ಸಾಮಾಜಿಕ ಮಾಧ್ಯಮಗಳಿಂದ ಮೂಲ ಪತ್ರಿಕೋದ್ಯಮ ವಿಶ್ವಾಸಾರ್ಹತೆಗೆ ಧಕ್ಕೆ

ಬೆಂಗಳೂರು: ಇಂದಿನ ಸಾಮಾಜಿಕ ಮಾಧ್ಯಮಗಳು ಮೂಲ ಪತ್ರಿಕೋದ್ಯಮ ವಿಶ್ವಾಸಾರ್ಹತೆಗೆ ಧಕ್ಕೆ ಬರುವಂತಹ ರೀತಿಯಲ್ಲಿ ಬಳಕೆಯಾಗುತ್ತಿರುವುದು ಆತಂಕದ ಸಂಗತಿಯಾಗಿದೆ ಎಂದು ರಾಜಕೀಯ ಚಿಂತಕ ಬಿ.ಎಸ್.ಅರುಣ್ ತಿಳಿಸಿದರು.

ನಗರದ ಶೇಷಾದ್ರಿಪುರಂ ಕಾಲೇಜಿನ ಸಭಾಂಗಣದಲ್ಲಿ ಖಾದ್ರಿ ಶಾಮಣ್ಣ ಸ್ಮಾರಕ ಟ್ರಸ್ಟ್ ಹಮ್ಮಿಕೊಂಡಿದ್ದ ಖಾದ್ರಿ ಶಾಮಣ್ಣ ಪತ್ರಿಕೋದ್ಯಮ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು. ಸಾಮಾಜಿಕ ಜಾಲತಾಣಗಳಲ್ಲಿ ಗಮನಿಸಬಹುದಾದ ಸುದ್ದಿ, ಕೆಲ ಅಂಶಗಳಲ್ಲಿ ನಿಖರತೆ, ಸ್ಪಷ್ಟತೆ ಇಲ್ಲದೆ ನಂಬಬೇಕೋ ನಂಬಬಾರದೋ ಎಂಬ ಗೊಂದಲದಲ್ಲಿ ಜನ ಸಾಮಾನ್ಯರು ಸಿಲುಕಿಕೊಳ್ಳುವಂತಾಗಿದೆ ಎಂದು ಹೇಳಿದರು.

ನಗರದ ಶೇಷಾದ್ರಿಪುರಂ ಕಾಲೇಜಿನ ಸಭಾಂಗಣದಲ್ಲಿ ಖಾದ್ರಿ ಶಾಮಣ್ಣ ಸ್ಮಾರಕ ಟ್ರಸ್ಟ್ ಹಮ್ಮಿಕೊಂಡಿದ್ದ ಖಾದ್ರಿ ಶಾಮಣ್ಣ ಪತ್ರಿಕೋದ್ಯಮ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು. ಸಾಮಾಜಿಕ ಜಾಲತಾಣಗಳಲ್ಲಿ ಗಮನಿಸಬಹುದಾದ ಸುದ್ದಿ, ಕೆಲ ಅಂಶಗಳಲ್ಲಿ ನಿಖರತೆ, ಸ್ಪಷ್ಟತೆ ಇಲ್ಲದೆ ನಂಬಬೇಕೋ ನಂಬಬಾರದೋ ಎಂಬ ಗೊಂದಲದಲ್ಲಿ ಜನ ಸಾಮಾನ್ಯರು ಸಿಲುಕಿಕೊಳ್ಳುವಂತಾಗಿದೆ ಎಂದು ಹೇಳಿದರು.

ಸಾಮಾಜಿಕ ಜಾಲತಾಣಗಳಿಂದಾಗುವ ಸಾಕಷ್ಟು ಪರಿಣಾಮಗಳ ಬಗ್ಗೆ ಗಂಭೀರವಾಗಿ ಆಲೋಚನೆ ಮಾಡಬೇಕಾಗಿದೆ. ನಕಲಿ ಸುದ್ದಿಗಳನ್ನು ಹರಿಬಿಡುವುದು ಸಾಮಾನ್ಯ ಸಂಗತಿಯಾಗಿದೆ. ಈ ಪರಿಣಾಮವಾಗಿ ಪತ್ರಿಕೋದ್ಯಮದ ಮೌಲ್ಯಗಳು ಕುಸಿಯುವಂತಹ ವಾತಾವರಣ ನಿರ್ಮಾಣವಾಗಿದೆ. ಸುದ್ದಿ ವಾಹಿನಿಗಳಿಂದ ಪತ್ರಿಕೋದ್ಯಮದ ವಿಶ್ವಾಸಾರ್ಹತೆಗೆ ಹೆಚ್ಚಿನ ತೊಂದರೆ ಕೂಡ ಆಗುತ್ತಿರುವುದನ್ನು ಗಮನಿಸಬಹುದಾಗಿದೆ. ಪತ್ರಕರ್ತನಿಗಾಗಲಿ, ಸುದ್ದಿ ಸಂಸ್ಥೆಗಾಗಲಿ ವಿಶ್ವಾಸಾರ್ಹತೆ ಅನ್ನುವುದು ಬಹುಮುಖ್ಯ ಎಂದು ತಿಳಿಸಿದರು.

ಕೃತಕ ಬುದ್ಧಿಮತ್ತೆ (ಆರ್ಟಿಫಿಷಿಯಲ್ ಇಂಟೆಲಿಜೆನ್ಸ್)ಯನ್ನು ಹಂತ ಹಂತವಾಗಿ ಹಲವು ಕ್ಷೇತ್ರಗಳಲ್ಲಿ ಬಳಕೆಯಾಗುತ್ತಿರುವುದನ್ನು ಗಮನಿಸಬಹುದಾಗಿದೆ. ಪತ್ರಿಕೋದ್ಯಮದಲ್ಲಿ ಕೃತಕ ಬುದ್ಧಿಮತ್ತೆಯನ್ನು ಬಳಸಿದ್ದೇ ಆದಲ್ಲಿ ಮೂಲ ಆಶಯಗಳಿಗೆ ಕುದುಂಟಾಗುತ್ತದೆ. ಪತ್ರಿಕೋದ್ಯಮದ ವಿಶ್ವಾಸಾರ್ಹತೆಯೂ ಕಡಿಮೆಯಾಗುವುದರಲ್ಲಿ ಯಾವುದೇ ಅನುಮಾನವಿಲ್ಲ. ಕೊರೊನಾದಿಂದ ಹಲವು ಕ್ಷೇತ್ರಗಳಿಗೂ ಹೆಚ್ಚಿನ ಪರಿಣಾಮ ಬೀರಿತು. ಆದರೆ ಪತ್ರಿಕೋದ್ಯಮ ಕ್ಷೇತ್ರಕ್ಕಾದ ನಷ್ಟ ಹೆಚ್ಚು, ಇಂದಿಗೂ ಅದನ್ನು ಸರಿದೂಗಿಸುವಂತಹದ್ದು ಸವಾಲಿನ ಕೆಲಸವಾಗಿದೆ ಎಂದು ಹೇಳಿದರು.

ಮಿಝೋರಾಂ ವಿಶ್ವವಿದ್ಯಾನಿಲಯದ ನಿವೃತ್ತ ಪ್ರಾಧ್ಯಾಪಕ ಪ್ರೊ.ಕೆ.ವಿ.ನಾಗರಾಜ್ ಮಾತನಾಡಿ, ಪತ್ರಿಕೋದ್ಯಮದಲ್ಲಿ ಖಾದ್ರಿ ಶಾಮಣ್ಣ ಅವರು ತೊಡಗಿಸಿಕೊಂಡ ವೈಖರಿಯೇ ವಿಭಿನ್ನತೆಯಿಂದ ಕೂಡಿದೆ. ಅವರ ಕಾರ್ಯತತ್ಪರತೆಯು ಇಂದಿನ ಪತ್ರಕರ್ತರಿಗೆ ಮಾದರಿಯಾಗಿದ್ದು, ಈ ನಿಟ್ಟಿನಲ್ಲಿ ಪತ್ರಿಕೋದ್ಯಮದ ಮೌಲ್ಯಗಳು ಮತ್ತು ತತ್ವಾದರ್ಶಗಳಿಗೆ ಬದ್ಧರಾಗಬೇಕಾದ ಅವಶ್ಯಕತೆ ಇದೆ ಎಂದು ತಿಳಿಸಿದರು.

 

ಶೇಷಾದ್ರಿಪುರಂ ಶಿಕ್ಷಣ ಸಂಸ್ಥೆ ಅಧ್ಯಕ್ಷ ಡಾ.ವೂಡೇ ಪಿ.ಕೃಷ್ಣ ಮಾತನಾಡಿ, ಖಾದ್ರಿ ಶಾಮಣ್ಣ ಗಾಂಧಿ ಚಿಂತಕ ಹಾಗೂ ಅನುಯಾಯಿ ಅವರಿಂದ ಹೆಚ್ಚಿನ ಪ್ರೇರಣೆ ಪಡೆದಿದ್ದಾರೆ. ಖಾದ್ರಿ ಅವರ ಲೇಖನಗಳನ್ನು ಓದಿ ನಾನು ಸ್ಫೂರ್ತಿ ಪಡೆದಿರುವೆ. ಅವರ ಹೆಸರಿನಲ್ಲಿ ಪತ್ರಕರ್ತರಿಗಾಗಿ ಪ್ರಶಸ್ತಿ ನೀಡುತ್ತಿರುವುದು ಶ್ಲಾಘನೀಯ ಸಂಗತಿ ಎಂದರು. ಖಾದ್ರಿ ಶಾಮಣ್ಣ ಪತ್ರಿಕೋದ್ಯಮ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಎಂ.ನಾಗರಾಜ, ಹಲವರ ಸಹಕಾರದಿಂದ ಪತ್ರಿಕೋದ್ಯಮ ವೃತ್ತಿಯಲ್ಲಿ ವಿಶೇಷವಾಗಿ ತೊಡಗಿಸಿಕೊಳ್ಳಲು ಸಾಧ್ಯವಾಯಿತು. ನಮಗೆ ಸಂದಿರುವ ಪ್ರಶಸ್ತಿ ಮೊತ್ತವನ್ನು ಖಾದ್ರಿ ಶಾಮಣ್ಣ ಸ್ಮಾರಕ ಟ್ರಸ್ಟ್‌ಗೆ ನೀಡುವೆ. ಟ್ರಸ್ಟ್ ಗಟ್ಟಿಯಾಗಿ ಬೆಳೆದು ನಿಲ್ಲಲಿ ಎಂದು ಆಶಿಸಿದರು. ಬಿಬಿಎಂಪಿ ಆಡಳಿತಾಧಿಕಾರಿ ಎಸ್.ಆರ್.ಉಮಾಶಂಕರ್, ಟ್ರಸ್ಟ್ ಮುಖ್ಯಸ್ಥರಾದ ಶ್ರೀಶ, ಸ್ಮಿತಾ ಅಚ್ಯುತ ಇತರರಿದ್ದರು.

Facebook
Twitter
LinkedIn
Telegram
WhatsApp
Email
Print

Leave a Comment

Your email address will not be published. Required fields are marked *

Translate »
Scroll to Top