ಬೆಂಗಳೂರು.,ಮಾ,20 : ಒಂದು ಕಾಲದಲ್ಲಿ ಕೈಕಾಲಿಗೆ ತೊಡರುವ ಪ್ರಮಾಣ ಮತ್ತು ನಿಕಟತೆಯಲ್ಲಿದ್ದ ಗುಬ್ಬಚ್ಚಿಗಳು ಜಾಗತಿಕವಾಗಿ ಕಣ್ಮರೆಯೇ ಆದಂತಾಗಿದ್ದು ಕಳವಳಕಾರಿ ವಿಷಯ. ಇದು ಮಾನವನಿಂದಾಗಿಯೇ ಆದ ದುರಂತ. ಇದಕ್ಕೆ ಕಾರಣಗಳು ಹಲವು.

*ಅತಿವೇಗವಾಗಿ ಬದಲಾದ ನಮ್ಮ ಮನೆಯ ವಿನ್ಯಾಸ ಗುಬ್ಬಿಗಳಿಗೆ ಗೂಡುಕಟ್ಟಲು ಅವಕಾಶ ಮಾಡಿಕೊಡುವುದಿಲ್ಲ.
*ಸೀಸರಹಿತ ಪೆಟ್ರೋಲು ದಹಿಸಿದಾಗ ಉಂಟಾಗುವ ಮೀಥೈಲ್ ನೈಟ್ರೇಟ್ ಗುಬ್ಬಿಗಳು ತಮ್ಮ ಮರಿಗಳಿಗೆ ಮೊದಲ ಕೆಲವು ದಿನಗಳು ತಿನ್ನಿಸುವ ಕೀಟಗಳನ್ನು ಕೊಲ್ಲುತ್ತವೆ. ಹಾಗಾಗಿ ಗುಬ್ಬಿಗಳ ಸಂತತಿ ಅಳಿಯುತ್ತಿದೆ ಎಂಬುದು ಒಂದು ಪ್ರಬಲ ಸಿದ್ಧಾಂತ.
*ಹಿಂದೆ ಮನೆಯ ಮುಂದೆ ಅಂಗಡಿ ಮುಂಗಟ್ಟುಗಳ ಮುಂದೆ ಗುಬ್ವಿಗಳಿಗೆ ಯಥೇಚ್ಛವಾಗಿ ಆಹಾರ ದೊರಕುತ್ತಿತ್ತು ಅದು ಈಗ ಇಲ್ಲವಾಗಿದೆ.

ಹೀಗೆ ಅನೇಕ ಕಾರಣಗಳು ಗುಬ್ಬಿಯ ಅವನತಿಗೆ ಉಂಟು. ಆದರೆ ಸಂತೋಷ ಹಾಗೂ ಆಶ್ಚರ್ಯದ ಸಂಗತಿಯೆಂದರೆ ಗುಬ್ಬಿಗಳ ಸಂಖ್ಯೆ ಹೆಚ್ಚುತ್ತಿದೆ ಎಂಬುದು. ಇದಕ್ಕೆ ಅನೇಕ ಕಾರಣ ಸಿದ್ಧಾಂತಗಳನ್ನು ಹೇಳಲಾಗುತ್ತಿದ್ದರೂ ಅವುಗಳ ಸಂಖ್ಯೆ ಚೇತರಿಸಿಕೊಳ್ಳುತ್ತಿವೆ ಎಂಬುದು ಸಂತೋಷದ ವಿಷಯ! ಅವು ಮತ್ತೆ ನಮ್ಮ ಅಂಗಳದಲ್ಲಿ ಆಡುವಂತಾಗಲಿ! ನಮ್ಮ ಪುಟ್ಟ ಮಕ್ಕಳು ಅವನ್ನು ಹಿಡಿಯುವ ಪ್ರಥ್ನ ಮಾಡುವುದನ್ನು ವೃದ್ಧ ತಾತಾಜ್ಜಿಯರು ಸಂತೋಷದಿಂದ ನೋಡುವ ಕಾಲ ಬರಲಿ!