ಬೆಂಗಳೂರು: ಸಹಕಾರ ಕ್ಷೇತ್ರದಲ್ಲಿ ಯುವ ಸಮೂಹ ಹೆಚ್ಚಿನ ಪ್ರಮಾಣದಲ್ಲಿ ತೊಡಗಿಸಿಕೊಳ್ಳಬೇಕು ಎಂದು ಸಹಕಾರ ಸಚಿವ ಕೆ.ಎನ್. ರಾಜಣ್ಣ ಹೇಳಿದ್ದಾರೆ.
ಯುವ ಸಹಕಾರಿ ಧುರೀಣ ಡಾ. ಬಿ.ಎಂ. ಉಮೇಶ್ ಕುಮಾರ್ ಅವರು ರಾಜ್ಯ ಸರ್ಕಾರದ “ಸಹಕಾರ ರತ್ನ” ಪ್ರಶಸ್ತಿಗೆ ಪಡೆದ ಹಿನ್ನೆಲೆಯಲ್ಲಿ “ಗ್ಲೋಬಲ್ ಸಿಟಿ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಲಿ” ನಿಂದ ಬೆಂಗಳೂರಿನ ರಮಣ ಶ್ರೀ ಹೋಟೆಲ್ ಸಭಾಂಗಣದಲ್ಲಿ ಆಯೋಜಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದ ಅವರು, ಸಹಕಾರ ರತ್ನ ಪ್ರಶಸ್ತಿಯ ಮೂಲಕ ಉಮೇಶ್ ಕುಮಾರ್ ಅವರ ಜವಾಬ್ದಾರಿ ಹೆಚ್ಚಾಗಿದೆ. ಅವರಿನ್ನೂ ಯುವಕರಾದ ಕಾರಣ ಸಾಧನೆ ಮಾಡಲು ತುಂಬಾ ಅವಕಾಶಗಳಿವೆ. ಉಮೇಶ್ ಕುಮಾರ್ ಅವರಂತಹ ಯುವಕರು ಸಹಕಾರ ಕ್ಷೇತ್ರದಲ್ಲಿ ಇನ್ನಷ್ಟು ಸಾಧನೆಗಳನ್ನು ಮಾಡಬೇಕು.” ಎಂದು ಶುಭ ಹಾರೈಸಿದರು.
ಸಹಕಾರ ಇಲಾಖೆಯ ಮಾಜಿ ಕಾರ್ಯದರ್ಶಿ ಡಾ. ಸಿ. ಸೋಮಶೇಖರ, ಐ.ಎ.ಎಸ್ (ನಿ.), ಬ್ಯಾಂಕಿನ ಉಪಾಧ್ಯಕ್ಷ ನಾರಾಯಣ ಟಿ. ಅವರು ಹಾಗೂ ನಿರ್ದೇಶಕ ರುಗಳು ಸಹಕಾರ ಕ್ಷೇತ್ರದ ಹಲವು ಗಣ್ಯರು ಈ ಸಮಾರಂಭದಲ್ಲಿ ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ ಬ್ಯಾಂಕಿನ ಹಿರಿಯ ಗ್ರಾಹಕರನ್ನು ಸನ್ಮಾನಿಸಲಾಯಿತು.