ಬಳ್ಳಾರಿ: ದೇಶದಲ್ಲಿ ನಡೆಯುವ 2024ರ ಚುನಾವಣೆ ಅತ್ಯಂತ ಮಹತ್ತರವಾದದು ಅಳಿವು ಉಳಿವಿನ ಪ್ರಜಾಪ್ರಭುತ್ವ ಉಳಿಸುವ ತೀರ್ಮಾನ ಮಾಡುವ ಚುನಾವಣೆ ಎಂದು ಉಗ್ರಪ್ಪ ಹೇಳಿದರು.
ಎರಡನೇ ಸ್ವಾತಂತ್ರ್ಯ ಸಂಗ್ರಾಮದ ಚುನಾವಣೆ ಮತ್ತು ಚುನಾವಣಾ ಆಯೋಗವು ಸೇರಿದಂತೆ ಅವುಗಳ ಹರಣ ಮಾಡಿದ್ದು ಸ್ವಾತಂತ್ರ್ಯ ವನ್ನು ಹಾಗೂ ಜನ ಸಾಮಾನ್ಯರ ಬದುಕಿಗೆ ಬೆಳಕು ಚೆಲ್ಲುವ ಚುನಾವಣೆ ಇದಾಗಿದೆ ಎಂಬುದು ಸ್ಪಷ್ಟ ಪಡಿಸಿದರು.
ಕಾಂಗ್ರೆಸ್ ರಾಷ್ಟ್ರದ ಧ್ವಜ ಮತ್ತು ರಾಷ್ಟ್ರ ಗೀತೆ ಕೊಟ್ಟಿದೆ.ವಚನ ಭ್ರಷ್ಟಾಚಾರ ಕೂಟದಿಂದ ದೇಶವನ್ನೇ ಹಾಳುಮಾಡುವ ಕೆಲಸದಲ್ಲಿ ತೊಡಗಿದ್ದಾರೆ.
ರಾಷ್ಟ್ರ ರಕ್ಷಣೆ ಹಾಗೂ ರಾಷ್ಟ್ರ ಪ್ರೇಮ ಕಾಂಗ್ರೆಸ್ ಆದರೆ ಭಾರತೀಯ ಜನತಾ ಪಾರ್ಟಿ ಪಕ್ಷಕ್ಕೆ ಯಾವೊಬ್ಬ ವ್ಯಕ್ತಿಯೂ ಕೂಡ ತ್ಯಾಗ ಬಲಿದಾನದ ಮಹತ್ವ ಗೊತ್ತಿಲ್ಲ ಎಂದು ಮಾಜಿ ಸಂಸದ ಉಗ್ರಪ್ಪ ಹರಿಹಾಯ್ದರು.
ದೇಶದಲ್ಲಿ ಎನ್.ಡಿ.ಎ.ಮತ್ತು ಕಾಂಗ್ರೆಸಿನ ಪರವಾದ ಗಾಳಿ ಬಿಸುತ್ತಿದೆ.ಮತ್ತು ಕರ್ನಾಟಕದಲ್ಲಿ ಇಪ್ಪತ್ತಕ್ಕೂ ಹೆಚ್ಚು ಸ್ಥಾನ ಗೆಲ್ಲುತ್ತದೆ.ಸುಮಾರು 236 ರ ಪೈಕಿ 224 ತಾಲ್ಲೂಕು ಗಳು ಬರ ಪಿಡೀತ ಘೋಷಣೆ ಆಗಿದೆ. ಮತ್ತು ಬೆಳೆ ನಷ್ಟ ,37 ಸಾವಿರ ಕೋಟಿ ಕೊಡಬೇಕಿತ್ತು,ಆದರೆ ಇಲ್ಲಿಯವರೆಗೆ ನಯಾ ಪೈಸೆ ಕೇಂದ್ರ ಸರ್ಕಾರ ಕೊಟ್ಟಿಲ್ಲ ಎಂದು ಉಗ್ರಪ್ಪ ಆರೋಪಿಸಿದರು.
ಯಡಿಯೂರಪ್ಪ ಮನ್ ಮೋಹನ್ ಸಿಂಗ್ ಕಾಂಗ್ರೆಸ್ ಸರ್ಕಾರ ಇದ್ದಾಗ ಒತ್ತಾಯ ಮಾಡಿದಾಗ ಸೋನಿಯಾ ಗಾಂಧಿ ಸಮಯದಲ್ಲಿ ಏರಿಯಲ್ ಸರ್ವೇ ಮಾಡಿ 1500 ಕೋಟಿ ವಿಶೇಷ ಅನುದಾನ ಬರ ಪರಿಹಾರ ನೀಡಿದ ಉದಾಹರಣೆ ಇದೆ ಎಂದು ಪ್ರಶ್ನೆ ಮಾಡಿದರು.
ತಾಳಿಯ ಬಗ್ಗೆ ಪ್ರಪಂಚದಲ್ಲಿ ಯಾವುದೇ ದೇಶದಲ್ಲಿ ಇಂತಹ ಪಾವಿತ್ರತೆ ಇಲ್ಲ, ಈ ದೇಶದ ಸಂಸ್ಕೃತಿ ಸಂಸ್ಕಾರದ ದ್ರೋಹ ವಾಗುತ್ತದೆ. ಇದನ್ನು ಪ್ರಧಾನಿ ಮೋದಿ ಮಾತನಾಡಿ ಮತ ಕೇಳಲು ನೈತಿಕತೆ ನಿಮಗೆ ನಿಮ್ಮ ಪಕ್ಷಕ್ಕೆ ಇಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಚುನಾವಣೆ ಬಾಂಡ್ ಗಳ ಬಗ್ಗೆ ಉನ್ನತ ಮಟ್ಟದ ತನಿಖೆ ಯಾಗಬೇಕು ಎಂದು ಉಗ್ರಪ್ಪ ಒತ್ತಾಯಿಸಿದರು. ಅದ್ಯಕ್ಷ ಅಲ್ಲಂ ಪ್ರಶಾಂತ್, ಗ್ಯಾರೆಂಟಿ ಅಧ್ಯಕ್ಷ ಚಿದಾನಂದಪ್ಪ,ಕಲ್ಲುಕಂಬ ಪಂಪಾಪತಿ, ವೆಂಕಟೇಶ್ ಹೆಗಡೆ, ಲೋಕೇಶ್ ಉಪಸ್ಥಿತರಿದ್ದರು.