ಬೆಂಗಳೂರು : ಕರ್ನಾಟಕ ಉರ್ದು ಅಕಾಡೆಮಿ ತಾಲೂಕು ಮಟ್ಟದಲ್ಲಿ ಕಾರ್ಯಕ್ರಮ ರೂಪಿಸಬೇಕು ಎಂದು ಅಲ್ಪಸಂಖ್ಯಾತರ ಕಲ್ಯಾಣ ಸಚಿವ ಜಮೀರ್ ಅಹಮದ್ ಖಾನ್ ಹೇಳಿದ್ದಾರೆ.
ಉರ್ದು ಅಕಾಡೆಮಿ ವತಿಯಿಂದ ಆಯೋಜಿಸಿದ್ದ ಕಾರ್ಯಕ್ರಮ ದಲ್ಲಿ ಪ್ರತಿಭಾವಂತ ವಿದ್ಯಾರ್ಥಿಗನ್ನು ಸನ್ಮಾನ ಮಾಡಿ ಮಾತನಾಡಿದ ಅವರು, ಅಕಾಡೆಮಿ ಕಾರ್ಯಕ್ರಮ ಗಳು ಕೇವಲ ಬೆಂಗಳೂರು ಕೇಂದ್ರೀಕೃತ ಆಗಬಾರದು. ರಾಜ್ಯದ ಎಲ್ಲ ಜಿಲ್ಲೆ ಹಾಗೂ ತಾಲೂಕು ಗಳ ಮಟ್ಟಕ್ಕೆ ಹೋಗಬೇಕು ಎಂದು ಹೇಳಿದರು.
ಅಕಾಡೆಮಿಗೆ ಬಿಜೆಪಿ ಸರ್ಕಾರ ದಲ್ಲಿ ಸೂಕ್ತ ಅನುದಾನ ನೀಡಿರಲಿಲ್ಲ. ಕಾಂಗ್ರೆಸ್ ಸರ್ಕಾರ ಬಂದ ನಂತರ 1.50 ಕೋಟಿ ರೂ. ಬಜೆಟ್ ಅನುದಾನ ಒದಗಿಸಲಾಗಿದೆ. ಮುಂದಿನ ವರ್ಷ ಈ ಮೊತ್ತ 10 ರಿಂದ 15 ಕೋಟಿ ರೂ. ಗೆ ಹೆಚ್ಚಿಸಲು ಪ್ರಯತ್ನಿಸಲಾಗುವುದು ಎಂದು ತಿಳಿಸಿದರು.
ಖಾಸಗಿ ಶಾಲೆಗಳಲ್ಲೂ ಸರ್ಕಾರದ ಆದೇಶದ ಪ್ರಕಾರ ಉರ್ದು ಒಂದು ಭಾಷೆ ಯಾಗಿ ಕಡ್ಡಾಯ ವಾಗಿ ಕಲಿಸುವ ಸಂಬಂಧ ಶಿಕ್ಷಣ ಸಚಿವರ ಜತೆ ಮಾತನಾಡುತ್ತೇನೆ ಎಂದು ಹೇಳಿದರು.
30 ದಿನಗಳಲ್ಲಿ ಉರ್ದು ಕಲಿಸುವ ತರಗತಿ ಆರಂಭ ಮಾಡಿರುವುದು ಸ್ವಾಗತಾರ್ಹ. ನಾನೂ ಸಹ ವಿದ್ಯಾರ್ಥಿ ಆಗಿ ಉರ್ದು ಕಲಿಯಲು ಬರುತ್ತೇನೆ ಎಂದು ತಿಳಿಸಿದರು.
50 ಸಾವಿರ ಬಹುಮಾನ
ಇದೇ ಸಂದರ್ಭದಲ್ಲಿ 30 ದಿನಗಳಲ್ಲಿ ಉರ್ದು ಕಲಿಯುವ ಪರೀಕ್ಷೆ ಯಲ್ಲಿ ಶೇ.100 ರಷ್ಟು ಅಂಕ ಪಡೆದ ನಾಲ್ವರು ವಿದ್ಯಾರ್ಥಿಗಳಿಗೆ ಸಚಿವ ಜಮೀರ್ ಅಹಮದ್ ಖಾನ್, ವೈಯಕ್ತಿಕ ವಾಗಿ ತಲಾ 50 ಸಾವಿರ ರೂ. ಬಹುಮಾನ ನೀಡಿದರು.
ಮುಖ್ಯಮಂತ್ರಿ ಯವರ ರಾಜಕೀಯ ಕಾರ್ಯದರ್ಶಿ ನಸೀರ್ ಅಹಮದ್ ಅವರು ಮಾತನಾಡಿ, ಬಸವಣ್ಣ ನವರ ವಚನ ಸೇರಿದಂತೆ ಮಹಾನ್ ಪುರುಷರ ಜೀವನ ಕೃತಿ ಪ್ರಕಟಿಸಬೇಕು. ಹೆಸರಾಂತ ಸಾಹಿತಿಗಳ ಉತ್ತಮ ಕೃತಿಗಳ ತರ್ಜುಮೆ ಮಾಡಬೇಕು ಎಂದು ಸಲಹೆ ನೀಡಿದರು.
ರಾಜ್ಯದ ಬಹುತೇಕ ಮುಖ್ಯಮಂತ್ರಿಗಳು ಉರ್ದು ಭಾಷೆ ಗೆ ಹೆಚ್ಚು ಆದ್ಯತೆ ನೀಡಿದ್ದರು. ಆ ಕುರಿತು ಕೃತಿ ಪ್ರಕಟಿಸಬೇಕು ಎಂದು ಹೇಳಿದರು.
ಶಾಸಕ ಆಸೀಫ್ ಸೇಠ್, ಎಂ ಎಲ್ ಸಿ ಬಾಲ್ಕಿಸ್ ಬಾನು, ಆಯೋಗದ ಅಧ್ಯಕ್ಷ ನಿಸಾರ್ ಅಹಮದ್, ಕೆ ಎಂ ಡಿಸಿ ಅಧ್ಯಕ್ಷ ಬಿಕೆ ಅಲ್ತಾಫ್ ಖಾನ್, ಅಕಾಡೆಮಿ ಅಧ್ಯಕ್ಷ ಮೊಹಮದ್ ಅಲಿ ಖಾಜಿ ಉಪಸ್ಥಿತರಿದ್ದರು.