ಶನಿವಾರದ ರಾಶಿ ಭವಿಷ್ಯ  ಹೇಗಿದೆ  ಒಮ್ಮೆ ನೋಡಿ

ಮೇಷ ರಾಶಿ : (ಚು, ಚೆ, ಚೋ, ಲಾ, ಲೀ, ಲು, ಲೆ, ಲೋ, ಆ)

ಆರ್ಥಿಕ ಪರಿಸ್ಥಿತಿ ಗೊಂದಲಮಯವಾಗಿರುತ್ತದೆ .ಹೊಸ ಸಾಲಗಳನ್ನು ಮಾಡಬೇಕಾಗುತ್ತದೆ. ದೂರದ ಪ್ರಯಾಣದ ಸೂಚನೆಗಳಿವೆ. ಕುಟುಂಬ ಸದಸ್ಯರ ವರ್ತನೆಯು ನಿರಾಶಾದಾಯಕವಾಗಿರುತ್ತದೆ. ಹೊಸ ವ್ಯಾಪಾರ ವಿಸ್ತರಣೆಯ ಪ್ರಯತ್ನಗಳಲ್ಲಿ ಅಡೆತಡೆಗಳು ಉಂಟಾಗುತ್ತವೆ. ನಿರುದ್ಯೋಗ ಪ್ರಯತ್ನಗಳು ನಿಧಾನವಾಗುತ್ತವೆ. ದೈವಿಕ ಸೇವಾ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತೀರಿ.

ಅದೃಷ್ಟದ ದಿಕ್ಕು:ಉತ್ತರ , ಅದೃಷ್ಟದ ಸಂಖ್ಯೆ:3 ,  ಅದೃಷ್ಟದ ಬಣ್ಣ:ನೇರಳೆ

ವೃಷಭ ರಾಶಿ : (ಇ, ಓ, ಎ, ಒ, ವಾ, ವಿ, ವು, ವೆ, ವೊ)

ಪಾಲುದಾರರೊಂದಿಗೆ ಸಮಸ್ಯೆಗಳಿರುತ್ತವೆ. ವೃತ್ತಿಪರ ಉದ್ಯೋಗಗಳಲ್ಲಿ ಹೆಚ್ಚುವರಿ ಜವಾಬ್ದಾರಿಗಳಿಂದ ಕೆಲಸದ ಹೊರೆ ಹೆಚ್ಚಾಗುತ್ತದೆ. ಬಾಲ್ಯದ ಸ್ನೇಹಿತರೊಂದಿಗೆ ಅನಿರೀಕ್ಷಿತ ವಿವಾದಗಳು ಉಂಟಾಗುತ್ತವೆ. ಹಣಕಾಸಿನ ವ್ಯವಹಾರಗಳು ನಿರುತ್ಸಾಹದಾಯಕವಾಗಿರುತ್ತವೆ. ಹೊಸ ವಾಹನ ಖರೀದಿಯ ಪ್ರಯತ್ನಗಳು ಮುಂದೂಡಲ್ಪಡುತ್ತವೆ. ಮಕ್ಕಳ ವಿದ್ಯಾಭ್ಯಾಸದ ಕಡೆ ಗಮನ ಹರಿಸುವುದು ಉತ್ತಮ.

ಅದೃಷ್ಟದ ದಿಕ್ಕು: ಆಗ್ನೇಯ, ಅದೃಷ್ಟದ ಸಂಖ್ಯೆ:5,  ಅದೃಷ್ಟದ ಬಣ್ಣ:ಕೆಂಪು

ಮಿಥುನ ರಾಶಿ : (ಕಾ, ಕೀ, ಕೂ, ಘ, ಛ, ಕೆ, ಕೊ, ಹ)

ಬಾಲ್ಯ ಸ್ನೇಹಿತರಿಂದ ಆಸಕ್ತಿಕರ ಮಾಹಿತಿ ದೊರೆಯುತ್ತದೆ. ಅಗತ್ಯಕ್ಕೆ ಕೈಗೆ ಹಣ ದೊರೆಯುತ್ತದೆ. ವ್ಯಾಪಾರ ಉದ್ಯೋಗಗಳಲ್ಲಿ ಸ್ವಂತ ನಿರ್ಧಾರಗಳು ಕೂಡಿ ಬರುತ್ತವೆ. ಹೊಸ ಕಾರ್ಯಕ್ರಮಗಳನ್ನು ಆರಂಭಿಸುತ್ತೀರಿ. ಬೆಲೆಬಾಳುವ ಗೃಹೋಪಯೋಗಿ ವಸ್ತುಗಳನ್ನು ಖರೀದಿಸುತ್ತೀರಿ. ಬಂಧು ಮಿತ್ರರೊಂದಿಗೆ ಶುಭ ಕಾರ್ಯಗಳಲ್ಲಿ ಪಾಲ್ಗೊಳ್ಳುತ್ತೀರಿ.

ಅದೃಷ್ಟದ ದಿಕ್ಕು: ಉತ್ತರ, ಅದೃಷ್ಟದ ಸಂಖ್ಯೆ:1 , ಅದೃಷ್ಟದ ಬಣ್ಣ: ಕೆಂಪು

 ಕರ್ಕ ರಾಶಿ : (ಕಾ, ಕೀ, ಕೂ, ಘ, ಛ, ಕೆ, ಕೊ, ಹ)

ಒಂದು ಪ್ರಮುಖ ವಿಷಯದಲ್ಲಿ ಸ್ನೇಹಿತರೊಂದಿಗೆ  ಸಮಸ್ಯೆಗಳಿರುತ್ತವೆ. ವೃತ್ತಿಪರ ವ್ಯವಹಾರಗಳು ನಿಧಾನವಾಗಿ ಸಾಗುತ್ತವೆ. ಹಣಕಾಸಿನ ವಿಷಯಗಳಲ್ಲಿ ಜಾಗರೂಕರಾಗಿರಿ, ಕೈಗೆತ್ತಿಕೊಂಡ ಕೆಲಸದಲ್ಲಿ ವಿಳಂಬವಾಗುತ್ತದೆ. ದೂರ ಪ್ರಯಾಣಗಳಿಂದ  ಆಯಾಸ ಉಂಟಾಗುತ್ತದೆ. ಉದ್ಯೋಗದಲ್ಲಿ ಅಧಿಕಾರಿಗಳೊಂದಿಗೆ ಜಾಗರೂಕರಾಗಿರಿ.

ಅದೃಷ್ಟದ ದಿಕ್ಕು: ದಕ್ಷಿಣ, ಅದೃಷ್ಟದ ಸಂಖ್ಯೆ:6 ,  ಅದೃಷ್ಟದ ಬಣ್ಣ:ನೀಲಿ

ಸಿಂಹ ರಾಶಿ : (ಮಾ, ಮೀ, ಮೂ, ಮೊ, ಟಾ, ಟೀ, ಟೂ, ಟೆ)

ಆತ್ಮೀಯರಿಂದ ಅಪರೂಪದ ಆಹ್ವಾನಗಳನ್ನು ಸ್ವೀಕರಿಸುತ್ತೀರಿ . ಹೊಸ ವಸ್ತು ಮತ್ತು ವಾಹನಗಳನ್ನು ಖರೀದಿಸುತ್ತೀರಿ. ಆರ್ಥಿಕ ಲಾಭ ದೊರೆಯುತ್ತದೆ. ಕೈಗೊಂಡ ಕೆಲಸದಲ್ಲಿ ಯಶಸ್ಸು ದೊರೆಯುತ್ತದೆ. ವೃತ್ತಿ ಪರ ವ್ಯಾಪಾರದಲ್ಲಿ ಶ್ರಮಮಕೆ ತಕ್ಕ ಫಲಿತಾಂಶ ದೊರೆಯುವುದಿಲ್ಲ. ಉದ್ಯೋಗದಲ್ಲಿ ನಿಮ್ಮ ಮಾತಿಗೆ ಬೆಲೆ ಹೆಚ್ಚಾಗುತ್ತದೆ. ನಿರುದ್ಯೋಗಿಗಳಿಗೆ ಶುಭ ಸುದ್ದಿ ದೊರೆಯುತ್ತದೆ.

ಅದೃಷ್ಟದ ದಿಕ್ಕು: ಪಶ್ಚಿಮ, ಅದೃಷ್ಟದ ಸಂಖ್ಯೆ:9 ,  ಅದೃಷ್ಟದ ಬಣ್ಣ:ಕಿತ್ತಳೆ

ಕನ್ಯಾ ರಾಶಿ : (ಪಾ, ಪೀ, ಪೂ, ಷ, ಣ , ಪೆ , ಪೊ)

ಹಳೆ ಸಾಲದ  ಒತ್ತಡದಿಂದ ಹೊಸ ಸಾಲದ ಪ್ರಯತ್ನಗಳನ್ನು ಮಾಡುತ್ತೀರಿ. ಕೌಟುಂಬಿಕ ವಿಚಾರದಲ್ಲಿ ಆತುರದ ನಿರ್ಧಾರ ತೆಗೆದುಕೊಳ್ಳುವುದು ಒಳ್ಳೆಯದಲ್ಲ. ಕೈಗೊಂಡ ವ್ಯವಹಾರಗಳಲ್ಲಿ ಸ್ವಲ್ಪ ಅಡೆತಡೆಗಳು ಉಂಟಾಗುತ್ತವೆ. ಹೊಸ ವ್ಯಾಪಾರ ಹೂಡಿಕೆ ಮಾಡುವ ಪ್ರಯತ್ನಗಳು ನಿಧಾನವಾಗುತ್ತವೆ. ಪ್ರಯಾಣವನ್ನು ಮುಂದೂಡುವುದು ಉತ್ತಮ. ಆಧ್ಯಾತ್ಮಿಕ ಚಿಂತನೆ ಮೂಡುತ್ತದೆ.

 

ಅದೃಷ್ಟದ ದಿಕ್ಕು: ಈಶಾನ್ಯ,  ಅದೃಷ್ಟದ ಸಂಖ್ಯೆ:7,  ಅದೃಷ್ಟದ ಬಣ್ಣ: ನೀಲಿ

ತುಲಾ ರಾಶಿ : (ರಾ, ರೀ, ರೂ, ರೆ, ರೊ, ತಾ, ತೀ, ತೂ, ತೆ)

ಸಮಾಜದಲ್ಲಿ ವಿಶೇಷ ಗೌರವ, ಪ್ರತಿಷ್ಟೆಗಳು ಹೆಚ್ಚಾಗುತ್ತವೆ. ಸಹೋದರರಿಂದ ಆರ್ಥಿಕ ಸಹಾಯ ದೊರೆಯುತ್ತದೆ. ಕೈಗೆತ್ತಿಕೊಂಡ ಕೆಲಸಗಳನ್ನು ಸಕಾಲದಲ್ಲಿ ಪೂರ್ಣಗೊಳಿಸುತ್ತೀರಿ. ನಿರುದ್ಯೋಗಿಗಳ ಪ್ರಯತ್ನಗಳು ಫಲಿಸಿ ಹೊಸ ಅವಕಾಶಗಳು ದೊರೆಯುತ್ತವೆ. ವ್ಯಾಪಾರಗಳು ಲಾಭದಾಯಕವಾಗಿರುತ್ತವೆ. ಉದ್ಯೋಗದ ವಾತಾವರಣವು ಅನುಕೂಲಕರವಾಗಿರುತ್ತದೆ. ಹಣದ ಆದಾಯ ಉತ್ತಮವಾಗಿರುತ್ತದೆ.

ಅದೃಷ್ಟದ ದಿಕ್ಕು: ಈಶಾನ್ಯ , ಅದೃಷ್ಟದ ಸಂಖ್ಯೆ:5 ,  ಅದೃಷ್ಟದ ಬಣ್ಣ:ಬೂದು

ವೃಶ್ಚಿಕ ರಾಶಿ : (ತೊ, ನಾ, ನೀ, ತೊ, ನಾ, ನೀ, ನೆ, ನೊ, ಯಾ, ಯೀ, ಯೂ)

ದೀರ್ಘಾವಧಿ ಸಾಲಗಳಿಂದ ಪರಿಹಾರ ದೊರೆಯುತ್ತದೆ. ಕೌಟುಂಬಿಕ ವಾತಾವರಣ ಶಾಂತಿಯುತವಾಗಿರುತ್ತದೆ. ಹೊಸ ವಸ್ತ್ರ ಮತ್ತು ಅಭರಣಗಳನ್ನು ಖರೀದಿಸುತ್ತೀರಿ. ಹಣಕಾಸಿನ ವ್ಯವಹಾರಗಳು ಕೂಡಿ ಬರುತ್ತವೆ. ಹಳೆಯ ಸ್ನೇಹಿತರನ್ನು ಭೇಟಿಯಾಗುವುದರಿಂದ ಸಂತೋಷ ಉಂಟಾಗುತ್ತದೆ. ವೃತ್ತಿಪರ ಉದ್ಯೋಗಗಳಲ್ಲಿ ಜವಾಬ್ದಾರಿಗಳನ್ನು ಪರಿಣಾಮಕಾರಿಯಾಗಿ ನಿರ್ವಹಿಸುತ್ತೀರಿ. ನಿರುದ್ಯೋಗಿಗಳ ಕನಸುಗಳು ನನಸಾಗುತ್ತವೆ.

ಅದೃಷ್ಟದ ದಿಕ್ಕು: ದಕ್ಷಿಣ, ಅದೃಷ್ಟದ ಸಂಖ್ಯೆ:6. ,  ಅದೃಷ್ಟದ ಬಣ್ಣ:ಬಿಳಿ

ಧನು ರಾಶಿ : (ಥೆ, ಯೊ, ಭಾ, ಭೀ, ಭೂ, ಧಾ, ಫಾ, ಢಾ, ಭೆ)

ಸಹೋದರರೊಂದಿಗೆ ಸ್ಥಿರಾಸ್ತಿ ವಿವಾದಗಳು  ಉಂಟಾಗುತ್ತವೆ. ವ್ಯಾಪಾರ ವ್ಯವಹಾರಗಳಲ್ಲಿ ಹಿರಿಯರ ಸಲಹೆ ಪಡೆದು ಮುನ್ನಡೆಯುವುದು ಉತ್ತಮ. ದೀರ್ಘಾವಧಿ ಸಾಲಗಳ ಒತ್ತಡ ಹೆಚ್ಚಾಗಲಿದೆ. ಕೈಗೊಂಡ ಕೆಲಸದಲ್ಲಿ ಹೆಚ್ಚಿನ ಪ್ರಯತ್ನದಿಂದ ಕಡಿಮೆ ಫಲಿತಾಂಶವನ್ನು ಪಡೆಯುತ್ತೀರಿ. ಕೆಲಸದ ವಾತಾವರಣವು ಸ್ವಲ್ಪ ಕಿರಿಕಿರಿಯನ್ನು ಉಂಟುಮಾಡುತ್ತದೆ.  ದೈವಿಕ ಸೇವಾ ಕಾರ್ಯಗಳಲ್ಲಿ ಭಾಗವಹಿಸುವುದು ಒಳ್ಳೆಯದು.

ಅದೃಷ್ಟದ ದಿಕ್ಕು: ಪೂರ್ವ,  ಅದೃಷ್ಟದ ಸಂಖ್ಯೆ: 9,  ಅದೃಷ್ಟದ ಬಣ್ಣ:ಕೆಂಪು

ಮಕರ ರಾಶಿ : (ಭೊ, ಜಾ, ಜೀ, ಖೀ, ಖೂ, ಖೆ, ಖೊ, ಗಾ, ಗೀ)

ವ್ಯಾಪಾರ ವ್ಯವಹಾರಗಳಲ್ಲಿ  ಆಲೋಚನೆಗಳು ಕೂಡಿ ಬರುವುದಿಲ್ಲ. ಕುಟುಂಬ ಸದಸ್ಯರೊಂದಿಗೆ ಸಣ್ಣಪುಟ್ಟ ವಿವಾದಗಳಿರುತ್ತವೆ. ನಿರುದ್ಯೋಗಿಗಳು ಸಿಕ್ಕ ಅವಕಾಶಗಳನ್ನು ಸದುಪಯೋಗಪಡಿಸಿಕೊಳ್ಳಬೇಕು. ಕೈಗೊಂಡ ಕೆಲಸಗಳು ಮಂದಗತಿಯಲ್ಲಿ ಸಾಗುತ್ತವೆ.  ಆಧ್ಯಾತ್ಮಿಕ ಸೇವಾ ಕಾರ್ಯಕ್ರಮಗಳಿಗೆ ಆರ್ಥಿಕ ನೆರವು ನೀಡುತ್ತಿರೀ .ಆರೋಗ್ಯದ ವಿಷಯದಲ್ಲಿ ಜಾಗರೂಕರಾಗಿರಿ.

ಅದೃಷ್ಟದ ದಿಕ್ಕು:ಪೂರ್ವ , ಅದೃಷ್ಟದ ಸಂಖ್ಯೆ:5 ,  ಅದೃಷ್ಟದ ಬಣ್ಣ:ಕೆಂಪು

ಕುಂಭ ರಾಶಿ : (ಗೂ, ಗೆ, ಗೊ, ಸಾ, ಸೀ, ಸೂ, ಸೊ, ದಾ)

ಹೊಸ ವಸ್ತು  ಮತ್ತು ವಾಹನಗಳನ್ನು ಖರೀದಿಸುತ್ತೀರಿ. ಕೈಗೆತ್ತಿಕೊಂಡ ಕೆಲಸಗಳು ಸಕಾಲಕ್ಕೆ ಪೂರ್ಣಗೊಳ್ಳುತ್ತವೆ. ಬಾಲ್ಯ ಮಿತ್ರರೊಂದಿಗೆ ದೂರ ಪ್ರಯಾಣ ಮಾಡುತ್ತೀರಿ. ಸಹೋದರರಿಂದ ಶುಭಕಾರ್ಯಕ್ಕೆ ಆಹ್ವಾನಗಳು ಬರುತ್ತವೆ. ವ್ಯಾಪಾರದಲ್ಲಿ ಅಪೇಕ್ಷಿತ ಪ್ರಗತಿ ಸಾಧಿಸುತ್ತೀರಿ .ವೃತ್ತಿಪರ ಕೆಲಸಗಳಲ್ಲಿ ಸಹೋದ್ಯೋಗಿಗಳೊಂದಿಗೆ ಸಾಮರಸ್ಯತೆ  ಉಂಟಾಗುತ್ತದೆ.

ಅದೃಷ್ಟದ ದಿಕ್ಕು: ವಾಯುವ್ಯ , ಅದೃಷ್ಟದ ಸಂಖ್ಯೆ:8 ,  ಅದೃಷ್ಟದ ಬಣ್ಣ:ಹಳದಿ

ಮೀನ ರಾಶಿ : (ದೀ, ದೂ, ಥ, ಝ, ದೆ, ದೊ, ಚಾ, ಚೀ)

ರಾಜಕೀಯ ವಲಯದವರಿಗೆ ಬಡ್ತಿಗಳು ಹೆಚ್ಚಾಗುತ್ತವೆ. ವ್ಯಾಪಾರ ಉದ್ಯೋಗಗಳಲ್ಲಿ ಹೆಚ್ಚು ಉತ್ಸಾಹದಿಂದ ಕೆಲಸ ಮಾಡಿ ಲಾಭ ಪಡೆಯುತ್ತೀರಿ.ಬಾಲ್ಯ ಮಿತ್ರರೊಂದಿಗಿನ ವಿವಾದಗಳು ಬಗೆಹರಿಯುತ್ತವೆ. ಮನೆಯಲ್ಲಿ ಹೊಸ ಕಾರ್ಯಕ್ರಮಗಳನ್ನು ಪ್ರಾರಂಭಿಸುತ್ತೀರಿ. ದೂರದ ಸಂಬಂಧಿಕರೊಂದಿಗೆ ಹಳೆಯ ವಿಷಯಗಳನ್ನು ಚರ್ಚಿಸುತ್ತೀರಿ.ಮನೆಯಲ್ಲಿ ಶುಭ ಕಾರ್ಯ  ಪ್ರಯತ್ನಗಳು ಫಲ ನೀಡುತ್ತವೆ.

 

ಅದೃಷ್ಟದ ದಿಕ್ಕು:ದಕ್ಷಿಣ , ಅದೃಷ್ಟದ ಸಂಖ್ಯೆ:6 ,  ಅದೃಷ್ಟದ ಬಣ್ಣ:ಹಸಿರು

Facebook
Twitter
LinkedIn
WhatsApp
Email
Telegram

Leave a Comment

Your email address will not be published. Required fields are marked *

Translate »
Scroll to Top