ಗಂಗಾವತಿ : ಬಿಜಾಪುರ ಜಿಲ್ಲೆ ಸೇರಿದಂತೆ ತಾಲೂಕ ಹಾಗೂ ವಿವಿಧ ಗ್ರಾಮಗಳಲ್ಲಿ ಕರ್ನಾಟಕ ರಾಜ್ಯ ಅನ್ನದಾತ ರೈತ ಸಂಘ ಅಸ್ತಿತ್ವಕ್ಕೆ ವಿಜಯಪುರ,, ರೈತರ ಧ್ವನಿಯಾಗಿ ರಾಜ್ಯಾದ್ಯಂತ ಸಂಘಟನೆ ರಾಜ್ಯಾಧ್ಯಕ್ಷ ಶರಣೆಗೌಡ ಕೆಸರಟ್ಟಿ ದಿನಾಂಕ 18.4. 2022 ರಂದು ಬಿಜಾಪುರ ಜಿಲ್ಲೆಯಲ್ಲಿ ಅಖಿಲ ಕರ್ನಾಟಕ ರಾಜ್ಯ ಅನ್ನದಾತ ರೈತ ಸಂಘದಿಂದ ಜಿಲ್ಲಾ ಘಟಕವನ್ನು ಹಾಗೂ ತಿಕೋಟಾ ತಾಲೂಕು ಘಟಕ ಮತ್ತು ಹೋನವಾಡ ಗ್ರಾಮ ಘಟಕವನ್ನು ಅನಾವರಣ ಮಾಡಲಾಯಿತು ಈ ಸಂದರ್ಭದಲ್ಲಿ ಜಿಲ್ಲಾ ಅಧ್ಯಕ್ಷರನ್ನು ಹಾಗೂ ತಾಲೂಕ ಅಧ್ಯಕ್ಷರು ಗಳನ್ನು ಆಯ್ಕೆ ಮಾಡಲಾಯಿತುಜಿಲ್ಲಾ ಘಟಕ ತಾಲೂಕ ಘಟಕ ಗ್ರಾಮ ಘಟಕ ದಿಂದ ಸುಮಾರು ಐದುನೂರಕ್ಕೂ ಹೆಚ್ಚು ಮಹಿಳೆಯರು 150ಕ್ಕೂ ಹೆಚ್ಚು ಪುರುಷರು ಅಖಿಲ ಕರ್ನಾಟಕ ರಾಜ್ಯ ಅನ್ನದಾತ ರೈತ ಸಂಘಕ್ಕೆ ಸೇರ್ಪಡೆಯಾದರು. ಮತ್ತು ಆದೇಶ ಪತ್ರವನ್ನು ಸಹ ಸ್ವೀಕರಿಸಿದರು ಸಮಾರಂಭದಲ್ಲಿ ರಾಜ್ಯ ಮುಖಂಡರು ಹಾಗೂ ರಾಜಾಧ್ಯಕ್ಷರು ರಾಜ್ಯ ಮಹಿಳಾ ಅಧ್ಯಕ್ಷರು ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ಸಂಘವನ್ನು ಉದ್ಘಾಟಿಸಿ ಮಾತನಾಡಿದೆ ರಾಜ್ಯ ಅಧ್ಯಕ್ಷರಾದ ಕೇಸರಟ್ಟಿ ಶರಣಗೌಡ ಜಿಲ್ಲೆಯಲ್ಲಿ ಮಹಿಳೆಯರು ರೈತಸಂಘಕ್ಕೆ ಸೇರ್ಪಡೆಯಾಗಿರುವುದು.
ತುಂಬಾ ಸಂತೋಷ ತಂದಿದೆ. ಈ ಭಾಗದಲ್ಲಿ ರಾಜಕೀಯ ವ್ಯಕ್ತಿಗಳು ಮತ್ತು ಸರಕಾರ ರೈತರ ಕಷ್ಟಗಳನ್ನು ಪರಿಹರಿಸದೆ ರೈತ ದೇಶದ ಬೆನ್ನೆಲುಬು ಅಂತ ಹೇಳಿ ಅವರ ಬೆನ್ನುಮೂಳೆಯನ್ನು ಮುರಿಯುವ ಕೆಲಸ ಮಾಡುತ್ತಿದೆ ಕಳಪೆ ರಸಗೊಬ್ಬರ ಕಳಪೆ ಬೀಜಗಳನ್ನು ರೈತರಿಗೆ ನೀಡಿ ಮೋಸ ಮಾಡುತ್ತಿರುವ ಹಲವಾರು ಕಂಪನಿಗಳು ರೈತರ ಹೊಟ್ಟೆಯ ಮೇಲೆ ಬರೆ ಎಳೆಯುತ್ತಿವೆ.ಈ ಭಾಗದಲ್ಲಿ ಕಷ್ಟಗಳನ್ನು ಕೇಳುವವರು ಯಾರೂ ಇಲ್ಲ.ಅಧಿಕಾರಿವರ್ಗದವರು ರೈತರ ಕಷ್ಟಗಳನ್ನು ಕೇಳದೆ ಕಣ್ಮುಚ್ಚಿ ಕುಳಿತಿದ್ದಾರೆ. ಹಾಗಾಗಿ ನಾವು ರೈತಸಂಘದಿಂದ ರೈತರೆಲ್ಲರೂ ಸೇರಿ ವಿಧಾನಸೌಧದ ವರೆಗೆ ಹೋರಾಟ ಮಾಡಿ ರೈತರ ಹಕ್ಕುಗಳನ್ನು ಪಡೆಯಬೇಕು ಮತ್ತು ಚುನಾವಣೆ ಬಂದಾಗ ರೈತ ಕಷ್ಟಗಳನ್ನು ನೋಡುವ ವ್ಯಕ್ತಿಗೆ ಹಣ ಆಮಿಷಕ್ಕೆ ಬಲಿಯಾಗದೆ ಮತ ನೀಡಿದಾಗ ರೈತ ಕಷ್ಟಗಳನ್ನು ಪರಿಹರಿಸಲು ಸಾಧ್ಯವಾಗುತ್ತದೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಮಹಿಳಾ ರಾಜ್ಯಾಧ್ಯಕ್ಷರಾದ ಸರೋಜಾ ಬಸವರಾಜ್ ಚಿಕ್ಕಮಂಗಳೂರು . ಮಹಿಳೆಯರು ರೈತ ಹೋರಾಟಕ್ಕೆ ಮುಂಚೂಣಿಯಲ್ಲಿ ತುಂಬಾ ಸಂತಸದ ಕೆಲಸ ಬಿಜಾಪುರ ಜಿಲ್ಲೆಯಲ್ಲಿ ಸುಮಾರು ಐದುನೂರಕ್ಕೂ ಹೆಚ್ಚು ಮಹಿಳೆಯರು ಅಖಿಲ ಕರ್ನಾಟಕ ರಾಜ್ಯ ಅನ್ನದಾತ ರೈತ ಸಂಘವನ್ನು ಬಿಸಿಲು ಲೆಕ್ಕಿಸದೆ ರೈತ ಹೋರಾಟಕ್ಕೆ ನಾಂದಿ ಆಡಿರುವುದು ತುಂಬಾ ಸಂತಸದ ವಿಷಯ ಮುಂದೆ ವಿಜಯಪುರ ಜಿಲ್ಲೆ ಪ್ರತಿ ತಾಲೂಕು ಘಟಕ ಪ್ರತಿ ಗ್ರಾಮ ಘಟಕ ಉದ್ಘಾಟನೆ ಯಾಗಲಿ ವಿಜಯಪುರ ದಿಂದಲೇ ರೈತರಿಗೆ ಪರಿಹಾರ ದೊರಕಲಿ ಎಂದು ಈ ಸಂದರ್ಭದಲ್ಲಿ ಹೇಳುವ ಮೂಲಕ ನಾವು ನಮ್ಮ ಸಂಘದ ರಾಜ್ಯ ಪದಾಧಿಕಾರಿಗಳು ರಾಜ್ಯ ಅಧ್ಯಕ್ಷರು ನಿಮ್ಮ ಜೊತೆಗೆ ನಾವಿದ್ದೇವೆ ಯಾವುದೇ ಸಂದರ್ಭದಲ್ಲಿ ಹೋರಾಟಕ್ಕೆ ಹೆದರದೆ ಮುನ್ನುಗ್ಗಿ ಎಂದು ಹೇಳಿದರು.
ಹಾಗೂ ಈ ಸಂದರ್ಭದಲ್ಲಿ ರಾಜ್ಯ ಉಪಾಧ್ಯಕ್ಷರಾದ ಶರಣಪ್ಪ ಕೊತ್ವಲ್. ಮಾತನಾಡಿ ಕರ್ನಾಟಕ ರಾಜ್ಯದಲ್ಲಿ ರೈತ ಕಷ್ಟಗಳಿಗೆ ಸ್ಪಂದಿಸಿ ರಾಜ್ಯಾದ್ಯಂತ ಹೋರಾಟ ಮಾಡುವುದೇ ನಮ್ಮ ಸಂಘದ ಕೆಲಸ ರೈತ ಹಸಿರನ್ನು ಬೆಳೆದು ದೇಶದ ಉಸಿರನ್ನು ಕಾಪಾಡುವ ಅನ್ನದಾತ ಆದ್ದರಿಂದ ಆತನನ್ನು ಕಾಪಾಡುವುದೇ ನಮ್ಮ ಸಂಘದ ಕೆಲಸ ಮತ್ತು ರೈತರಿಗೆ ಮೋಸ ಮಾಡುತ್ತಿರುವ ಹಲವಾರು ಕಂಪನಿಗಳನ್ನು ಬಯಲಿಗೆಳೆದು. ತಾವು ಕಷ್ಟಪಟ್ಟು ಬೆಳೆದ ರೈತರಿಗೆ ಪರಿಹಾರ ಕೊಡಿಸಿ ದಾಗ ಮಾತ್ರ ನಾವು ಸಂಘ ಕಟ್ಟಿದಕ್ಕೆ ಸಾರ್ಥಕತೆ ಬರುತ್ತದೆ. ರಾಜ್ಯದ ಡೋಂಗಿ ರಾಜಕಾರಣಿ ಗಳು ತುಂಬಾ ಇದ್ದು ಅಂತವರಿಗೆ ಸರಿಯಾಗಿ ಬಿಸಿ ಮುಟ್ಟಿಸಿದಾಗ ಮಾತ್ರ ರೈತರ ಮುಂದುವರಿಯಲು ಸಾಧ್ಯ. ಎಂದು ಈ ಸಂದರ್ಭದಲ್ಲಿ ಈ ಸಂದರ್ಭದಲ್ಲಿ ಹೇಳಿದರು. ಮತ್ತು ವೇದಿಕೆ ಮೇಲೆ ರಾಜ್ಯ ಮುಖಂಡರಾದ ಕಿಶೋರ್ ಭಟಾರಿ. ಮಾಯಮ್ಮ ಉಪ್ಪರ ವೆಂಕಣ್ಣ ಜಂತಕಲ್. ಶ್ರೀನಿವಾಸ್ ಜಂತಕಲ್. ಮಲ್ಲಿಕಾರ್ಜುನ್. ಅಪ್ಪು ಪೂಜಾರಿ. ಅನಿಲ್ ಪೂಜಾರಿ. ಹಾಗೂ ವಿಜಯಪುರ ಗೌರವ ಅಧ್ಯಕ್ಷರರಾಗಿ ಧರಪ್ಪ ವಿಠ್ಠಲ ಗುಗ್ಗರಿ. ಜಿಲ್ಲಾ ಅಧ್ಯಕ್ಷರಾಗಿ ಮೋತಿಲಾಲ್ ಧರ್ಮ ಇವರನ್ನು H.D.ಧರೆಪ್ಪ ಇವರನ್ನು ತಿಕೊಟ ಕಾರ್ಯಾಧ್ಯಕ್ಷೆರನ್ನಗಿ ಆಯ್ಕೆ ಮಾಡಲಾಯಿತು. ಮಹಿಳಾ ಜಿಲ್ಲಾ ಅಧ್ಯಕ್ಷರನ್ನಗಿ ಶರಣವ್ವ ಹೂನವಾಡ . ಇವರನ್ನು ನೇಮಕ ಮಾಡಲಾಯಿತು. ತಿಕೋಟಾ ತಾಲೂಕ ಅಧ್ಯಕ್ಷರಾಗಿ ಸುರೇಖಾ ಕಂಬಾರ.ಇವರನ್ನು ಆಯ್ಕೆ ಮಾಡಲಾಯಿತು. ರೀತಾ ಮಾಯವಂಶಿ.ತಾಲೂಕಿನ ಉಪಾಧ್ಯಕ್ಷ ಮಾದೇವಿ ನಾಟೇಕಾರ.ಇತರ ಮುಖಂಡರು ಸಹ ಭಾಗಿಯಾಗಿದ್ದರು