‘ಅಹಂಕಾರದ ಪರಮಾವಧಿ’: ಸರ್ಕಾರಕ್ಕೆ ಬಿಜೆಪಿ ಟೀಕೆ

ಬೆಂಗಳೂರು: ಸರಕಾರಕ್ಕೆ ಕೇಸರಿ ಎಂದರೆ ದ್ವೇಷ, ಶತ್ರುಭಾವ! ಇಂದು ನಡೆದಾಡುವ ದೇವರು, ಕಾಯಕಯೋಗಿ, ತ್ರಿವಿಧದಾಸೋಹಿ ಪರಮ ಪೂಜ್ಯನೀಯ ಡಾ।। ಶ್ರೀ ಶ್ರೀ ಶ್ರೀ ಶಿವಕುಮಾರ ಮಹಾಸ್ವಾಮೀಜಿಯವರ ಭಾವಚಿತ್ರವನ್ನು ವಿಧಾನಸೌಧದ ಕೊಠಡಿಯಿಂದ ತೆರವುಗೊಳಿಸಿ ಪಡಸಾಲೆಯಲ್ಲಿ ಉರುಳಾಡುವಂತೆ ಮಾಡಿ ಅಪಮಾನಿಸಿರುವುದು ಅಕ್ಷಮ್ಯ ಅಪರಾಧ! ಎಂದು ಬಿಜೆಪಿ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದು, ಸಿಎಂ ಸಿದ್ದರಾಮಯ್ಯನವರ ನಡವಳಿಕೆಗೆ ಟೀಕೆ ಬಿಜೆಪಿ ಟೀಕೆ ಮಾಡಿದೆ.

ಈ ಸಂಬಂಧ ಟ್ವೀಟ್ ಮಾಡಿದ ಬಿಜೆಪಿ ರಾಜ್ಯ ಘಟಕವು, ಕರ್ನಾಟಕದ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರು, ಈ ಕೂಡಲೆ ರಾಜ್ಯದ ಜನತೆಯ ಕ್ಷಮೆ ಕೋರಿ ಪೂಜ್ಯ ಸ್ವಾಮೀಜಿಯವರ ಭಾವಚಿತ್ರವನ್ನು ಸಕಲ ಗೌರವಗಳೊಂದಿಗೆ ಪುನಃ ಲಗತ್ತಿಸಲು ಆಗ್ರಹಿಸುತ್ತೇವೆ ಎಂದು ಒತ್ತಾಯಿಸಲಾಗಿದೆ.

Facebook
Twitter
LinkedIn
WhatsApp

Leave a Comment

Your email address will not be published. Required fields are marked *

Translate »
Scroll to Top