ಮುಂಬೈ: ಮಹಾರಾಷ್ಟ್ರ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಕಾಂಗ್ರೆಸ್‌ನ ವಿಜಯ್ ವಾಡೆತ್ತಿವಾರ್ ಹೇಳಿಕೆಯಿಂದ ರಾಜ್ಯ ರಾಜಕೀಯದಲ್ಲಿ ಕೋಲಾಹಲ ಉಂಟಾಗಿದೆ. ೨೦೦೮ರ ಮುಂಬೈ ದಾಳಿಯ ಸಂರ‍್ಭದಲ್ಲಿ ರಾಜ್ಯ ಭಯೋತ್ಪಾದನಾ ನಿಗ್ರಹ ದಳದ (ಎಟಿಎಸ್) ಮಾಜಿ ಮುಖ್ಯಸ್ಥ ಐಪಿಎಸ್ ಹೇಮಂತ್ ರ‍್ಕರೆ ಅವರನ್ನು ಪಾಕಿಸ್ತಾನಿ ಭಯೋತ್ಪಾದಕ ಕಸಬ್ ಕೊಂದಿಲ್ಲ ಎಂದು ವಿಜಯ್ ವಾಡೆಟ್ಟಿವಾರ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಐಪಿಎಸ್ ಅಧಿಕಾರಿ ಹೇಮಂತ್ ರ‍್ಕರೆ ಅವರನ್ನು ಕೊಂದ ಬುಲೆಟ್ ಕಸಬ್ ಅಥವಾ ಭಯೋತ್ಪಾದಕರಿಂದ ಹಾರಿಸಲಾಗಿಲ್ಲ, ಆದರೆ ಆರ್‌ಎಸ್‌ಎಸ್ ಜೊತೆ ಲಿಂಕ್ ಇರುವ ಪೊಲೀಸ್ ಅಧಿಕಾರಿ ಬಂದೂಕಿನಿಂದ ಹಾರಿದ ಗುಂಡಿಗೆ ಬಲಿಯಾಗಿದ್ದಾರೆ ಎಂದು ಅವರು ಹೇಳಿದ್ದಾರೆ.
ಎಟಿಎಸ್ ಮಾಜಿ ಮುಖ್ಯಸ್ಥ ಹೇಮಂತ್ ರ‍್ಕರೆ ಅವರನ್ನು ಉಲ್ಲೇಖಿಸಿ ವಿಜಯ್ ವಾಡೆಟ್ಟಿವಾರ್ ಮುಂಬೈನ ಬಿಜೆಪಿ ಅಭ್ರ‍್ಥಿ ಉಜ್ವಲ್ ನಿಕಮ್ ವಿರುದ್ಧ ವಾಗ್ದಾಳಿ ನಡೆಸಿದರು. ‘ಬಿರಿಯಾನಿ ವಿಷಯ ಪ್ರಸ್ತಾಪಿಸಿ ನಿಕಂ ಕಾಂಗ್ರೆಸ್‌ಗೆ ಮಾನಹಾನಿ ಮಾಡಿದ್ದಾರೆ. ಕಸಬ್ ಗೆ ಯಾರಾದರೂ ಬಿರಿಯಾನಿ ಕೊಡುತ್ತಾರಾ? ನಂತರ ಉಜ್ವಲ್ ನಿಕಮ್ ಅವರು ಎಂತಹ ವಕೀಲರು, ಅವರು ನ್ಯಾಯಾಲಯದಲ್ಲಿ ಸಾಕ್ಷಿ ಹೇಳಲು ಸಹ ಬಾರದ ದೇಶದ್ರೋಹಿ, ಮುಂಬೈ ಪೊಲೀಸ್ ಅಧಿಕಾರಿ ಹೇಮಂತ್ ರ‍್ಕರೆಯನ್ನು ಕೊಂದ ಬುಲೆಟ್ ಕಸಬ್‌ನ ಬಂದೂಕಿನದ್ದಲ್ಲ, ಆ ಸಮಯದಲ್ಲಿ ಆರ್‌ಎಸ್‌ಎಸ್‌ಗೆ ನಿಷ್ಠರಾಗಿದ್ದ ಪೊಲೀಸ್ ಅಧಿಕಾರಿ. ಈ ಸತ್ಯವನ್ನು ನ್ಯಾಯಾಲಯಕ್ಕೆ ಮರೆಮಾಚಿದ ದೇಶದ್ರೋಹಿಗಳಿಗೆ ಬಿಜೆಪಿ ಟಿಕೆಟ್ ನೀಡುತ್ತಿದ್ದರೆ, ಬಿಜೆಪಿ ಈ ದೇಶದ್ರೋಹಿಗಳಿಗೆ ಏಕೆ ಬೆಂಬಲ ನೀಡುತ್ತಿದೆ ಎಂದು ಪ್ರಶ್ನೆ ಮಾಡಿದ್ದಾರೆ.
ಹೇಳಿಕೆ ವೈರಲ್ ಆಗುತ್ತಿದ್ದಂತೆ ವಡೆತ್ತಿವಾರ್ ತಮ್ಮ ಹೇಳಿಕೆಗೆ ಸ್ಪಷ್ಟನೆ ನೀಡಿದ್ದು, ‘ಅದು ನನ್ನ ಮಾತುಗಳಲ್ಲ, ಎಸ್.ಎಂ.ಮುಶ್ರೀಫ್ ಅವರ ಪುಸ್ತಕದಲ್ಲಿ ಬರೆದಿದ್ದನ್ನೇ ಹೇಳಿದ್ದೇನೆ. ಪುಸ್ತಕದಲ್ಲಿ ಸಂಪರ‍್ಣ ಮಾಹಿತಿ ಇತ್ತು. ಹೇಮಂತ್ ರ‍್ಕರೆ ಹೊಡೆದ ಗುಂಡು ಭಯೋತ್ಪಾದಕ ಸಿಡಿಸಿದ ಬುಲೆಟ್ ಅಲ್ಲ…’
ವಿಜಯ್ ವಡೆತ್ತಿವಾರ್ ಹೇಳಿಕೆಗೆ ಸಂಬಂಧಿಸಿದಂತೆ ಬಿಜೆಪಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸುತ್ತಿದೆ. ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕರ‍್ಯರ‍್ಶಿ ವಿನೋದ್ ತಾವ್ಡೆ ಮಾತನಾಡಿ, ‘ಕಾಂಗ್ರೆಸ್ ತನ್ನ ವಿಶೇಷ ಮತಬ್ಯಾಂಕ್ ಅನ್ನು ಮೆಚ್ಚಿಸಲು ಮತ್ತು ಮತ ಪಡೆಯಲು ಯಾವುದೇ ಮಟ್ಟಕ್ಕೂ ಇಳಿಯಬಹುದು. ೨೬/೧೧ ಭಯೋತ್ಪಾದಕರಿಗೆ ಕ್ಲೀನ್ ಚಿಟ್ ನೀಡುವ ಮೂಲಕ ಮಹಾರಾಷ್ಟ್ರದ ಹಿರಿಯ ಕಾಂಗ್ರೆಸ್ ನಾಯಕ ಮತ್ತು ಲೋಪಿ ವಿಜಯ್ ವಾಡೆಟ್ಟಿವಾರ್ ಇದನ್ನು ಸಾಬೀತುಪಡಿಸಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.