ಜಯನಗರದಲ್ಲಿ ಎಲ್.ಸಿ.ಹೆಚ್.ರೆಸಿಡೆನ್ಸ್ ವೇಲ್ ಫೇರ್ ಅಸೋಸಿಯೇಷನ್ ನಿಂದ ಮಹಿಳಾ ದಿನಾಚರಣೆ

ಜನರ ನಡುವೆ ಇದ್ದಾಗ ಜನರ ಸಮಸ್ಯೆ ನಿವಾರಣೆ ಸಾಧ್ಯ, 5 ಗ್ಯಾರಂಟಿ ಯೋಜನೆಗಳಿಂದ ಕೋಟ್ಯಂತರ ಕುಟುಂಬಗಳಿಗೆ ಅನುಕೂಲ – ಆಡಳಿತ ಪಕ್ಷದ ಮಾಜಿ ನಾಯಕ ಎನ್.ನಾಗರಾಜು

ಜಯನಗರ : ಭೈರಸಂದ್ರ ವಾರ್ಡ್,ಎಲ್.ಐ.ಸಿ.ಕಾಲೋನಿಯ ಅಮ್ಮ, ಮಕ್ಕಳ ಉದ್ಯಾನವನದಲ್ಲಿ ಎಲ್.ಸಿ.ಹೆಚ್.ರೆಸಿಡೆನ್ಸ್ ವೆಲ್ ಫೇರ್ ಅಸೋಸಿಯೇಷನ್ ನಿಂದ ವಿಶ್ವ ಮಹಿಳಾ ದಿನಾಚರಣೆ ಆಯೋಜಿಸಲಾಗಿತ್ತು.

 

ಆಡಳಿತ ಪಕ್ಷದ ಮಾಜಿ ನಾಯಕ ಎನ್.ನಾಗರಾಜು, ಅಸೋಸಿಯೇಷನ್ ಅಧ್ಯಕ್ಷ ಪ್ರಾಂಕ್ ಮಾರ್ಥ, ಕಾರ್ಯದರ್ಶಿ ಟಿ.ಕೆ.ಪರಮೇಶ್ವರನ್, ಉಪಾಧ್ಯಕ್ಷರಾದ ಜಿ.ಎನ್.ಮಂಜುನಾಥ್ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಎನ್.ನಾಗರಾಜು ಮಾತನಾಡಿ, ಸಾರಿಗೆ ಮತ್ತು ಮುಜರಾಯಿ ಸಚಿವರಾದ ರಾಮಲಿಂಗಾರೆಡ್ಡಿ ಮಾರ್ಗದರ್ಶನದಲ್ಲಿ   ಭೈರಸಂದ್ರ ವಾರ್ಡ್ ಸಾಂಸ್ಕೃತಿಕ ಕೇಂದ್ರವಾಗಿದೆ. ಪ್ರತಿವರ್ಷ ಮಹಿಳಾ ದಿನಾಚರಣೆ, ಸ್ವಾತಂತ್ರ್ಯ ದಿನಾಚರಣೆ ಮತ್ತು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮವನ್ನು ಹಮ್ಮಿಕೊಂಡು ಬರಲಾಗುತ್ತಿದೆ. ಮಹಿಳಾ ವೈದ್ಯರು, ಪೌರ ಕಾರ್ಮಿಕ ಮಹಿಳೆಯರು ಮತ್ತು ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಮಹಿಳೆಯರನ್ನು ಗುರುತಿಸಿ ಸನ್ಮಾನಿಸಲಾಗುತ್ತಿದೆ ಎಂದರು.

 

ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಹತ್ತು ತಿಂಗಳಲ್ಲಿ ಚುನಾವಣೆ ಪೂರ್ವ ನೀಡಿದ 5 ಗ್ಯಾರಂಟಿ ಯೋಜನೆಗಳನ್ನು ನಾಡಿನ ಪ್ರತಿಯೊಂದು ಕುಟುಂಬಕ್ಕೆ ತಲುಪಿಸಿದೆ. ಜಯನಗರ ವಿಧಾನಸಭಾ ಕ್ಷೇತ್ರದ ಗ್ಯಾರಂಟಿ ಯೋಜನೆಗಳ ಅಧ್ಯಕ್ಷನಾಗಿ ತಮ್ಮನ್ನು ನೇಮಕ ಮಾಡಿದ್ದು, ಜನರ ನಡುವೆ ಇದ್ದಾಗ ಜನರ ಸಮಸ್ಯೆ ನಿವಾರಣೆ ಸಾಧ್ಯ ಮತ್ತು ಜನರ ಜೊತೆಯಲ್ಲಿ ನಿರಂತರ ಸಂಪರ್ಕದಿಂದ ಒಂದೇ ಕುಟುಂಬದ ಸದಸ್ಯರಂತೆ ಇರಲು ಸಾಧ್ಯ. ರಾಜಕೀಯದಲ್ಲಿ ಯಶ್ವಸಿಯಾಗಲು ನೀವು ಕಾರಣ, ನಿಮ್ಮ ಋಣ ತೀರಿಸುವ ಮಾಡುತ್ತಿದ್ದೇನೆ ಎಂದು ಹೇಳಿದರು.

ಎಲ್.ಸಿ.ಹೆಚ್.ರೆಸಿಡೆನ್ಸ್ ಅಸೋಸಿಯೇಷನ್ ಮಹಿಳೆಯರಿಂದ ಗೀತೆಗಾಯನ, ನೃತ್ಯ ಮತ್ತು ಡ್ಯಾನ್ಸ್ ವಿವಿಧ  ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗಿತ್ತು. ಸತ್ಯ ಹರಿಶ್ಚಂದ್ರ ಹಾಡಿಗೆ ಮಹಿಳೆಯರು ಮತ್ತು ನಾಗರಾಜು ಅವರು ಕುಣಿದು ಕುಪ್ಪಳಿಸಿದರು.

Facebook
Twitter
LinkedIn
WhatsApp
Telegram
Email
Print

Leave a Comment

Your email address will not be published. Required fields are marked *

Translate »
Scroll to Top