ಕುಷ್ಟಗಿ:- ಸರ್ಕಾರಿ ಪ್ರೌಢಶಾಲೆ ಚಳಗೇರಾ ದಲ್ಲಿ ಶಿಕ್ಷಣ ಕಾರ್ಯಪಡೆಯ ಸದಸ್ಯರುಗಳಿಗೆ ತರಬೇತಿ ಕಾರ್ಯಕ್ರಮ ಚಳಗೇರಿ ಅ 26 ಸರ್ಕಾರಿ ಪ್ರೌಢಶಾಲೆ ಚಳಗೇರಾ ದಲ್ಲಿ ಪ್ರತಿಯೊಂದು ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಪ್ರಾಥಮಿಕ ಶಿಕ್ಷಣದ ಸಾರ್ವತ್ರೀಕರಣ ಮತ್ತು ಗುಣಮಟ್ಟದ ಶಿಕ್ಷಣ ನೀಡುವಲ್ಲಿ ಸ್ಥಳೀಯ ಸಂಸ್ಥೆಯ ಜವಾಬ್ದಾರಿಯನ್ನು ಕಾರ್ಯಗತಗೊಳಿಸಲು ಪ್ರತಿ ಗ್ರಾಮ ಪಂಚಾಯಿತಿಯಲ್ಲಿ “ಗ್ರಾಮಪಂಚಾಯಿತಿ ಶಿಕ್ಷಣ ಪಡೆ”ಯ ರಚನೆ ಮತ್ತು ಆದರ ಜವಾಬ್ದಾರಿಯ ಕುರಿತು ಆದೇಶಿಸಿದ್ದು ಅದರಂತೆ ರಾಜ್ಯದಲ್ಲಿ ಗ್ರಾಮ ಪಂಚಾಯಿತಿ ಶಿಕ್ಷಣ ಪಡೆ ಅಸ್ತಿತ್ವಕ್ಕೆ ಬಂದಿದ್ದು ಸದಸ್ಯರುಗಳಿಗೆ ತರಬೇತಿಯನ್ನು ದಿನಾಂಕ 26- 10-2021 ರಿಂದ 29-10-2021 ರ ವರೆಗೆ ನಾಲ್ಕು ದಿನಗಳ ಕಾಲ ನಡೆಯಲಿದ್ದು ಇಂದು ತರಬೇತಿಯನ್ನು ಉದ್ಘಾಟನೆಯನ್ನು ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಶ್ರೀಯುತ ವೀರನಗೌಡ ಮಾಲಿಪಾಟೀಲ್ ಅವರು ಕಾರ್ಯಕ್ರಮ ಉದ್ಘಾಟಿಸಿ ನಂತರ ಮಾತನಾಡಿ ತರಬೇತಿ ಪ್ರಯೋಜನ ಪಡೆದುಕೊಂಡು ಅನುಷ್ಠಾನಗೊಳಿಸಲು ಸಲಹೆ ನೀಡಿದರು ಮುಖ್ಯ ಅತಿಥಿಗಳಾಗಿ ಗ್ರಾಮ ಪಂಚಾಯಿತಿ ಪಿಡಿಓ ಶ್ರೀ ಬಸವರಾಜ ಸಂಕನಾಳ ಮಾತನಾಡಿದರು.
ಪ್ರೌಢಶಾಲಾ ಎಸ್ಡಿಎಂಸಿ ಅಧ್ಯಕ್ಷರಾದ ರುದ್ರಪ್ಪ ಪಟ್ಟಣಶೆಟ್ಟಿ ಪ್ರೌಢಶಾಲೆಯ ಮುಖ್ಯೋಪಾಧ್ಯಾಯರಾದ ರಾಯಪ್ಪ ಹೂಗಾರ್ ಶಾಕಿರ್ ಬಾಬಾ ಕರಿಂ ಸಾಹೇಬ ಇದ್ದಲಗಿ ಶರಣಪ್ಪ ಪರಸಾಪುರ ಸಿದ್ದನಗೌಡ ಪೊಲೀಸ್ ಪಾಟೀಲ್ ವಿ ಆರ್ ಡಬ್ಲ್ಯೂ ಯಲ್ಲಪ್ಪ ಅಂಗನವಾಡಿ ಮೇಲ್ವಿಚಾರಕಿ ಶಕುಂತಲಾ ಪೂಜಾರಿ ಗ್ರಂಥಪಾಲಕ ಯಲ್ಲಪ್ಪ ಕುರುಬರ್ ನಿವೃತ್ತ ಶಿಕ್ಷಕರಾದ ಅಲ್ಲಾಭಕ್ಷ ಅತ್ತಾರ್ ಬಸಪ್ಪ ಭೋಗಿ ವಿದ್ಯಾರ್ಥಿ ಪ್ರತಿನಿಧಿಗಳಾದ ಸುಮಾ ಮಸ್ಕಿ ಮಠ ನಾಗರಾಜ್ ವಡ್ಡರ್ ಹಾಗೂ ಆರೋಗ್ಯ ಇಲಾಖೆಯ ಆಶಾ ಕಾರ್ಯಕರ್ತರಾದ ಕಾಳಮ್ಮ ಇತರರು ಇದ್ದರು.
ತರಬೇತಿ ಕುರಿತು ಪ್ರಾಸ್ತಾವಿಕವಾಗಿ ಅರವಿಂದ್ ಕುಮಾರ್ ದೇಸಾಯಿ ಮಾತನಾಡಿದರು ಸ್ವಾಗತವನ್ನು ವಿಜ್ಞಾನ ಶಿಕ್ಷಕರಾದ ಶರಣಪ್ಪ ಪರಸಾಪುರ ಮಾಡಿದರು ಶಾಕಿರ್ ಬಾಬಾ ನಿರೂಪಿಸಿದರು ಕೊನೆಯಲ್ಲಿ ಸಿದ್ದನಗೌಡ ಪೊಲೀಸ್ ಪಾಟೀಲ್ ವಂದಿಸಿದರು 40ಜನ ಗ್ರಾಮಪಂಚಾಯಿತಿ ಕಾರ್ಯಪಡೆ ತರಬೇತಿಯಲ್ಲಿ ಪಾಲ್ಗೊಂಡಿದ್ದು ದಿನಾಂಕ 29- 10 -2021 ರಂದು ತರಬೇತಿ ಮುಕ್ತಾಯಗೊಳ್ಳಲಿದೆ.