7.50 ದಶಲಕ್ಷ ಲೀಟರ್ ಸಾಮರ್ಥ್ಯದ ಚೌಕಾಕಾರದ ನೆಲಮಟ್ಟದ ಜಲ ಸಂಗ್ರಹಾರ ಲೋಕಾರ್ಪಣೆ

ಬೆಂಗಳೂರು, ಜನವರಿ 31: ಪ್ರತಿಯೊಬ್ಬರೂ ನೀರನ್ನು ವ್ಯರ್ಥ ಮಾಡದೇ ಸದುಪಯೋಗ ಪಡಿಸಿಕೊಳ್ಳಬೇಕೆಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. ಅವರು ಇಂದು ಜಗದೀಶ್ ನಗರದಲ್ಲಿ 7.50 ದಶಲಕ್ಷ ಲೀಟರ್ ಸಾಮರ್ಥ್ಯದ ಚೌಕಾಕಾರದ ನೆಲಮಟ್ಟದ ಜಲ ಸಂಗ್ರಹಾರವನ್ನು ಲೋಕಾರ್ಪಣೆ ನೆರವೇರಿಸಿ ಮಾತನಾಡಿದರು.

ಈ ಯೋಜನೆಯಿಂದ ಒಂಭತ್ತು ಪ್ರಮುಖ ಬಡಾವಣೆಗಳಿಗೆ ನೀರನ್ನು ಒದಗಿಸಲಾಗುವುದು. ಕೆ.ಆರ್.ಪುರಂನ ಸಮಗ್ರ ಅಭಿವೃದ್ಧಿಗೆ ದಾಖಲೆಯ ಕೆಲಸಗಳನ್ನು ಸಚಿವ ಬಿ.ಎ.ಬಸರಾಜ ಅವರು ಮಾಡಿದ್ದು, ಆ ಪೈಕಿ ಜಿ.ಎಲ್.ಆರ್ ಕೆಲಸವೂ ಒಂದು. ಜನಪರ, ಜನರ ಬಗ್ಗೆ ಕಳಕಳಿ ಇರುವ ಜನ ಸೇವಕರಾಗಿ ಕೆಲಸವನ್ನು ಭೈರತಿ ಬಸವರಾಜ ಅವರು ಮಾಡುತ್ತಿದ್ದಾರೆ ಎಂದರು. ಸಚಿವರಾದ ಬಿ.ಎ. ಬಸವರಾಜ, ಡಾ: ಕೆ.ಸುಧಾಕರ್, ಎಸ್.ಟಿ.ಸೋಮಶೇಖರ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Leave a Comment

Your email address will not be published. Required fields are marked *

Translate »
Scroll to Top