ತಿಗಳ ಸಮುದಾಯವನ್ನು ನಿಕೃಷ್ಟವಾಗಿ ಕಂಡ ಬಿಜೆಪಿ ಅಭ್ಯರ್ಥಿ ಸುಧಾಕರ್‌ಗೆ ಪಾಠ ಕಲಿಸುವುದಾಗಿ ಎಚ್ಚರಿಕೆ

ದೇವನಹಳ್ಳಿ:  ರಾಜ್ಯದಲ್ಲಿ ಅತ್ಯಂತ ಹಿಂದುಳಿದ ತಿಗಳ ಸಮುದಾಯದ ಮುಖಂಡರು ಮತ್ತು ಸಮಾಜಕ್ಕೆ ರಾಜಕೀಯ ಪ್ರಾತಿನಿಧ್ಯ ತಪ್ಪಿಸಿ ಘೋರ ಅನ್ಯಾಯ ಮಾಡಿರುವ ಮಾಜಿ ಸಚಿವ ಹಾಗೂ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ.ಕೆ. ಸುಧಾಕರ್ ಅವರನ್ನು ಬೆಂಬಲಿಸದಿರಲು ತಿಗಳ ಸಮುದಾಯ ತೀರ್ಮಾನಿಸಿದೆ. ಕಾಂಗ್ರೆಸ್ ಅಭ್ಯರ್ಥಿ ರಕ್ಷಾ ರಾಮಯ್ಯ ಅವರಿಗೆ ಅಖಂಡ ಬೆಂಬಲ ನೀಡುವುದಾಗಿ ಘೋಷಿಸಿದೆ.

 

ದೇವನಹಳ್ಳಿಯಲ್ಲಿಂದು ಚಿಕ್ಕಬಳ್ಳಾಪುರ ಕ್ಷೇತ್ರ ಮತ್ತು ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿದ್ದ ತಿಗಳ ಸಮುದಾಯದ ಮುಖಂಡರು ಸಭೆ ಸೇರಿ ಈ ನಿರ್ಧಾರ ಕೈಗೊಂಡಿದ್ದಾರೆ.

ಸಭೆಯ ನಂತರ ಸುದಿಗಾರರೊಂದಿಗೆ ಮಾತನಾಡಿದ ತಿಗಳ ಸಮುದಾಯದ ಮುಖಂಡ ಹಾಗೂ ದೇವನಹಳ್ಳಿ ಪುರಸಭೆ ಸದಸ್ಯ ಚಂದ್ರಪ್ಪ, ಸಚಿವರಾಗಿದ್ದಾಗ ನಮ್ಮ ಸಮುದಾಯವನ್ನು ಡಾ.ಕೆ. ಸುಧಾಕರ್ ಅತ್ಯಂತ ನಿಕೃಷ್ಟವಾಗಿ ನಡೆಸಿಕೊಂಡಿದ್ಧಾರೆ. ಬಿಬಿಎಂಪಿ ಸದಸ್ಯರಾಗಿದ್ದ ಹೂಡಿ ವಿಜಯ್ ಕುಮಾರ್ ಅವರಿಗೆ ಮಾಲೂರು ವಿಧಾನಸಭಾ ಕ್ಷೇತ್ರದ ಟಿಕೆಟ್ ತಿಪ್ಪಿಸಿದ್ದರು. ವಿಜಯ್ ಕುಮಾರ್ ಅವರಿಗೆ ಟಿಕೆಟ್ ತಪ್ಪಿಸಿರುವುದನ್ನು ಪ್ರಶ್ನಿಸಲು ಮನೆಗೆ ತೆರಳಿದ್ದ ಸಂದರ್ಭದಲ್ಲಿ ನಮ್ಮ ಜನಾಂಗದ ಮುಖಂಡರನ್ನು ಮೂರು ಗಂಟೆಗಳ ಕಾಲ ಕಾಯಿಸಿ, ಸರಿಯಾಗಿ ನಡೆಸಿಕೊಳ್ಳದೇ, ಮಾತುಕತೆಯನ್ನೂ ಸಹ ನಡೆಸದೇ ದರ್ಪ ತೋರಿದ್ದರು. ಇದರಿಂದ ನಮ್ಮ ಜನಾಂಗ ತೀವ್ರ ಮುಜುಗರ ಅನುಭವಿಸಿತ್ತು ಎಂದರು.

 

ಹೂಡಿ ವಿಜಯ್ ಕುಮಾರ್ ನಾಲ್ಕು ವರ್ಷಗಳ ಕಾಲ ಮಾಲೂರಿನಲ್ಲಿ ಕೆಲಸ ಮಾಡಿದ್ದರು. ಮಾಜಿ ಸಚಿವರಾಗಿದ್ದ ಕೃಷ್ಣಯ್ಯ ಶೆಟ್ಟಿ ಅವರು ಸಹ ಬೆಂಬಲ ವ್ಯಕ್ತಪಡಿಸಿದ್ದರು. ಸೋಲುವ ಕ್ಷೇತ್ರವನ್ನು ಗೆಲ್ಲುವ ಹಂತಕ್ಕೆ ಸಂಘಟನೆ ಮಾಡಿದ್ದರು. ಅವರು ಕಷ್ಟಪಟ್ಟು ಮನೆ ಕಟ್ಟಿದ್ದರು. ಆದರೆ ಸುಧಾಕರ್ ಕನಸಿನ ಮನೆಯನ್ನು ಛಿದ್ರಗೊಳಿಸಿದರು. ನಮ್ಮ ಸಮುದಾಯದಿಂದ ಒಬ್ಬರು ಶಾಸಕರಾದರೆ ಜನಾಂಗದ ಶ್ರೇಯೋಭಿವೃದ್ಧಿಗಾಗಿ ಶ್ರಮಿಸಲಿದ್ದಾರೆ ಎನ್ನುವುದು ನಮ್ಮೆಲ್ಲರ ಭಾವನೆಯಾಗಿತ್ತು. ಸುಧಾಕರ್ ಅವರು ಸಣ್ಣಪುಟ್ಟ ಜಾತಿಗಳನ್ನು ಹತ್ತಿರಕ್ಕೂ ಸಹ ಬಿಟ್ಟುಕೊಂಡಿರಲಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ತಿಗಳ ಜನಾಂಗ ಹಿಂದುಳಿದ ಸಮುದಾಯ, ಕರಗ ಸಂಪ್ರದಾಯವನ್ನು ಅನುಸರಿಸಿಕೊಂಡು ಬಂದಿದೆ. ತಿಗಳ ಜನಾಂಗ ಒಮ್ಮೆ ಮಾತುಕೊಟ್ಟೆರೆ ಅದರಂತೆ ನಡೆದುಕೊಳ್ಳುತ್ತದೆ. ನಾವು ಆರ್ಥಿಕವಾಗಿ ಅಷ್ಟೊಂದು ಬಲಿಷ್ಠವಾಗಿಲ್ಲ. ಆದರೆ ಸ್ವಾಭಿಮಾನದಲ್ಲಿ ಶ್ರೀಮಂತರು. ಸುಧಾಕರ್ ಅವರಿಗೆ ನಮ್ಮ ಜನರ ಶಾಪ ತಟ್ಟಲಿದೆ. ನಾವು ಧರ್ಮರಾಯನ ವಂಶಸ್ಥರು. ಸಂವಿಧಾನ ನಮಗೆ ನೀಡಿರುವ ಮತದಾನದ ಹಕ್ಕಿನ ಮೂಲಕ ಡಾ.ಕೆ. ಸುಧಾಕರ್ ಅವರಿಗೆ ಪಾಠ ಕಲಿಸುತ್ತೇವೆ. ನಮ್ಮ ಮತವನ್ನು ರಕ್ಷಾ ರಾಮಯ್ಯ ಅವರಿಗೆ ನೀಡುತ್ತೇವೆ. ಕಾಂಗ್ರೆಸ್ ಪಕ್ಷ ತಿಗಳರ ಪರವಾಗಿದ್ದು, ಕರಗದ ಆಚರಣೆಗೆ ಸಿದ್ದರಾಮಯ್ಯ ಎಲ್ಲಾ ಕಡೆ ತಲಾ ಎರಡು ಲಕ್ಷ ರೂಪಾಯಿ ನೀಡಿ ನೆರವಾಗುತ್ತಿದ್ದಾರೆ ಎಂದು ಚಂದ್ರಪ್ಪ ಹೇಳಿದರು.

Facebook
Twitter
LinkedIn
Facebook
Twitter
LinkedIn
Telegram
WhatsApp
Email
Print

Leave a Comment

Your email address will not be published. Required fields are marked *

Translate »
Scroll to Top