ಕನ್ನಡ ಚಲನಚಿತ್ರಗಳನ್ನು ಚಿತ್ರಮಂದಿರಗಳಲ್ಲಿಯೇ ನೋಡಿ

ಬಳ್ಳಾರಿ: ಕನ್ನಡ ಚಲನಚಿತ್ರವನ್ನು ಮೊಬೈಲ್ ಗಳಲ್ಲಿ ನೋಡದೇ ಚಿತ್ರಮಂದಿರದಲ್ಲಿ ನೋಡಿ ಕನ್ನಡ ಚಿತ್ರರಂಗವನ್ನು ಬೆಳೆಸಬೇಕಾಗಿದೆ ಎಂದು ಮಾರಕಾಸ್ತ್ರ ಚಿತ್ರದ ನಿರ್ದೇಶಕರಾದ ಗುರುಮೂರ್ತಿ ಅವರು ಹೇಳಿದರು.

 

ನಗರದ ಜಿಲ್ಲಾಧಿಕಾರಿ ಆವರಣದಲ್ಲಿ ಇರುವ ಪತ್ರಿಕಾಭವನದಲ್ಲಿ ಶನಿವಾರ ನಡೆದ ಪತ್ರಿಕಾ ಗೋಷ್ಠಿಯಲ್ಲಿ ಅವರು ಮಾತನಾಡಿದರು.

ಇಂದಿನ ದಿನಗಳಲ್ಲಿ ಚಲನಚಿತ್ರ ರಂಗ ಬಹಳ ಕಷ್ಟದ ದಿನಗಳನ್ನು ದೂಡಲಾಗುತ್ತಿದೆ. ಅಂತಹದರಲ್ಲಿ ಮಾರಕಾಸ್ತ್ರ ಚಿತ್ರವನ್ನು ಬಹಳ ಕಷ್ಟಪಟ್ಟು ಈ ಚಿತ್ರವನ್ನು ಮಾಡಲಾಗಿದೆ. ಈ ಚಿತ್ರವನ್ನೂ ಸುಮಾರು 6ರಿಂದ 7 ಕೋಟಿಯಲ್ಲಿ ಚಿತ್ರಿಕರಿಸಲಾಗಿದ್ದು, ಕೌಟುಂಬಿಕ ಹಿನ್ನೆಲೆಯನ್ನು ಹೊಂದಿದೆ. ಸೆಪ್ಟೆಂಬರ್ ತಿಂಗಳಲ್ಲಿ ಚಿತ್ರ ಬಿಡುಗಡೆ ಮಾಡಲು ತಿರ್ಮಾನ ಮಾಡಲಾಗಿದ್ದು,170 ಚಿತ್ರಮಂದಿರದಲ್ಲಿ ಬಿಡುಗಡೆ ಮಾಡಲಾಗುವುದು ಎಂದು ಅವರು ಹೇಳಿದರು.

ಮಾರಕಾಸ್ತ್ರ ಚಿತ್ರವನ್ನು ಹಿಂದಿಯಲ್ಲಿ ಡಬ್ ಮಾಡಲು ಒಂದು ಕೋಟಿಗೆ ಬೇಡಿಕೆ ಇಟ್ಟಿದ್ದು ನಮಗೆ ಹೆಮ್ಮೆ ಇದೆ ಎಂದು ಅವರು ಹೇಳಿದರು.

 

ಈ ಸಂದರ್ಭದಲ್ಲಿ ಡಾ. ನಟರಾಜ್, ಆನಂದ ಆರ್ಯಾ, ಶಶಿಧರ ಗೌಡ, ರವಿ ಚೇತನ್, ಭರತ್ ಸಿಂಗ್, ಕೋಮಲಾ, ಬಳ್ಳಾರಿ ಮಂಜುನಾಥ್, ಸುನೀಲ್ ಸೇರಿದಂತೆ ಚಿತ್ರ ತಂಡದವರು ಇದ್ದರು.

Facebook
Twitter
LinkedIn
WhatsApp
Print
Email
Telegram
Pinterest

Leave a Comment

Your email address will not be published. Required fields are marked *

Translate »
Scroll to Top