ಬೆಂಗಳೂರು: ಕನ್ನಡದ ಕಿರಿತೆರೆ ಮತ್ತು ಹಿರಿತೆರೆಯ ಖ್ಯಾತ ಹಿರಿಯ ನಟ ಸರಿಗಮ ವಿಜಿ ಅವರು ನಿಧನ ಹೊಂದಿದ್ದಾರೆ. ತೀವ್ರ ಅನಾರೋಗ್ಯದಿಂದ ಬೆಂಗಳೂರಿನ ಯಶವಂತಪುರದ ಮಣಿಪಾಲ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಕಳೆದ ಒಂದು ವಾರದಿಂದ ದಿನಗಳಿಂದ ಅವರು ಆಸ್ಪತ್ರೆಯ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಬುಧವಾರ ಬೆಳಗ್ಗೆ 9:45ಕ್ಕೆ ನಿಧನ ಹೊಂದಿದ್ದಾರೆ ಎಂದು ತಿಳಿದುಬಂದಿದೆ. 76 ವರ್ಷ ವಯಸ್ಸಿನಲ್ಲಿ ವಿಜಿ ಅವರು ಅಪಾರ ಅಭಿಮಾನಿಗಳನ್ನು ಅಗಲಿದ್ದಾರೆ. ವಿಜಿ ಅವರಿಗೆ ಶ್ವಾಸಕೋಶದ ಸಮಸ್ಯೆಯಿಂದ ಬಳಲುತ್ತಿದ್ದರು. ನ್ಯುಮೋನಿಯಾಗೆ ಅವರಿಗೆ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದ ಹಿನ್ನಲೆ ವಿಜಿ ಅವರು ಇಹಲೋಕ ತ್ಯಜಿಸಿದ್ದಾರೆ.
ಕಳೆದ ಕೆಲವು ದಿನಗಳಿಂದಲೂ ಸರಿಗಮ ವಿಜಿ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಸತತ ಚಿಕಿತ್ಸೆ ಬಳಿಕ ಇದೀಗ ವಿಜಿ ಅವರು ನಿಧನ ಹೊಂದಿದ್ದಾರೆ ಎಂದು ಅಧಿಕೃತವಾಗಿ ಮಾಹಿತಿ ಕೇಳಿಬರುತ್ತಿದೆ. ವಿಜಿ ಅವರಿಗೆ ಇಬ್ಬರು ಮಕ್ಕಳಿದ್ದರು. ವಿಜಿ ಅವರ ನಿಧನಕ್ಕೆ ಕನ್ನಡ ಚಿತ್ರರಂಗದ ಕೆಲವು ಸಿನಿಮಾ ನಟ-ನಟಿಯರು ಬೇಸರ ವ್ಯಕ್ತಪಡಿಸಿದ್ದಾರೆ.
ಇನ್ನು, ಸರಿಗಮ ವಿಜಿ 300ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ ಮತ್ತು 100ಕ್ಕೂ ಹೆಚ್ಚು ಚಿತ್ರಗಳಿಗೆ ಸಹ ನರ್ದೇಶಕರಾಗಿ ಕೆಲಸ ಮಾಡಿದ್ದಾರೆ. ಸರಿಗಮ ವಿಜಿ ಅಭಿನಯಿಸಿದ್ದ ಕೊನೆ ಸಿನಿಮಾ ಡಕೋಟಾ ಪಿಕ್ಟರ್ ಆಗಿದ್ದು, ನಟನಿಗೆ ಗಂಡು ಮಕ್ಕಳು ಇದ್ದಾರೆ. ನಟನಾ ವೃತ್ತಿಯನ್ನು ಮುಂದುವರಿಸುವ ಮೊದಲು, ಸರಿಗಮ ವಿಜಿ ಅವರು ಓಉಇಈ ನಲ್ಲಿ ಕೆಲಸ ಮಾಡಿದರು. ವಿಜಿ ನಟನಾಗಿ ನಟಿಸಿದ ಚೊಚ್ಚಲ ಕನ್ನಡ ಚಲನಚಿತ್ರ ಬೆಳುವಲದ ಮಡಿಲಲ್ಲಿ 1975 ರಲ್ಲಿ ತೆರೆಕಂಡಿತ್ತು.
ಸರಿಗಮ ವಿಜಿ ಹೆಸರು ಬಂದಿದ್ದೇಗೆ?
ಇನ್ನು, ಸರಿಗಮ ವಿಜಿ ಅವರು ಸಿನಿಮಾ ಮದೊಲು ನಾಯಟಕನ್ನು ನಡೆಸುತಿದ್ದರು. ಅದರಲ್ಲಿಯೂ ವಿಜಿ ನಟಿಸಿದ್ದ ‘ಸಂಸಾರದಲ್ಲಿ ಸರಿಗಮ’ ನಾಟಕ ಬಹಳ ಹೆಸರು ಮಾಡಿತ್ತು. ಇದೇ ಕಾರಣಕ್ಕಾಗಿ ವಿಜಿ ಅವರಿಗೆ ಸರಿಗಮ ಎಂಬ ಅಡ್ಡ ಹೆಸರು ಜಾಲ್ತಿಗೆ ಬಂದಿತು, ನಾಟಕದಿಂದ ಸಿನಿಮಾಗೆ ಎಂಟ್ರಿ ಜೀಡಿದ ವಿಜಿ ಅನೇಕ ಸಿನಿಮಾಗಳಲ್ಲಿ ಪೋಷಕ ಪಾತ್ರ, ಹಾಸ್ಯ ಮತ್ತು ವಿಲನ್ ಪಾತ್ರಗಳಲ್ಲಿಯೂ ಮಿಂಚಿದ್ದಾರೆ. ಅಲ್ಲದೇ ಕೆಲ ಸಿನಿಮಾಗಳಿಗೆ ಸಹಾಯಕ ನರ್ದೇಶಕನಾಗಿ ಕೆಲಸ ಮಾಡಿದ್ದಾರೆ. 50 ವರ್ಷಗಳ ಕಲಾ ಸೇವೆ ಮಾಡಿರುವ ವಿಜಯ್ ಪ್ರಭಾಕರ್ ಜೊತೆ ಹೆಚ್ಚು ಒಡನಾಟ ಹೊಂದಿದ್ದರು. ಸರಿಗಮ ವಿಜಿ ರ್ನಾಟಕ ರಾಜ್ಯ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾರೆ. ಸಿನಿಮಾಗಳು ಮಾತ್ರವಲ್ಲದೆ ಅನೇಕ ಧಾರಾವಾಹಿ, ನಾಟಕಗಳಲ್ಲೂ ಸಹ ಸರಿಗಮ ವಿಜಿ ನಟಿಸಿದ್ದಾರೆ. ಹೆಚ್ಚಾಗಿ ಕಾಮಿಡಿ ಪಾತ್ರಗಳಲ್ಲಿ ಸರಿಗಮ ವಿಜಿ ನಟಿಸಿದ್ದು, ಜನಪ್ರಿಯರೂ ಆಗಿದ್ದಾರೆ.