ಕ್ವೀನ್ಸ್ ರಸ್ತೆಯಲ್ಲಿರುವ ಕೆಪಿಸಿಸಿ ಕಚೇರಿಯಲ್ಲಿ ನಡೆದ ಪ್ರತಿಕಾಗೋಷ್ಠಿಯಲ್ಲಿ ಮಾಜಿ ಎಂಎಲ್‌ಸಿ ರಮೇಶ್ ಬಾಬು ಅವರು ಮಾಧ್ಯಮದವರನ್ನು ಉದ್ದೇಶಿಸಿ ಮಾತನಾಡಿದರು ಕೇಂದ್ರ ಸಚಿವ ಭಗವಂತ ಖೂಬಾ ಅವರಿಂದ ನನಗೆ ಜೀವ ಬೆದರಿಕೆ ಹಾಕಲಾಗಿದೆ, ನನ್ನ ಪ್ರಾಣಕ್ಕೆ ಆಪತ್ತಿದೆ ಎಂದು ಔರಾದ್ ಕ್ಷೇತ್ರದ ಬಿಜೆಪಿ ಶಾಸಕ ಪ್ರಭು ಚವ್ಹಾಣ್ ಅವರು ಗಂಬೀರವಾದ ಆರೋಪ ಮಾಡಿದ್ದಾರೆ. ಬಿಜೆಪಿ ನಾಯಕರೇ ಪ್ರಾಣಭಯದಲ್ಲಿ ಬದುಕುತ್ತಿದ್ದಾರೆ. ಚುನಾವಣೆಗೂ ಮೊದಲು ಗೂಂಡಾ ರಾಜಕಾರಣ ಮಾಡುತ್ತಿದ್ದ ಬಿಜೆಪಿ, ಚುನಾವಣೆ ಸೋತ ನಂತರವೂ ಹಳೆಯ ಚಾಳಿ ಬಿಟ್ಟಿಲ್ಲ, ಬಿಜೆಪಿ ಶಾಸಕ ಪ್ರಭು ಚವ್ಹಾಣ್ ಅವರು ಕೇಂದ್ರ ಸಚಿವ ಭಗವಂತ ಖೂಬಾ ಮೇಲೆ ಆರೋಪ ಮಾಡಿದರೂ ಬಿಜೆಪಿಯಲ್ಲಿ ದಲಿತ ಶಾಸಕನ ಪರ ನಿಲ್ಲಲು ಯಾರೂ ಸಿದ್ದರಿಲ್ಲ. ವಿಧಾನಸಭಾ ಚುನಾವಣೆಯ ಮೊದಲು ಹಾಗು ನಂತರವೂ ಬಿಜೆಪಿ ಅಪರಾಧಗಳಿಗೆ, ಅಪರಾಧಿಗಳಿಗೆ ಕುಮ್ಮಕ್ಕು ನೀಡುವ ಕೆಲಸ ಮಾಡಿಕೊಂಡು ಬರುತ್ತಿದೆ.

ಬೀದರ್ ಜಿಲ್ಲಾ ಎಸ್‌ಪಿಗೆ ಭಗವಂತ ಖೂಬಾ ಅವರು ದೂರನ್ನು ಕೊಟ್ಟಿದ್ದು, ಅದರಲ್ಲಿ “ಪ್ರಭು ಚವ್ಹಾಣ್ ಅವರಿಗೆ ಏನಾದರೂ ತೊಂದರೆಯಾದರೆ ಅದಕ್ಕೆ ನಾನು ಹೊಣೆಗಾರನ್ನಲ್ಲ ಎಂದ ದೂರನ್ನು ಕೊಟ್ಟಿದ್ದಾರೆ. ರಾಜ್ಯ ಬಿಜೆಪಿ ಘಟಕ ಖೂಬ ಅವರಿಗೆ ನೋಟಿಸ್ ನೀಡಬೇಕಿತ್ತು, ಸ್ಪಷ್ಟನೆ ಕೇಳಬೇಕಿತ್ತ ಅಥವಾ ಕೇಂದ್ರ ಸಂಪುಟದಿಂದ ತೆಗೆದು ಹಾಕಬೇಕಿತ್ತು, ಇದನ್ನೆಲ್ಲಾ ಮಾಡದೇ ಕ್ರಿಮಿನಲ್‌ಗಳನ್ನ ರಕ್ಷಿಸುವ ಕೆಲಸ ಮಾಡುತ್ತಿದೆ. ರಾಷ್ಟ್ರೀಯ ಬಿಜೆಪಿ ನಾಯಕರು ಸುಮ್ಮನೆ ಕುಳಿತಿದ್ದಾರೆ. ಕಾಂಗ್ರೆಸ್ ಪಕ್ಷವು ವಿಧಾನಸಭಾ ಸ್ಪೀಕರ್ ಅವರಲ್ಲಿ ಮನವಿ ಮಾಡುತ್ತಿದ್ದು, ಶಾಸಕರಾದ ಪ್ರಭು ಚವ್ಹಾಣ್ ಅವರಿಗೆ ಸೂಕ್ತ ರಕ್ಷಣೆಯನ್ನು ಒದಗಿಸಬೇಕು ಮತ್ತು ನ್ಯಾಯಾಂಗ ತನಿಖೆಗೆ ಸೂಚಿಸಬೇಕು. ಭಗವಂತ ಖೂಬಾ ಅವರಿಗೆ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ನಮ್ಮ ಬೀದರ್ ಜನತೆ ತಕ್ಕ ಪಾಠ ಕಲಿಸಲಿದ್ದಾರೆ. ರಾಷ್ಟ್ರೀಯ ಶಿಕ್ಷಣ ನೀತಿಯನ್ನು ರಾಜ್ಯದಲ್ಲಿ ರದ್ದುಮಾಡಲಾಗುವುದು ಎಂದು ನಮ್ಮ ಪ್ರಣಾಳಿಕೆಯಲ್ಲಿ ಹೇಳಲಾಗಿತ್ತು ಅದರಂತೆ ನಾವು ನಮ್ಮ ಮಾತಿಗೆ ಬದ್ದರಾಗಿದ್ದೇವೆ. ಯಾವುದೇ ಕಾರಣಕ್ಕೂ ಶಿಕ್ಷವನ್ನು ರಾಜ್ಯ ಪಟ್ಟಿಯಿಂದ ತಗೆದು ಕೇಂದ್ರ ಪಟ್ಟಿಗೆ ಸೇರಿಸಬಾರದು, ಶಿಕ್ಷಣದ ಕುರಿತು ಕಾನೂನು ತೆಗೆದುಕೊಳ್ಳುವ ಹಕ್ಕು ರಾಜ್ಯಗಳ ಬಳಿಯೇ ಇರಬೇಕು.
ಶಿಕ್ಷಣವನ್ನು ತಿರುಚುವ ಕೆಲಸವನ್ನು ಬಿಜೆಪಿ ಮಾಡುತ್ತಿದೆ. ನೂತನ ಶಿಕ್ಷಣ ನೀತಿಗೆ ಸಂಬಂಧಿಸಿದಂತೆ ತೀರ್ಮಾನ ತೆಗೆದುಕೊಳ್ಳುವ ಹಕ್ಕನ್ನು ರಾಜ್ಯಗಳಿಗೆ ನೀಡಲಾಗುವುದು ಎಂದು ನಿರ್ಮಲಾ ಸೀತರಾಮನ್ ಅವರು ಹೇಳಿದ್ದರು, ಅದನ್ನು ನಾವು ಸ್ವಾಗತಿಸುತ್ತೇವೆ.
ಶೇ 30 ರಷ್ಟು ಶಿಕ್ಷಕರ ವರ್ಗಾವಣೆಯನ್ನು ಅತ್ಯಂತ ಸುಲಲಿತವಾಗಿ ಶಿಕ್ಷಣ ಸಚಿವರಾದ ಮಧು ಬಂಗಾರಪ್ಪ ಅವರ ನೇತೃತ್ವದಲ್ಲಿ ನಡೆದಿದೆ. ಜೊತೆಗೆ 10 ಸಾವಿರ ಅತಿಥಿ ಶಿಕ್ಷಕರ ನೇಮಕಾತಿ ಮಾಡಿಕೊಳ್ಳುವ ತೀರ್ಮಾನ ತೆಗೆದುಕೊಳ್ಳಲಾಗಿದೆ.
ಕ್ವೀನ್ಸ್ ರಸ್ತೆಯಲ್ಲಿರುವ ಕೆಪಿಸಿಸಿ ಕಚೇರಿಯಲ್ಲಿ ನಡೆದ ಪ್ರತಿಕಾಗೋಷ್ಠಿಯಲ್ಲಿ ವಕ್ತಾರರಾದ ಲಕ್ಷ್ಮಣ್ ಅವರು ಮಾಧ್ಯಮದವರನ್ನು ಉದ್ದೇಶಿಸಿ ಮಾತನಾಡಿದರು
ಕಾವೇರಿ ನೀರನ್ನು ತಮಿಳುನಾಡಿಗೆ ಹರಿಸುತ್ತಿರುವುದ್ದಕ್ಕೆ ಮಾಜಿ ಮುಖ್ಯಮಂತ್ರಿಗಳಾದ ಕುಮಾರಸ್ವಾಮಿ ಮತ್ತು ಬಸವರಾಜ ಬೊಮ್ಮಾಯಿ ಅವರು ಸುಮ್ನನೆ ಆರೋಪ ಮಾಡುತ್ತಿದ್ದಾರ, ಇದಕ್ಕೆ ಸುಪ್ರೀಂ ಕೋರ್ಟಿನ ಅಂತಿಮ ತೀರ್ಮಾನ ಏನಿದೆ ಎಂದು ವಿವರಿಸಲಾಗುವುದು.
2018 ಮಾರ್ಚ್ ತಿಂಗಳಲ್ಲಿ ಕಾವೇರಿ ನೀರಿನ ಹಂಚಿಕೆ ವಿಚಾರವಾಗಿ ಅಂತಿಮ ತೀರ್ಮಾನ ನೀಡಿತು. ಕಾವೇರಿ ಜಲಾನಯನ ಪ್ರದೇಶದಲ್ಲಿ ಪ್ರಮುಖ ನಾಲ್ಕು ಅಣೆಕಟ್ಟುಗಳಿವೆ ಹಾರಂಗಿ, ಕಬಿನಿ, ಹೇಮಾವತಿ, ಕೃಷ್ಣರಾಜ ಇವುಗಳು ಸಂಪೂರ್ಣವಾಗಿ ಕಾವೇರಿ ವಾಟರ್ ಮಾಡಿಟರಿಂಗ್ ಅಥಾರಿಟಿ ಕೈಯಲ್ಲಿ ಇದ್ದು ನಮ್ಮ ಕರ್ನಾಟಕ ರಾಜ್ಯ ಸರ್ಕಾರದ ಬಳಿ ಇಲ್ಲ.
ಕೇಂದ್ರ ಜಲ ಆಯೋಗ ಅಂತ ಇದೆ ಅದರ ನಿರ್ದೇಶನದ ಮೇರೆಗೆ ಈ ಪ್ರಾಧಿಕಾರ ಕೆಲಸ ಮಾಡುತ್ತದೆ. ಕೆಆರ್‌ಎಸ್ ಅಣೆಕಟ್ಟಿನಲ್ಲಿ ಸುಮಾರು 114 ಗೇಟ್‌ಗಳಿವೆ, ಮೊದಲು ಗೇಟ್ ಅನ್ನು ಮ್ಯಾನುಯಲ್ ಆಗಿ ತೆರೆಯಬೇಕಿತ್ತು, 1 ವರ್ಷದಹಿಂದೆ ಇದನ್ನು ಬದಲಾಯೊಸಲಾಗಿದೆ, ಇದನ್ನು ಸ್ಕಾಡ ವ್ಯವಸ್ಥೆ ಮೂಲಕ ಗೇಟ್ ಗಳನ್ನು ಡೆಲ್ಲಿಯಲ್ಲೆ ಕುಳಿತುಕೊಂಡು ಅಲ್ಲಿಂದಲೇ ನಿರ್ವಹಣೆ ಮಾಡಲಾಗುತ್ತದೆ.
ಕುಮಾರಸ್ವಾಮಿ ಅವರು 2 ಸಲ ಬೊಮ್ಮಾಯಿ ಅವರು 1 ಸಲ ಮುಖ್ಯಮಂತ್ರಿಗಳಾಗಿದ್ದರು, ಜಲಸಂಪನ್ಮೂಲ ಸಚಿವರಾಗಿದ್ದರು, ಆದರೂ ಕಾವೇರಿ ನೀರಿನ ವಿಚಾರದ ಬಗ್ಗೆ ಕನಿಷ್ಟ ಜ್ಞಾನವಿಲ್ಲವೇ? ನಮ್ಮ ಕಾಡ (ಕಾವೇರಿ ನೀರಾವರಿ ನಿಗಮ) ಅವರ ಕೆಲಸ ಕೇವಲ ನಾಲೆಗಳಿಗೆ ನೀರನ್ನು ಹರಿಸುವ, ಹಂಚಿಕೆ ಮಾಡುವ ಕೆಲಸ ಮಾಡುತ್ತದೆ. ಮುಖ್ಯ ಅಣೆಕಟ್ಟಿನ ಗೇಟ್ ತೆರೆಯುವ ಅಧಿಕಾರ ಕೇಂದ್ರ ಸರ್ಕಾರದ ಬಳಿ ಇದೆ. ಇದು ಗೊತ್ತಿಲ್ಲವೇ ಮಾಜಿ ಮುಖ್ಯಮಂತ್ರಿಗಳಿಗೆ?
ಆಗಸ್ಟ್ 16 ನೇ ತಾರೀಕು ಕೇಂದ್ರ ಜಲ ಸಂಪನ್ಮೂಲ ಸಚಿವರ ಸಮ್ಮುಖದಲ್ಲಿ ಕರ್ನಾಟಕ ಮತ್ತು ತಮಿಳುನಾಡಿನ ಎಂಜಿನಿಯರ್‌ಗಳ ಸಭೆ ನಡೆಸಿದರು, ನಾವು ನೀರು ಕಡಿಮೆ ಇದೆ ಎಂದು ಹೇಳಿದೆವು, ಅವರು ಸಭೆ ಬಹಿಷ್ಕಾರ ಮಾಡಿ ಹೋದರು. ನೇರವಾಗಿ ಸುಪ್ರೀಂ ಕೋರ್ಟಿಗೆ ತುರ್ತು ಅರ್ಜಿ ಸಲ್ಲಿಸಿದರು. ಈ ಅರ್ಜಿ ಸೋಮವಾರದ ಒಳಗೆ ವಾದ- ವಿವಾದಕ್ಕೆ ಬರುತ್ತದೆ. ಕರ್ನಾಟಕ- ತಮಿಳುನಾಡು- ಪಾಂಡಿಚೇರಿ ಗೆ ನೀರನ್ನು ಹರಿಸಬೇಕು ಆಗಸ್ಟ್ 31ನೇ ತಾರಿಕಿನ ತನಕ ದಿನ ನಿತ್ಯ 10 ಸಾವಿರ ಕ್ಯೂಸೆಕ್ಸ್ ನೀರನ್ನು ಹರಿಸಬೇಕು ಎಂದು ಸುಪ್ರೀಂ ಕೋರ್ಟ್ ಒಂದು ತುರ್ತು ಆದೇಶ ನೀಡಿದೆ. ಆನಂತರ ನಾವು ತೀರ್ಮಾನ ಮಾಡುತ್ತೇವೆ.
18.8.2023 ರ ಪ್ರಕಾರ ಕೆ.ಆರ್.ಎಸ್ ನಲ್ಲಿ ಲಭ್ಯ ಇರುವ ನೀರು 22.02 ಟಿಎಂಸಿ. ಕಬಿನಿಯಲ್ಲಿ 6.49 ಟಿಎಂಸಿ, 7.05 ಟಿಎಂಸಿ, ಹೇಮಾವತಿಯಲ್ಲಿ 20 ಟಿಎಂಸಿ ಇದೆ. ನಾಲ್ಕು ಅಣೆಕಟ್ಟಿನಲ್ಲಿ 115ಟಿಎಂಸಿ ನೀರು ಸಂಗ್ರಹಿಸಬಹುದು ಅದರಲ್ಲಿ 15 ಟಿಎಂಸಿ ಡೆಡ್ ಸ್ಟೋರೇಜ್ ಕೊನೆಗೆ 100 ಟಿಎಂಸಿ ಮಾತ್ರ ಬಳಸಿಕೊಳ್ಳಲು ಅವಕಾಶವಿದೆ. ಪ್ರಸ್ತುತ 55.212 ಟಿಎಂಸಿ ನೀರಿದೆ.
ಈ ನೀರನ್ನ 5 ಜಿಲ್ಲೆಗಳ ಕುಡಿಯುವ ನೀರು ಮತ್ತು ಕೃಷಿಗೆ ಎಷ್ಟು ಬಳಸಬೇಕು ಎನ್ನುವ ಕುರಿತು ಯೋಜನೆ ರೂಪಿಸಬೇಕು. ಬೆಂಗಳೂರಿಗೆ ವಾರ್ಷಿಕ 24 ಟಿಎಂಸಿ ನೀರು ಕುಡಿಯುಲು ಬೇಕು. ಮೈಸೂರು, ಮಂಡ್ಯ, ರಾಮನಗರ, ಬೆಂಗಳುರು ಗ್ರಾ. ಇವುಗಳಿಗೆ 20 ಟಿಎಂಸಿ ನೀರು ಬೇಕು. ನೀರಾವರಿಗೆ 80 ಟಿಎಂಸಿ ನೀರು ಬೇಕು.
ಕೇಂದ್ರ ಸರ್ಕಾರ ಇದಕ್ಕೆ ಒಂದು ತಂಡ ಕಳಿಸಬೇಕು, ಪರಿಶೀಲಿಸಬೇಕು, ತಮಿಳುನಾಡಿನ ಸರ್ಕಾರ ಕರ್ನಾಟಕದ ವಿರುದ್ದ ಕೋರ್ಟಿಗೆ ಹೋಗಿಲ್ಲ, ಕೇಂದ್ರ ನೀರಾವರಿ ಪ್ರಾಧಿಕಾರದ ವಿರುದ್ದ ಹೋಗಿರುವುದು, ಇದನ್ನು ಸರಿಯಾಗಿ ತಿಳಿದುಕೊಳ್ಳದೆ ಕುಮಾರಸ್ವಾಮಿ ಅವರು ಕಾಂಗ್ರೆಸ್ ಸರ್ಕಾರದ ಮೇಲೆ ಆರೋಪ ಮಾಡಿದರೆ ಏನು ಲಾಭ? ಇದರ ವಿರುದ್ದ ತಕ್ಷಣ ಕೇಂದ್ರ ಸರ್ಕಾರ ಅಫಿಡವಿಟ್ ಸಲ್ಲಿಸಬೇಕಾಗಿತ್ತು ಆದರೆ ಮಾಡಿಲ್ಲ, ಕೇಂದ್ರ ಸರ್ಕಾರದ ಕರ್ನಾಟಕ ವಿರೋಧಿ ಧೋರಣೆ.
ಬೆಂಗಳೂರಿನ ಜನ ಟಿಶ್ಯೂ ಪೇಪರ್ ಇಟ್ಟುಕೊಂಡು ಹೋಗಬೇಕಾದ ಕಾಲ ಬರುತ್ತದೆ. ಬೆಂಗಳೂರಿನ ಜನಕ್ಕೆ ನೀರಿನ ಪರ್ಯಾಯ ವ್ಯವಸ್ಥೆ ಇಲ್ಲ. ಕೇಂದ್ರ ಸರ್ಕಾರಕ್ಕೆ ನೀರು ಬಿಡುವ ವಿಚಾರಕ್ಕೆ ರಾಜ್ಯ ನಾಯಕರು ಕೇಂದ್ರ ಸರ್ಕಾರಕ್ಕೆ ಮನವರಿಕೆ ಮಾಡಿಕೊಡಬೇಕು, ಅಲ್ಲಿ ಅಣ್ಣಾಮಲೈ ನೀರು ಬೇಕು ಎಂದು ಪ್ರತಿಭಟನೆ ಕೂರುತ್ತೇನೆ ಎಂದಿದ್ದಾರೆ, ಇಲ್ಲಿ ಬಸವರಾಜ ಬೊಮ್ಮಾಯಿ ಅವರು ನೀರು ಬಿಡಬೇಡಿ ಅನ್ನುತ್ತಾ ಇದಿರಿ ನಿಮ್ಮ ಸ್ಪಷ್ಟ ನಿಲುವು ಹೇಳಿ. ರಾಜಕೀಯ ಮಾಡುವುದನ್ನು ನಿಲ್ಲಿಸಿ ಕುಮಾರಸ್ವಾಮಿ ಹಾಗೂ ಬೊಮ್ಮಾಯಿ ಅವರೇ.
ಕುಮಾರಸ್ವಾಮಿ ಅವರು 18 ಜೂನ್ 2021 ರಂದು ಟ್ವೀಟ್ ಮಾಡಿದ್ದರು, ಆಗ ಬಿಜೆಪಿ ಸರ್ಕಾರ ಇತ್ತು. ಅಣ್ಣ- ತಮ್ಮಂದಿರಂತೆ ನಾವು ಕಾವೇರಿ ನೀರಿನ ವಿಚಾರವನ್ನ ಬಗೆಹರಿಸಿಕೊಳ್ಳಬೇಕು ಎಂದು ಆಗ ಟ್ವೀಟ್ ಮಾಡುತ್ತೀರಿ ಕುಮಾರಸ್ವಾಮಿ ಅವರೇ, ಆದರೆ ಈಗ ಕಾಂಗ್ರೆಸ್ ಪಕ್ಷ ಇಂಡಿಯಾದ ಭಾಗವಾದ ಡಿಎಂಕೆಯನ್ನು ಓಲೈಸಲು ಈಗ ನೀರನ್ನು ಬಿಡುತ್ತಿದೆ ಎಂದು ಹೇಳುತ್ತಾರೆ. ಇದರಲ್ಲಿ ಏನಾದರೂ ಅರ್ಥವಿದೆಯೇ?
ಕುಮಾರಸ್ವಾಮಿ ಅವರು ಯಾವಾಗ ಯಾರ ಪರ ಮಾತನಾಡುತ್ತಾರೆ ಎನ್ನುವುದು ಆ ದೇವರಿಗೆ ಗೊತ್ತು. ಕುಮಾರಸ್ವಾಮಿ ಅವರೇ ಟ್ವೀಟ್ ಮಾಡುವ ಮೊದಲು ಪರಿಶೀಲಿಸಿ ಮಾತನಾಡಿ, ನೀವು ಬಿಜೆಪಿಗೆ ಪ್ರಶ್ನಿಸಬೇಕು ನಮ್ಮನ್ನಲ್ಲ, ಬಿಜೆಪಿ ಪರವಾಗಿ ಏಕೆ ಮಾತನಾಡುತ್ತಿದ್ದೀರಾ?
ಹಂಚಿಕೆ ನೀತಿ ಪ್ರಕಾರ, ಜುಲೈ, ಆಗಸ್ಟ್, ಸೆಪ್ಟೆಂಬರ್, ಅಕ್ಟೋಬರ್ ತಿಂಗಳಿನಿಂದ 150 ಟಿಎಂಸಿ ನೀರು ಬಿಡಬೇಕು, ವರ್ಷಕ್ಕೆ 177.2 ಟಿಎಂಸಿ ನೀರು ಬಿಡಬೇಕು. ಜುಲೈ 34, ಆಗಸ್ಟ್ 50, ಸೆಪ್ಟೆಂಬರ್ 40, ಆಗಸ್ಟ್ 22 ಟಿಎಂಸಿ ನೀರು ಬಿಡಬೇಕು ಆನಂತರ ಕಡಿಮೆ ನೀರು ಬಿಡುತ್ತಾ ಹೋಗಬೇಕು. ತಮಿಳುನಾಡಿನವರು ಆಗಸ್ಟ್ ತಿಂಗಳ ನೀರು ಮತ್ತು ಸೆಪ್ಟೆಂಬರ್ ತಿಂಗಳ ನೀರನ್ನು ಬಿಡುತ್ತೇವೆ ಎಂದು ಈಗಲೇ ತಿಳಿಸಬೇಕು ಎಂದು ಕೋರ್ಟಿಗೆ ಹೋಗಿದ್ದಾರೆ.
ಬೊಮ್ಮಾಯಿ ಅವರು ಹೇಳುತ್ತಾರೆ 64 ಟಿಎಂಸಿ ನೀರನ್ನು ಅವರು ಬಳಸಿಕೊಂಡಿದ್ದಾರೆ ಎಂದು ಅದು ಅವರಲ್ಲಿ ಸಂಗ್ರಹವಾದ ನೀರನ್ನು ಬಳಸಿಕೊಂಡಿರುವುದು ನಾವು ಬಿಟ್ಟಿರುವ ನೀರನ್ನಲ್ಲ, ನಾವು ಬಿಟ್ಟಿರುವುದು ಕೇವಲ 18 ಟಿಎಂಸಿ ನೀರು, ಬರೀ ಸುಳ್ಳೇ ಹೇಳುತ್ತಾರೆ ಪ್ರತಿಪಕ್ಷಗಳು
108 ಅಡಿಗೆ ಬಂದಿದೆ ಕೆಆರ್‌ಎಸ್ ನೀರಿನ ಮಟ್ಟ, ಲೋಕಸಭಾ ಚುನಾವಣೆ ಬರುತ್ತಿದೆ ಎಂದು ಸುಳ್ಳು ಹೇಳುತ್ತಿದೆ ಬಿಜೆಪಿ.
ಹೌದು ಬೇರೆ ಪಕ್ಷಗಳಿಂದ ಕಾಂಗ್ರೆಸ್ ಪಕ್ಷಕ್ಕೆ ಬರುತ್ತೇವೆ ಎಂದು ಜನ ಅರ್ಜಿ ಹಾಕಿದ್ದಾರೆ, ನಮ್ಮ ತತ್ವ ಸಿದ್ದಾಂತ ಒಪ್ಪಿ ಬಂದರೆ ನಮ್ಮ ಅಭ್ಯಂತರವಿಲ್ಲ, ಬೇರೆ ಪಕ್ಷಗಳಲ್ಲಿ ಉಸಿರುಗಟ್ಟಿಸುವ ವಾತಾವರಣವಿದೆ.
ನಾಗಮಂಗಲದ ಮಾಜಿ ಶಾಸಕ ಸುರೇಶ್ ಗೌಡರಿಗೆ ಮಾನಸಿಕ ಸ್ಥಿಮಿತ ಕಳೆದುಕೊಂಡು ಮಾತನಾಡುತ್ತಿದ್ದಾರೆ ಚಲುವರಾಯಸ್ವಾಮಿ ಅವರ ವಿರುದ್ದ ಮಾತನಾಡುತ್ತಿದ್ದಾರೆ.