ನಜೀರ್ ಸಭಾಂಗಣದಲ್ಲಿ ನಡೆದ ದಿಶಾ ಸಮಿತಿ ಸಭೆಯಲ್ಲಿ ಸಂಸದ ವೈ.ದೇವೇಂದ್ರಪ್ಪ, ಕರಡಿ ಸಂಗಣ್ಣ ಸೂಚನೆ
ಬಳ್ಳಾರಿ: ನಗರದ ಜಿಲ್ಲಾ ಪಂಚಾಯತ್ ಅಬ್ದುಲ್ ನಜೀರ್ ಸಭಾಂಗಣದಲ್ಲಿ ಜಿಪಂ, ಜಿಲ್ಲಾ ಅಭಿವೃದ್ಧಿ ಸಹಕಾರ ಮತ್ತು ಮೇಲ್ವಿಚಾರಣೆ ಸಮಿತಿ (ದಿಶಾ) ಸಭೆ ಹಾಗೂ (2022-23 ಹಾಗೂ 2023-24ನೇ ಸಾಲಿನ ಪ್ರಥಮ ತ್ರೈಮಾಸಿಕ ಪ್ರಗತಿ ವರದಿ ಸಭೆ ಹಮ್ಮಿಕೊಳ್ಳಲಾಗಿತ್ತು.

ಬಳ್ಳಾರಿ ಜಿಲ್ಲಾ ದಿಶಾ ಸಮಿತಿಯ ಅಧ್ಯಕ್ಷರು ಹಾಗೂ ಸಂಸದರಾದ ದೇವೇಂದ್ರಪ್ಪ, ಬಳ್ಳಾರಿ ಜಿಲ್ಲಾ ದಿಶಾ ಸಮಿತಿಯ ಸಹ ಅಧ್ಯಕ್ಷರು ಹಾಗೂ ಸಂಸದರಾದ ಕರಡಿ ಸಂಗಣ್ಣ ಅವರ ನೇತೃತ್ವದಲ್ಲಿ ನಡೆದ ದಿಶಾ ಸಮಿತಿ ಸಭೆಯ ನಡಾವಳಿಗೆ ಅನುಪಾಲನಾ ವರದಿಯಲ್ಲಿ ಡೇ ನಲ್ಮ್ ಯೋಜನೆ ಅಡಿಯ ಇ ಎಸ್ ಟಿ & ಪಿ ಉಪ ಘಟಕದಡಿ ನಿರುದ್ಯೋಗ ಮಹಿಳೆಯರಿಗೆ ಉದ್ಯೋಗ ಕಲ್ಪಿಸುವ ಸದುದ್ದೇಶದಿಂದ ಖಾಸಗಿ ಸಂಸ್ಥೆಯ ಸಹಯೋಗದೊಂದಿಗೆ ಕೋಟೆಯ ಪ್ರದೇಶದ ಪಾಲಿಕೆಯ ಸಮುದಾಯ ಭವನ ಕಟ್ಟಡದಲ್ಲಿ ಕಚ್ಛಾ ಬಟ್ಟೆ ಪಡೆದು ಜೀನ್ಸ್ ಬಟ್ಟೆ ತಯಾರಿಸಲು ಗಾರ್ಮೆಂಟ್ಸ್ ಯೂನಿಟ್ ಪ್ರಾರಂಭಿಸಲು ಕ್ರಮವಹಿಲಾಗಿತ್ತು ಆದರೆ ಜೀನ್ಸ್ ಬಟ್ಟೆಗೆ ಸಂಬಂಧ ಕಚ್ಚಾ ಬಟ್ಟೆಯನ್ನು ಸರಬರಾಜು ಆಗದೇ ಇದ್ದುದರಿಂದ ಹಾಗೂ ನಗರದ ಬೇರೆ ಬೇರೆ ಕಡೆಯಿಂದ ಸದರಿ ಸ್ಥಳಕ್ಕೆ ಬಂದು ಕಾರ್ಯನಿರ್ವಹಿಸಲು ಮಹಿಳೆಯರು ನಿರಾಸಕ್ತಿ ತೋರುತ್ತಿದ್ದಾರೆ ಎಂದು ಪಾಲಿಕೆಯ ಆಯುಕ್ತರಾದ ಖಲೀಲ್ ಸಾಬ್ ಅವರು ತಿಳಿಸಿದರು ಅಧಿಕಾರಿಗಳು ಸಭೆಗೆ ಉತ್ತರಿಸಿದರು

ನಗರದಲ್ಲಿ ಮತ್ತು ಜಿಲ್ಲೆಯಲ್ಲಿ ಎಷ್ಟು ನಿರುದ್ಯೋಗಿಗಳು ಇದ್ದಾರೆ ಎಂಬ ವರದಿ ನೀಡಿ ಅವರಿಗೆ ಸರ್ಕಾರದ ವಿವಿಧ ಕೌಶಲ್ಯ ಅಭಿವೃದ್ದಿ ಯೋಜನೆ ಅಡಿಯಲ್ಲಿ ಯುವಕರಿಗೆ ತರಬೇತಿ ನೀಡುವಂತೆ ಸಂಸದ ದೇವೇಂದ್ರಪ್ಪ ಮತ್ತು ಕರಡಿ ಸಂಗಣ್ಣ ಅವರು ಅಧಿಕಾರಿಗಳಿಗೆ ತಾಕೀತು ಮಾಡಿದರು.
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಪ್ರಶಾಂತ್ ಮಿಶ್ರಾ, ಸಿಇಒ ರಾಹುಲ್ ಸಂಕನೂರ್, ಎಂಎಲ್ ಸಿ ವೈ ಎಂ ಸತೀಶ್, ಮೇಯರ್ ತ್ರಿವೇಣಿ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಇದ್ದರು