ಪರಿಶೀಷ್ಟ ಪಂಗಡ ಕ್ಕೆ 7.5% ಮತ್ತು ಪರಿಶಿಷ್ಟ ಜಾತಿಗೆ 17.5% ಶೈಕ್ಷಣಿಕ ಮತ್ತು ಉದ್ಯೋಗ ಕ್ಷೇತ್ರದಲ್ಲಿ ಮಿಸಲಾತಿ ನೀಡಬೇಕು

ಮೊಳಕಾಲ್ಮೂರು : ನಾಗಮೋಹನದಾಸ್ ಆಯೋಗದ ವರದಿಯ ಅನುಷ್ಠಾನದಲ್ಲಿ ಹೇಳಿರುವಂತೆ 7.5ಎಸ್ ಟಿ ಮತ್ತು ಎಸ್ ಸಿ ಸಮುದಾಯಕ್ಕೆ 17% ಮೀಸಲಾತಿ ನೀಡಬೇಕು ಮತ್ತು ಸಂವಿಧಾನದ ಹಕ್ಕು ಪಡೆಯುವವಲ್ಲಿ ನಾವುಗಳು ಪ್ರಸಾನ್ನಂದ ಪುರಿ ಸ್ವಾಮೀಜಿಗಳು ಈಗಾಗಲೇ ಅವರು ಮಾಡುವಂತಹ ಧರಣಿಗೆ 100ದಿನಗಳು ಮುಗಿದಿದೆ ಆದರೆ ಸರ್ಕಾರದವರು ಮಾತ್ರ ಇತ್ತ ಗಮನ ಹರಿಸದೇ ಇರುವುದು ದುರದೃಷ್ಟಕರ ಸಂಗತಿಯಾಗಿದೆ. ನಾವುಗಳು ರಾಜ್ಯದಾದ್ಯಂತ ರಸ್ತೆ ಚಳುವಳಿ ನಡೆಸಿ ರಾಜ್ಯ ಸರ್ಕಾರ ಗಮನ ಸೆಳೆಯಬೇಕು ಎಂದು ಮಾಜಿ ಜಿ. ಪ ಸದಸ್ಯರು ಡಾ ಯೋಗೇಶ್ ಬಾಬು ಪ್ರತಿಭಟನೆಯ ಸಂದರ್ಭದಲ್ಲಿ ಹೇಳಿದರು. ಪಟ್ಟಣ ಕೆ ಈ ಬಿ ವೃತ್ತ ದಿಂದ ಜಾತಾ ಮಾಡಿ ತಾಲ್ಲೂಕ ಕಚೇರಿಗೆ ಆಗಮಿಸಿ ತಹಸೀಲ್ದಾರ್ ರವರಿಗೆ ಮನವಿ ಸಲ್ಲಿಸಿ ಮಾತಾಡಿದರು.

ಕರ್ನಾಟಕದಲ್ಲಿ ಎಸ್. ಸಿ ಮತ್ತು ಎಸ್ ಟಿ ಜನಾಂಗದ ಜನತೆಯು ಚುನಾವಣೆಯಲ್ಲಿ ನಿರ್ಣಯಕ ಸಮುದಾಯಗಳಾಗಿದ್ದು ಇಂತಹ ಜನಾಂಗಕ್ಕೆ ಸಂವಿಧಾನದ ಹಕ್ಕು ನೀಡುವಲ್ಲಿ ವಿಫಲವಾಗಿದೆ. ನಾಗಮೋಹ ದಾಸ್ ವಾರದಿಯಂತೆ ಎಸ್. ಸಿ ಜನಾಂಗಕ್ಕೆ 17% ಮತ್ತು ಎಸ್ ಟಿ ಜನಾಂಗದ ಸಮುದಾಯಕ್ಕೆ 7.5% ಮೀಸಲಾತಿ ನೀಡಬೇಕು ಎಂದು ಬಹುದಿನಗಳ ಬೇಡಿಕೆಯಾಗಿದ್ದು ಸರ್ಕಾರ ಸ್ಪಂದಿಸದೇ ಇರುವುದು ದುಃಖಕರ ಸಂಗತಿಯಾಗಿದೆ. ಹರಿಹರ ವಾಲ್ಮೀಕಿ ಪೀಠದ ಮಹಾ ಸ್ವಾಮೀಜಿಯವರು ಧರಣಿ ಸತ್ಯಾಗ್ರಹ ಕುಳಿತು 100ದಿನಗಳು ಮುಗಿದರೂ ಸರ್ಕಾರದ ಅಧಿಕಾರಿ ವರ್ಗ ಮತ್ತು ಮುಖ್ಯಮಂತ್ರಿ ಸಚಿವರು ಹೋಗಿ ಸಾಮಾನ್ಯ ವಿಚಾರಣೆ ಕೂಡ ಮಾಡಿಲ್ಲ ಎನ್ನುವುದು ನೋವಿನ ಸಂಗತಿ ಯಾಗಿದೆ. ಈಗಲೂ ಕೈ ಮೀರಿಲ್ಲ ಮುಂದಿನ ದಿನಗಳಲ್ಲಿ ಇತ್ತ ಕಡೆ ಗಮನ ಹರಿಸಬೇಕು. ಈ ಮೀಸಲಾತಿಯು ನಮ್ಮ ಸಮುದಾಯದ ಶೈಕ್ಷಣಿಕ ಮತ್ತು ಉದ್ಯೋಗ ಪಡೆಯುವಲ್ಲಿ ಸಹಕಾರಿಯಾಗುತ್ತದೆ. ನಮ್ಮ ಸಮುದಾಯಗಳ ಅಭಿವೃದ್ಧಿಗಾಗಿ ನೀಡಿದ ಈ ಮೀಸಲಾತಿಯನ್ನು ನೀಡಬೇಕು ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಹೇಳಿದರು. ಕರ್ನಾಟಕ ರಾಜ್ಯ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಹೋರಾಟ ಸಮಿತಿ ಸಂಚಾಲಕರು ಬಿ. ವಿಜಯ ಕುಮಾರ್ ರವರು ಮಾತನಾಡಿ

ನಾಗಮೋಹನ್ ದಾಸ್ ವರಿದಿಯ ಅನುಷ್ಠಾನದಲ್ಲಿ ಮೀಸಲಾಯಂತೆ ಪರಿಶೀಷ್ಟ ಪಂಗಡ ಕ್ಕೆ 7.5% ಮತ್ತು ಪರಿಶಿಷ್ಟ ಜಾತಿಗೆ 17.5% ಶೈಕ್ಷಣಿಕ ಮತ್ತು ಉದ್ಯೋಗ ಕ್ಷೇತ್ರದಲ್ಲಿ ನೀಡಬೇಕು ಎಂದು ನೀಡಬೇಕು ಎಸ್. ಟಿ ಮೀಸಲಾತಿಗಾಗಿ ಸ್ವಾಮೀಜಿಗಳ ಹೋರಾಟ ನಮ್ಮ ತಾಳಸಮುದಾಯದ ಶೈಕ್ಷಣಿಕ ಮತ್ತು ಉದ್ಯೋಗದಲ್ಲಿ ಮೀಸಲಾತಿ ನೀಡಿದ್ದಲ್ಲಿ ನಮ್ಮ ಸ್ವಾಭಿಮಾನ ಜನತೆ ಅಭಿವೃದ್ಧಿ ಹೊಂದುವ ಉದ್ದೇಶದಿಂದ ನಡೆಸುತ್ತಿದ್ದೇವೆ. ಈ ಹೋರಾಟವು ಕೇವಲ ಮೊಳಕಾಲ್ಮುರು ತಾಲ್ಲೂಕು ಅಲ್ಲದೆ ರಾಜ್ಯದ ಎಲ್ಲಾ ತಾಲ್ಲೂಕಿನಲ್ಲಿ ಹಮ್ಮಿಕೊಂಡು ಸರ್ಕಾರ ಗಮನಕ್ಕೆ ತರಬೇಕಾಗಿದೆ ಎಂದು ಹೇಳಿದರು. ಸಂದರ್ಭದಲ್ಲಿ ಎಸ್ ಸಿ ಸೆಲ್ ಜಲ್ಲಾ ಅಧ್ಯಕ್ಷರು ಮೊಗಳಹಳ್ಳಿ ಜಯಣ್ಣ, ಡಿ ಎಸ್ ಎಸ್ ಸಂಘದ ಸಂಚಾಲಕರು ಕೊಂಡಾಪುರ ಪರಮೇಶ್ವರಪ್ಪ, ಬಿಜಿಕೆರೆ ನಾಗಭೂಷಣ್,ಎಸ್. ಟಿ ಮೋರ್ಚಾ ಅಧ್ಯಕ್ಷರು ಜೀರಹಳ್ಳಿ ತಿಪ್ಪೇಸ್ವಾಮಿ ನಾಯಕ ಸಮುದಾಯದ ಹಿರಿಯ ಮುಖಂಡರು ಜಗಳೂರಯ್ಯ ಮಾರನಾಯಕ, ಬಡೊಬನಾಯಕ ಗುರುರಾಜಯ್ಯ ಏನ್ ಬಿ ಗೋವಿಂದಪ್ಪ, ನಾಗರಾಜ್ ಕಟ್ಟೆ, ಯಾರ್ಜೆನಹಳ್ಳಿ ನಾಗರಾಜ್,ಕೋನ ಸಾಗರ ಪಾಲಯ್ಯ ಸಿ ಪಿ ಐ ಪೆನ್ನಯ್ಯ ಬಿಜಿಕೆರೆ ಸಿ ಪಿ ಐ ಜಾಫರ್ ಷರೀಫ್, ಮಾರಣ್ಣ ಯುವ ಮೋರ್ಚಾ ಅಧ್ಯಕ್ಷರು, ರಮೇಶ್ ಗೋವಿಂದಪ್ಪ ಹಾಗೂ ವಾಲ್ಮೀಕಿ ಸಮುದಾಯದ ಯುವಕರು ಭಾಗವಹಿಸಿದ್ದರು

Leave a Comment

Your email address will not be published. Required fields are marked *

Translate »
Scroll to Top