ಮೊಳಕಾಲ್ಮೂರು ; ಉತ್ತಮ ಗುಣ ಮಟ್ಟದ ಪರಿಕರ, ಉತ್ತಮವಾದ ರಸಾಯನಿಕ ಗೊಬ್ಬರ, ಕಿಟನಾಶಕ ನೀಡಿ ಸಹಕರಿಸಿ, ರೈತರ ಬದುಕಿನ ಜೊತೆ ಆಟ ಆಡುವುದು ಒಳ್ಳೆಯದು ಅಲ್ಲ ಎಂದು ವೃತ್ತ ನಿರೀಕ್ಷಿಕರು ಸತೀಶ್ ರವರು ಸಲಹೆ ನೀಡಿದರು. ಪಟ್ಟಣದ ಕೃಷಿ ಇಲಾಖೆಯ ಕಚೇರಿಯಲ್ಲಿ ಆಯೋಜಿಸಿದ್ದ ಕೃಷಿ ಪರಿಕರ ಮತ್ತು ಕೀಟನಾಶಕ ಬಳಕೆ ಕುರಿತು ತರಬೇತಿ ಕಾರ್ಯಕ್ರಮ ಕುರಿತು ಸಲಹೆ ನೀಡಿ ಇವರು ಮಾತನಾಡಿದರು. ರೈತರಿಗೆ ಸುಮಾರು ವರ್ಷಗಳಿಂದ ಉತ್ತಮ ಬೆಳೆ ಇಲ್ಲದೆ ತೊಂದರೆ ಅನುಭವಿಸುತ್ತಿದ್ದಾರೆ. ಇಂತಹ ರೈತರಿಗೆ ಉತ್ತಮ ಪರಿಕರ, ಕೀಟನಾಶಕ ಔಷದಿ ನೀಡಬೇಕು. ಸರ್ಕಾರದಿಂದ ಅನುಮತಿ ಪಡೆಯದ ಯಾವುದೇ ರಸಾಯನಿಕಗಳನ್ನು ಯಾರು ಮಾರಬೇಡಿ. ರೈತರ ಭವಿಷ್ಯ ನೀವು ನೀಡುವ ಉತ್ತಮವಾದ ಬೀಜ, ಕೀಟ ನಾಶಕ, ಗೊಬ್ಬರ ಉತ್ತಮ ಬೆಳೆ ನೀಡುವ ಔಷದಿ ನೀಡಲು ಪರಿಕರ ಮಾರಾಟಗಾರರಿಗೆ ಸಲಹೆ ನೀಡರು.

ಚಿತ್ರದುರ್ಗ ಜಿಲ್ಲಾ ಜಂಟಿ ನಿರ್ದೇಶಕರ ಕಚೇರಿಯಿಂದ ಆಗಮಸಿ ಅಧ್ಯಕ್ಷತೆ ವಹಿಸಿದ್ದ ಡಾ ಲೋಕೇಶ್ ಸಹಾಯಕ ಕೃಷಿ ನಿರ್ದೇಶಕರು ಮಾತನಾಡಿ ರೈತರಿಗೆ ಯಾವುದೇ ಕಾರಣಕ್ಕೂ ಕಳಪೆ ಗುಣ ಮಟ್ಟದ ಪರಿಕರ ಮತ್ತು ಗೊಬ್ಬರ ನೀಡಬೇಡಿ. ಈ ವರ್ಷದಲ್ಲಿ ಉತ್ತಮ ಮುಂಗಾರು ಪ್ರಾರಂಭವಾಗುವ ಲಕ್ಷಣಗಳು ಕಾಣಿತ್ತಿದ್ದು , ಅಧಿಕಾರಿಗಳು ಮತ್ತು ಪರಿಕರ ಮಾರಾಟಗಾರರು ರೈತರಿಗೆ ಉತ್ತಮ ಸಲಹೆ ಸೂಚನೆ ನೀಡಿ ಸಹಕಾರ ನೀಡಬೇಕು. ರೈತರಿಗೆ ಕೀಟ ನಾಶಕ ಕಾಯ್ದೆಯದಿ ನೀಡಲಾಗಿರುವ ಕೀಟ ನಾಶಕ ರಾಸಾಯನಿಕ ಗೊಬ್ಬರಗಳನ್ನು ಮಾತ್ರ ಕೊಡಬೇಕು. ಕೆಲವು ಕಂಪನಿಗಳು ಉತ್ತಮ ಇಳುವರಿ ಬರುತ್ತದೆ ಎಂದು ಹೇಳಿ ರೈತರಿಗೆ ಮೋಸಮಾಡುತ್ತಾರೆ ಅಂತಹ ಕಂಪನಿಗಳಿಗೆ ಒತ್ತು ನೀಡಬೇಡದೆ ಜಾಗ್ರತೆವಹಿಸಿ ಕೆಲಸ ಮಾಡಿ . ಕಳಪೆ ಗುಣ ಮಟ್ಟದ ಮಿಶ್ರಣ ಮಾಡಿದ ಔಷದಿ ನೀಡಿದ್ದಲಿ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು. ಸಂದರ್ಭದಲ್ಲಿ ಕೃಷಿ ಸಹಾಯಕ ನಿರ್ದೇಶಕರು ಡಾ ವಿ ಸಿ ಉಮೇಶ್ , ಕೃಷಿ ಪರಿಕರ ಮಾರಾಟಗಾರರ ಸಂಘದ ಅಧ್ಯಕ್ಷರು ರವಿಕುಮಾರ್, ಗಿರೀಶ್ ಏನ್ ಕೃಷಿ ಅಧಿಕಾರಿ ಹನುಮಂತಪ್ಪ ಕೃಷಿ ಅಧಿಕಾರಿ, ಸಿಕಂದರ್ ಭಾಷ ಕೃಷಿ ಅಧಿಕಾರಿ, ನಿರಂಜನ್ ಮೂರ್ತಿ ಬಿ ಶಿವಣ್ಣ ಹಾಗೂ ಕೃಷಿ ಪರಿಕರ ಮಾರಾಟಗಾರರು ಭಾಗವಹಿಸಿದ್ದರು.