ಬಳ್ಳಾರಿ: ಪಂಜಾಬ್‌ನ ಗುರು ಕಾಶಿ ವಿಶ್ವವಿದ್ಯಾಲಯದಲ್ಲಿ ನಡೆದ ಅಖಿಲ ಭಾರತ ಅಂತರ್‌ವಿಶ್ವವಿದ್ಯಾಲಯ ಪುರುಷ ಮತ್ತು ಮಹಿಳೆಯರ ಕುಸ್ತಿ ಪಂದ್ಯಾವಳಿಯಲ್ಲಿ ಬಳ್ಳಾರಿಯ ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದ ಕುಸ್ತಿಪಟು ಮಂಜುನಾಥ (ಶ್ರೀಮಾತಾ ಕಾಲೇಜು ಹೊಸಪೇಟೆ) 79 ಕೆಜಿ ವಿಭಾಗದಲ್ಲಿ ಫ್ರೀ ಸ್ಟೆöÊಲ್ ಕುಸ್ತಿ ಅಖಿಲ ಭಾರತ ಅಂತರ್‌ವಿಶ್ವವಿದ್ಯಾಲಯ ಕ್ರೀಡಾಕೂಟದಲ್ಲಿ 5 ನೇ ಸ್ಥಾನ ಪಡೆಯುವುದರ ಮೂಲಕ ಖೇಲೊ ಇಂಡಿಯಾ ಯುನಿವರ್ಸಿಟಿ ಗೇಮ್ಸ್ 2025 ಕ್ಕೆ ಅರ್ಹತೆ ಪಡೆದಿದ್ದಾರೆ.
ಈ ಕ್ರೀಡಾಪಟುವಿನ ಸಾಧನೆಗೆ ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದ ಕುಲಪತಿಗಳು, ಕುಲಸಚಿವರು(ಆಡಳಿತ), ಕುಲಸಚಿವರು (ಮೌಲ್ಯಮಾಪನ), ಹಣಕಾಸು ಅಧಿಕಾರಿಗಳು, ದೈಹಿಕ ಶಿಕ್ಷಣ ಮತ್ತು ಕ್ರೀಡಾ ವಿಭಾಗ ಹಾಗೂ ಕುಸ್ತಿ ತಂಡದ ವ್ಯವಸ್ಥಾಪಕರು ಮತ್ತು ತರಬೇತುದಾರರಾದ ಮಲ್ಲಿಕಾರ್ಜುನ ವೈ.ಡಿ ಮತ್ತು ಮಧುಕರ.ಎ ಸೇರಿದಂತೆ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ವರ್ಗದವರು ಶುಭ ಕೋರಿದ್ದಾರೆ.