ಏ 1 ರಿಂದ 4ರ ತನಕ ಪ್ರವಾಸ

ಬೆಂಗಳೂರು : ಈ ವಿಚಾರವಾಗಿ ರಾಜ್ಯಕ್ಕೆ ದೇಶದ 16 ರಾಜ್ಯದ 40ಕ್ಕೂ ಅಧಿಕ ಯುವ ಮೋರ್ಚಾ ಹಲವು ಪದಾಧಿಕಾರಿಗಳು ಕರ್ನಾಟಕಕ್ಕೆ ಏಪ್ರಿಲ್ ಒಂದರಿಂದ 4ರ ತನಕ ಪ್ರವಾಸ ನಡೆಸಲಿದ್ದಾರೆ. ಇದು ಮಾನ್ಯ ಪ್ರಧಾನ ಮಂತ್ರಿಗಳಾದ ಶ್ರೀ ನರೇಂದ್ರಮೋದಿಯವರ ಪರಿಕಲ್ಪನೆಯಾಗಿದ್ದು, ನಮ್ಮ ದೇಶದ ಉದ್ದಗಲಕ್ಕೂ ಸಂಪೂರ್ಣವಾಗಿ ಪ್ರವಾಸ ಮಾಡಿ ಈ ಯೋಜನೆಯನ್ನು ಎಲ್ಲಾ ಕಾರ್ಯಕರ್ತರಿಗೆ ತಿಳಿಸುವ ವಿಚಾರವಾಗಿದೆ. ವಿವಿಧ ರಾಜ್ಯದ ಕಾರ್ಯಕರ್ತರು ದೇಶದ ಬೇರೆ ಬೇರೆ ಸ್ಥಳಗಳಿಗೆ ಭೇಟಿ ನೀಡಿ ಆ ರಾಜ್ಯದ ಪರಂಪರೆ ಮತ್ತು ವಿಚಾರಗಳನ್ನು ತಿಳಿಸಿಕೊಡುವ ಪ್ರಯತ್ನವಾಗಿರುತ್ತದೆ.

ಈ ವಿಚಾರವಾಗಿ ಮೊದಲಿಗೆ ಕರ್ನಾಟಕ ರಾಜ್ಯವನ್ನು ನಮ್ಮ ರಾಷ್ಟ್ರೀಯ ಅಧ್ಯಕ್ಷರಾದ ಶ್ರೀ ತೇಜಸ್ವಿ ಸೂರ್ಯ ರವರು ಆಯ್ಕೆ ಮಾಡಿದ್ದು, ಬೆಂಗಳೂರು ಸೇರಿದಂತೆ ಎಚ್ಎಎಲ್, ಬಿಎಎಲ್, ಕಬ್ಬನ್ ಪಾರ್ಕ್, ಕೆಲವು ಸ್ಟಾರ್ಟ್ಅಪ್ ಕಂಪನಿಗಳನ್ನು ಹಾಗೂ ಓಲಾ ಪ್ಲಾಂಟ್ ಕೃಷ್ಣಗಿರಿಗೆ ಭೇಟಿ ನೀಡಲಿದ್ದು, ನಂತರ ಹಲವು ಕಲಾತ್ಮಕ ಕಾರ್ಯಕ್ರಮಗಳಿಗೂ ಕರೆದೊಯ್ಯಲಾಗುವುದು. ನಂತರ ಹಂಪಿ ಮತ್ತು ಅಲ್ಲಿನ ಸುತ್ತಮುತ್ತ ಪ್ರದೇಶಗಳನ್ನು ನೋಡಲು, ನಂತರ ಪಾವಗಡದ ಸೌರಶಕ್ತಿ ಪ್ಲಾಂಟ್ ಗೆ ಭೇಟಿ ನೀಡಿ ಅದರ ವಿಚಾರಗಳನ್ನು ತಿಳಿಸಿಕೊಡಲಾಗುವುದು ಎಂದು ತಿಳಿದುಬಂದಿದೆ.

ಈ ಸಂದರ್ಭದಲ್ಲಿ ರಾಜ್ಯ ಯುವ ಮೋರ್ಚಾದ ರಾಜ್ಯ ಅಧ್ಯಕ್ಷರಾದ ಡಾ. ಸಂದೀಪ್ ಅವರು ಹಾಗೂ ಎಲ್ಲ ಪದಾಧಿಕಾರಿಗಳು ಮತ್ತು ಬೆಂಗಳೂರಿನ ಮೂರು ಜಿಲ್ಲೆಯ ಎಲ್ಲಾ ಪದಾಧಿಕಾರಿಗಳು ಜೊತೆಗಿರಲಿದ್ದು ಊಟದ ಮತ್ತು ವಸತಿ ವ್ಯವಸ್ಥೆಗಳನ್ನು ನೋಡಿಕೊಳ್ಳಲಿದ್ದಾರೆ. ಬೆಂಗಳೂರಿನಾದ್ಯಂತ ತಂಡೋಪತಂಡವಾಗಿ ಹಲವು ಪ್ರದೇಶಗಳಿಗೆ ಭೇಟಿಯನ್ನು ನೀಡಲಿದ್ದಾರೆ.

Leave a Comment

Your email address will not be published. Required fields are marked *

Translate »
Scroll to Top