲಿ  ತೆರಳುತ್ತಿದ್ದ ಮೂರು ಬೈಕ್‌ಗಳಲ್ಲಿ ಮೂರು ಜನರ ಬ್ಯಾಗಗಳನ್ನು ತಪಾಸಣೆ ನಡೆಸುವ ಸಂದರ್ಭದಲ್ಲಿ ಒಂದು ಬ್ಯಾಗ್‌ನಲ್ಲಿ 6 ಲಕ್ಷದ 5 ಸಾವಿರ  , ಇನ್ನೋರ್ವನ ಬ್ಯಾಗ್‌ನಲ್ಲಿ 1 ಲಕ್ಷ ರೂ ಹಾಗೂ  ಮತ್ತೊಬ್ಬನ ಬ್ಯಾಗ್‌ನಲ್ಲಿ 1 ಲಕ್ಷ 18 ಸಾವಿರ ರೂಪಾಯಿ ಒಟ್ಟಾರೆ ಮೂರು ಜನ ವ್ಯಕ್ತಿಗಳಿಂದ 8 ಲಕ್ಷದ 23 ಸಾವಿರ ರೂಪಾಯಿಗಳನ್ನು ವಶಕ್ಕೆ ಪಡೆದಿದ್ದಾರಲ್ಲದೆ, ದ್ವಿಚಕ್ರ ವಾಹನಗಳನ್ನು  ಸಹ ಜಫ್ತು ಮಾಡಿ ತನಿಖೆ ಕೈಗೊಂಡಿರುವ ಲೋಕಸಭಾ ಚುನಾವಣಾ ಎಸ್.ಎಸ್.ಟಿ ತಂಡ ಹಾಗೂ ಕಂಪ್ಲಿ ಪೊಲೀಸ್ ಠಾಣೆಯ 91-ವಿಧಾನಸಭಾ ಕ್ಷೇತ್ರದ ನೋಡಲ್ ಅಧಿಕಾರಿ ಪಿ.ಐ ಪ್ರಕಾಶ ಮಾಳಿ ಈ ಕುರಿತು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಈ ಸಂದರ್ಭದಲ್ಲಿ ಕಂಪ್ಲಿ ಪೊಲೀಸ್ ಠಾಣೆಯ ಪಿ.ಐ ಪ್ರಕಾಶ ಮಾಳಿ, ಪಿಎಸ್‌ಐ ಎನ್.ಶೇಷಾಚಲನಾಯ್ಡು, ಎಸ್.ಎಸ್.ಟಿ ತಂಡದ ಸಿಬ್ಬಂದಿ ಶ್ರೀಕಾಂತ, ಪೊಲೀಸ್ ಸಿಬ್ಬಂದಿಗಳಾದ ಬಸಪ್ಪ, ಈರಪ್ಪ ದುದುಮಿ ಸೇರಿದಂತೆ ಅನೇಕರಿದ್ದರು.

Facebook
Twitter
LinkedIn
WhatsApp
Email
Print
Telegram

Leave a Comment

Your email address will not be published. Required fields are marked *

Translate »
Scroll to Top