ದೇವರ ಅನುಗ್ರಹದಿಂದ ಎಲ್ಲವೂ ಸಾಧ್ಯ, ಜೊತೆಯಲ್ಲಿ ನಮ್ಮ ಪ್ರಯತ್ನವೂ ಬಹಳ ಮುಖ್ಯ

ದೇವನಹಳ್ಳಿ,ಜ,6 : ಕಳೆದ ಎರಡು ವರ್ಷಗಳಿಂದ ಮನುಕುಲವನ್ನು ಆವರಿಸಿ ಭಯಹುಟ್ಟಿಸಿದ ಕೋವಿಡ್ ಮಹಾಮಾರಿಯಿಂದ ಸಾವುನೋವುಗಳನ್ನು ಕಂಡಿದ್ದೇವೆ ಇದರ ಮುಕ್ತಿ ಹೊಂದಲು ದೇವರ ಪ್ರೇರೇಪಣೆಯಿಂದ ಮಾತ್ರ ಸಾಧ್ಯ ಜೊತೆಯಲ್ಲಿ ಸರ್ಕಾರ ಸೂಚಿಸಿದ ಮಾರ್ಗದರ್ಶನವನ್ನು ಸಾರ್ವಜನಿಕರು ಪಾಲಿಸಿ ಸಹಕರಿಸಬೇಕಿದೆ ಎಂದು ಶಾಸಕ ನಿಸರ್ಗ ನಾರಾಯಣಸ್ವಾಮಿ ತಿಳಿಸಿದರು. ದೇವನಹಳ್ಳಿ ತಾಲ್ಲೂಕು ಬಿದಲೂರು ಗ್ರಾಮದಲ್ಲಿನ ಚನ್ನಕೇಶವ ಸ್ವಾಮಿ ದೇವಾಲಯ ಆವರಣದಲ್ಲಿ ದೇವನಹಳ್ಳಿ ತಾಲ್ಲೂಕು ಮುಜರಾಯಿ ದೇವಾಲಯಗಳ ಅರ್ಚಕರ ಸಂಘದ ವತಿಯಿಂದ ನೂತನ ವರ್ಷದ ದಿನದರ್ಶಿಕೆ ಬಿಡುಗಡೆ ಸಮಾರಂಭದಲ್ಲಿ ಶಾಸಕ ನಿಸರ್ಗ ನಾರಾಯಣಸ್ವಾಮಿ ರವರು ಜ್ಯೋತಿ ಬೆಳಗಿಸಿ ಮಾತನಾಡಿ, ನಾನು ದೇವನಹಳ್ಳಿ ತಾಲ್ಲೂಕಿಗೆ ಶಾಸಕನಾಗಬೇಕೆಂದು ಬಂದವನಲ್ಲಾ ನಮ್ಮ ಮನೆ ದೇವರಾದ ಚನ್ನಕೇಶವಸ್ವಾಮಿ ದೇವಾಲಯವನ್ನು ಜೀರ್ಣೋದ್ಧಾರ ಮಾಡಲು ಬಂದದ್ದು ನಂತರ ದೇವರ ಪ್ರೇರೇಪಣೆಯಿಂದ ತಾಲ್ಲೂಕಿನ ಅಭಿವೃದ್ಧಿಗೆ ತೊಡಗಿಸಿಕೊಳ್ಳಲು ರಾಜಕೀಯ ಪ್ರವೇಶ ಮಾಡಿ ಕ್ಷೇತ್ರದ ಶಾಸಕನಾಗಿದ್ದೇನೆ ಪ್ರಾಮಾಣಿಕವಾಗಿ ಕ್ಷೇತ್ರದ ಅಭಿವೃದ್ಧಿಗೆ ಒತ್ತು ನೀಡುತ್ತಿದ್ದೇನೆ. ಭವನ ನಿರ್ಮಾಣಕ್ಕೆ ನಿವೇಶನ ನೀಡುವ ಸಂಘದ ಬೇಡಿಕೆಯನ್ನು ಪ್ರಾಮಾಣಿಕವಾಗಿ ಮಾಡುವುದಾಗಿ ಭರವಸೆ ನೀಡುತ್ತೇನೆ ಎಂದರು.

ಕರ್ನಾಟಕ ವಿಧಾನಸಭೆಯಲ್ಲಿ ಅರ್ಚಕರ ಪರವಾಗಿ ಶಾಸಕಾಂಗದ ನಾಯಕರು ಮಾತನಾಡಿದ್ದರಿಂದ ವಾರ್ಷಿಕವಾಗಿ 48 ಸಾವಿರ ತೆಗೆದುಕೊಳ್ಳುವ ಹಂತಕ್ಕೆ ಮುಜರಾಯಿ ಅರ್ಚಕರು ಬಂದಿದ್ದೇವೆ. ನಾರಾಯಣಸ್ವಾಮಿ ರವರು ಸಂಕಲ್ಪ ಮಾಡಿದ್ದರಿಂದ ದೇವರ ಸೇವೆ ಮಾಡಿದ್ದರಿಂದ ಶಾಸಕರಾಗಿ ಆಯ್ಕೆಯಾಗಿ ಕ್ಷೇತ್ರದ ಜನರ ಸೇವೆ ಮಾಡುತ್ತಿದ್ದಾರೆ. ನಮ್ಮ ಸಂಘದ ಸಭೆಗಳನ್ನು ಮಾಡಲು ಸ್ಥಳಾವಕಾಶವಿಲ್ಲದೇ ಸಮಸ್ಯೆಯಾಗಿದೆ, ಆದ್ದರಿಂದ ನಮಗೆ ಅನುಕೂಲವಾಗಲು ಭವನ ನಿರ್ಮಾಣಕ್ಕೆ ನಿವೇಶನ ಕೊಡಿಸಬೇಕೆಂದು ಸಂಘದ ವತಿಯಿಂದ ಮನವಿ ಮಾಡುತ್ತಿರುವುದಾಗಿ ತಾಲ್ಲೂಕು ಮುಜರಾಯಿ ದೇವಾಲಯಗಳ ಅರ್ಚಕರ ಸಂಘದ ಗೌರವಾಧ್ಯಕ್ಷ ಶ್ರೀಧರ್ ಧೀಕ್ಷಿತ್ ತಿಳಿಸಿದರು. ದೇವನಹಳ್ಳಿ ತಾಲ್ಲೂಕು ಮುಜರಾಯಿ ದೇವಾಲಯಗಳ ಅರ್ಚಕರ ಸಂಘದ ವತಿಯಿಂದ ಶಾಸಕ ನಿಸರ್ಗ ನಾರಾಯಣಸ್ವಾಮಿ ರವರನ್ನು ಆತ್ಮೀಯವಾಗಿ ಅಭಿನಂದಿಸಲಾಯಿತು. ನೂತನ ವರ್ಷದ ದಿನದರ್ಶಿಕೆಯನ್ನು ಬಿಡುಗಡೆ ಮಾಡಿದರು. ಈ ಸಂದರ್ಭದಲ್ಲಿ ದೇವನಹಳ್ಳಿ ತಾಲ್ಲೂಕು ಮುಜರಾಯಿ ದೇವಾಲಯಗಳ ಅರ್ಚಕರ ಸಂಘದ ಅಧ್ಯಕ್ಷ ಮಂಜುನಾಥ್, ಕಾರ್ಯದರ್ಶಿ ಗಣೇಶ್ ಪ್ರಧಾನ ಕಾರ್ಯದರ್ಶಿ ಪ್ರಕಾಶ್, ಉಪಾಧ್ಯಕ್ಷರು ಟಿ.ಎ. ಶ್ರೀನಿವಾಸ್ , ಖಜಾಂಚಿ ವೇಣುಗೋಪಾಲ್ ಸಂಘದ ನಿರ್ದೇಶಕರಾದ ಪದ್ಮನಾಭ. ಆನಂದ್.ಶ್ರೀಧರ್. ಮಂಜುನಾಥ್. ವೆಂಕಟೇಶ್. ಲಕ್ಷ್ಮಿಕಾಂತ್ .ಸತ್ಯನಾರಾಯಣ ಸಿದ್ದಲಿಂಗಯ್ಯ.ಸುಬ್ಬಣ್ಣ, ಪ್ರದೀಪ್ .ಗೋಪಾಲಕೃಷ್ಣ, ಜೆಡಿಎಸ್ ಪಕ್ಷದ ಮುಖಂಡರು ಇದ್ದರು.

Leave a Comment

Your email address will not be published. Required fields are marked *

Translate »
Scroll to Top