150ಬ್ರಾಹ್ಮಣ ಬಾಲಕರಿಗೆ ಉಚಿತವಾಗಿ ಉಪನಯನ

ಬೆಂಗಳೂರು : ದೇಶದ ಅಭಿವೃದ್ದಿಗೆ ಮಹಾನ್ ಕೊಡುಗೆ ನೀಡಿದ ಬ್ರಾಹ್ಮಣ ಸಮುದಾಯ ಇಂದು ಸಂಕಷ್ಟದಲ್ಲಿ ಇದ್ದಾರೆ,ಅವರನ್ನ ಆರ್ಥಿಕವಾಗಿ ಸಬಲರಾಗಿ ಮಾಡಬೇಕು ಎಂಬ ಉದ್ದೇಶ- ಪ್ರಕಾಶ್ ಎಸ್.ಅಯ್ಯಂಗಾರ್ಮ ಲ್ಲೇಶ್ವರಂ ಬ್ರಾಹ್ಮಣ ಸಭಾದ ವತಿಯಿಂದ ಅರಮನೆ ಮೈದಾನ ರಾಯಲ್ ಸೇನಟ್ ಹಾಲ್ ನಲ್ಲಿ ಆರ್ಥಿಕವಾಗಿ ಹಿಂದುಳಿದ,ಬ್ರಾಹ್ಮಣ ಸ್ಪಾರ್ತ,ಶ್ರೀ ವೈಷ್ಣವ ಮತ್ತು ಮಧ್ವ ಸಂಪ್ರಾದಯದ 150ಬಾಲಕರಿಗೆ ಉಚಿತವಾಗಿ ಉಪನಯನ ಕಾರ್ಯಕ್ರಮ ಮತ್ತು ಸಂಧ್ಯವಂದನೆ ಮಾಡಲು ಬೆಳ್ಳಿಪಾತ್ರೆ,ಉದ್ದರಣೆ ವಿತರಣೆ ಕಾರ್ಯಕ್ರಮ. ಮಲ್ಲೇಶ್ವರಂ ಬ್ರಾಹ್ಮಣ ಸಭಾ ಅಧ್ಯಕ್ಷರಾದ ಪ್ರಕಾಶ್ ಎಸ್.ಅಯ್ಯಂಗಾರ್ ರವರು,ಅಗಮ,ವೇದ ಪಂಡಿತ,ಅಚಾರ್ಯರಿಂದ ಉಚಿತ ಉಪನಯನಕ್ಕೆ ಸಮಾರಂಭಕ್ಕೆ ಚಾಲನೆ ನೀಡಿದರು.

ಅಧ್ಯಕ್ಷರಾದ ಪ್ರಕಾಶ್ ಎಸ್.ಅಯ್ಯಂಗಾರ್ ರವರು ಮಾತನಾಡಿ ಅದಿ ಶಂಕರರು,ರಾಮಾನುಜರು, ಮಧ್ವಚಾರ್ಯರು ತತ್ವ ಸಿದ್ದಾಂತಗಳನ್ನು ಅನುಸರಿಸುವ ಎಲ್ಲ ಬ್ರಾಹ್ಮಣರು ಒಂದೇ ಮತ್ತು ನಾವು ಸಂಘಟಿತರಾದರೆ ಸಮಾಜದ ಅಭಿವೃದ್ದಿ ಸಾಧ್ಯ. ಎಲ್ಲ ವರ್ಗದ,ಧರ್ಮದವರಿಗೆ ಬ್ರಾಹ್ಮಣ ಸಮುದಾಯವನ್ನು ಗೌರವದಿಂದ,ಪ್ರೀತಿಪಾತ್ರರಾಗಿ ಕಾಣುತ್ತಾರೆ. ದೇಶ ಅಭಿವೃದ್ದಿಗೆ ಮಹಾನ್ ಕೊಡುಗೆ ನೀಡಿದ ಬ್ರಾಹ್ಮಣ ಸಮುದಾಯ ಇಂದು ಸಂಕಷ್ಣದಲ್ಲಿ ಇದೆ.ಸಂಸ್ಕೃತಿ,ಸಂಪ್ರಾದಯ,
ಸನಾತನ ಧರ್ಮ ಉಳಿಯಬೇಕು ಅದ್ದರಿಂದ ಆರ್ಥಿಕವಾಗಿ ಹಿಂದುಳಿದ 150ಬ್ರಾಹ್ಮಣ ಬಾಲಕರಿಗೆ ಉಚಿತವಾಗಿ ಉಪನಯನ ಮತ್ತು ಸಂಧ್ಯವಂದನೆ ಮಾಡಲು ಬೆಳ್ಳಿ ಪಾತ್ರೆ,ಉದ್ದರಣೆ ಮತ್ತು ಸಂಧ್ಯವಂದನೆ ಪುಸ್ತಕ ನೀಡಲಾಗಿದೆ. ಉಪನಯನ ಮಾಡಲು ಲಕ್ಷಾಂತರ ರೂಪಾಯಿ ವೆಚ್ಚವಾಗುತ್ತದೆ, ಮಲ್ಲೇಶ್ವರಂ ಬ್ರಾಹ್ಮಣ ಸಭಾ ವತಿಯಿಂದ ಸಂಪೂರ್ಣ ಖರ್ಚುನ್ನು ಭರಿಸಿದೆ. ಬ್ರಾಹ್ಮಣ ಸಮುದಾಯ ಸರ್ವೆ ಜನಾಃಸುಖಿನೋ ಭವಂತು ಎಂದು ಭಾವಿಸಿ ಜೀವನ ನಡೆಸುತ್ತಾರೆ.ಎಲ್ಲರಿಗೂ ಒಳಿತು ಬಯಸುವ ಬ್ರಾಹ್ಮಣ ಸಮುದಾಯ ಆರ್ಥಿಕವಾಗಿ ಸಬಲರಾಗಬೇಕು ಸಮಾಜದ ಮುಖ್ಯವಾಹಿನಿಗೆ ಬರಬೇಕು ಎಂಬುದು ನಮ್ಮ ಆಶಯ.

ರಾಜಕೀಯ,ಶಿಕ್ಷಣ ಮತ್ತು ಉದ್ಯೋಗದಲ್ಲಿ ಬ್ರಾಹ್ಮಣ ಸಮುದಾಯದವರಿಗೆ ಹೆಚ್ಚಿನ ಅವಕಾಶ ಸಿಗಬೇಕು. ಇಂದು ಉಚಿತ ಉಪನಯನ ಕಾರ್ಯಕ್ರಮದಲ್ಲಿ 5000ಸಾವಿರ ಬ್ರಾಹ್ಮಣ ಸಮುದಾಯದವರು ಭಾಗವಹಿಸಿ,ಈ ಪುಣ್ಯ ಕಾರ್ಯ ನೇರವೆರಿಸಿದ್ದಾರೆ. ಎಲ್ಲರಿಗೂ ಉಪಹಾರ,ಊಟದ ವ್ಯವಸ್ಥೆ ಮಾಡಲಾಗಿದೆ.

Leave a Comment

Your email address will not be published. Required fields are marked *

Translate »
Scroll to Top