ಹೊಸಪೇಟೆ: ವಿಜಯನಗರ ಜಿಲ್ಲೆಯಲ್ಲಿ ಕಳೆದ ಕೆಲ ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆ ಜನಜೀವನವನ್ನು ಅಸ್ತವ್ಯಸ್ತಗೊಳಿಸಿದೆ.
ಸತತ ಮಳೆಯಿಂದ ಸಮಸ್ಯೆ ಅನುಭವಿಸುತ್ತಿರುವ ಹೊಸಪೇಟೆ ತಾಲೂಕಿನ ವಡ್ಡರಹಳ್ಳಿ, ಪಾಪಿನಾಯಕನ ಹಳ್ಳಿ ಭಾಗದ ರೈತರಿಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಮಾಡಿದ ಎಡವಟ್ಟು ಇನ್ನಷ್ಟು ಸಮಸ್ಯೆಯನ್ನು ಉಲ್ಬಣಗೊಳ್ಳುವಂತೆ ಮಾಡಿದೆ ಎನ್ನಬಹುದು.
ರಾಷ್ಟ್ರೀಯ ಹೆದ್ದಾರಿ 67 ರ ನಿರ್ಮಾಣದ ವೇಳೆ ಆಗಿರುವ ಎಡವಟ್ಟೇ ಈ ಭಾಗದ ರೈತರ ಪಾಲಿಗೆ ಶಾಪವಾಗಿದೆ ಎಂದು ಅನ್ನದಾತರು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ. ಹೆದ್ದಾರಿ ಪ್ರಾಧಿಕಾರ ಮಾಡಿರುವ ಅವೈಜ್ಞಾನಿಕ ಕಾಮಗಾರಿಯಿಂದಾಗಿ ರೈತರ ಹೊಲಗಳಿಗೆ ಮಳೆ ನೀರು ನುಗ್ಗಿ ಜಲಾವೃತವಾಗಿರುವ ಕಾರಣ ಸುಮಾರು 50 ಎಕರೆಯಲ್ಲಿನ ಬೆಳೆ ನಷ್ಟವಾಗಿದೆ. ಇನ್ನೂ ಕೆಲವು ಹೊಲಗಳು ಬಿತ್ತನೆಗೆ ಸಿದ್ದವಾಗಬೇಕಾದ ಸಮಯದಲ್ಲಿ ನೀರು ನಿಂತು ಮುಂದಿನ ಕೃಷಿ ಚಟುವಟಿಕೆಗೆ ಅಡ್ಡಿಯಾಗಿ ರೈತರಿಗೆ ನಷ್ಟವುಂಟಾಗಿದೆ.
ರಾಷ್ಟಿçÃಯ ಹೆದ್ದಾರಿ ಕಾಮಗಾರಿಯಿಂದಾಗಿ ಎರಡು ಭಾಗವಾಗಿರುವ ಹೊಲಗಳ ಎಡಭಾಗದಿಂದ ಬಲಭಾಗಕ್ಕೆ ಕೃಷಿ ಚಟುವಟಿಕೆಗಳಿಗಾಗಿ ಓಡಾಡಲು ರೈತರಿಗೆ ಅನುಕೂಕ ಮಾಡಿಕೊಟ್ಟಿಲ್ಲದ ಹೆದ್ದಾರಿ ಪ್ರಾಧಿಕಾರಕ್ಕೆ ಹಲವು ಬಾರಿ ಮನವಿ ಮಾಡಿದರೂ ರ‍್ಯಾಂಪ್ ಮಾಡಿಕೊಡುವಲ್ಲಿ ಎನ್‌ಹೆಚ್‌ಎ ವಿಫಲವಾಗಿದೆ.
ಇದರ ನಡುವೆ ಮಳೆ ಬಂದಾಗ ಅವೈಜ್ಞಾನಿಕ ಕಾಮಗಾರಿಯಿಂದಾಗಿ ಶೆಟ್ಟಿಕೆರೆ ಹಳ್ಳಕ್ಕೆ ಹರಿದು ಹೋಗುತ್ತಿದ್ದ ಹೆಚ್ಚುವರಿ ಮಳೆನೀರು ಈಗ ಹೆದ್ದಾರಿ ಬದಿಯ ಹೊಲಗಳಿಗೆ ಹರಿದುಬರುತ್ತಿವೆ. ರಸ್ತೆಯ ವಿವಿಧ ಕಾಮಗಾರಿಗಳಿಂದಾಗಿ ಸ್ವಾಭಾವಿಕವಾಗಿ ಹಳ್ಳಕ್ಕೆ ಹರಿದುಹೋಗುತ್ತಿದ್ದ ನೀರು ಈಗ ಹೊಲಗಳಿಗೆ ನುಗ್ಗಿ ರೈತರಿಗೆ ವಿಪರೀತ ಸಮಸ್ಯೆ ಉಂಟುಮಾಡಿದೆ.
ಈ ರಾಷ್ಟಿçÃಯ ಹೆದ್ದಾರಿ ಪ್ರಾಧಿಕಾರದ ಎಡವಟ್ಟಿನಿಂದ ಸುಮಾರು ಐವತ್ತಕ್ಕೂ ಹೆಚ್ಚು ಎಕರೆಯಲ್ಲಿ ಬೆಳೆದಿದ್ದ ಕಬ್ಬು, ಭತ್ತ, ಈರುಳ್ಳಿ, ಮೆಕ್ಕೆಜೋಳ ಸೇರಿದಂತೆ ನಾನಾ ಬೆಳೆಗಳು ಜಲಾವೃತಗೊಂಡು ರೈತರಿಗೆ ಸಾಕಷ್ಟು ನಷ್ಟವನ್ನುಂಟುಮಾಡಿದೆ.
ಈ ಅವೈಜ್ಞಾನಿಕ ಹೆದ್ದಾರಿ ಕಾಮಗಾರಿಯ ಕುರಿತು ಅನೇಕ ಬಾರಿ ರೈತರು ಮನವಿ ಮಾಡಿದ್ದರೂ ಪ್ರಯೋಜನವಾಗಿಲ್ಲ. ಜಿಲ್ಲಾಡಳಿತವಾಗಲಿ ರಾಷ್ಟಿçÃಯ ಹೆದ್ದಾರಿ ಪ್ರಾಧಿಕಾರವಾಗಲಿ ರೈತರ ಮನವಿಗೆ ಸ್ಪಂದಿಸಿ, ಈ ಸಮಸ್ಯೆಗೆ ತಿಲಾಂಜಲಿ ಇಡಬೇಕಾಗಿದೆ.