ಬಡವರ ಬಾದಾಮಿ ಕಡಲೆಕಾಯಿ ಸೇವನೆ ಮಾಡುವುದರಿಂದ ಇದೇ ಹಲವು ಪ್ರಯೋಜನಗಳು

Kannada Nadu
ಬಡವರ  ಬಾದಾಮಿ  ಕಡಲೆಕಾಯಿ ಸೇವನೆ ಮಾಡುವುದರಿಂದ ಇದೇ ಹಲವು  ಪ್ರಯೋಜನಗಳು

ವರದಿ: ಡಾ.ವರ ಪ್ರಸಾದ್ ರಾವ್ ಪಿ ವಿ.
ಬೆಂಗಳೂರು : ಶೇಂಗಾ ಬೀಜವನ್ನು ಬಡವರ ಬಾದಾಮಿ ಎಂದು ಕರೆಯಲಾಗುತ್ತದೆ. ಬಾದಾಮಿ, ಏಕೆಂದರೆ ಇದು ದುಬಾರಿ ಬಾದಾಮಿಗಳಲ್ಲಿ ಕಂಡು ಬರುವ ಎಲ್ಲಾ ಅಂಶ ಮತ್ತು ಪೋಷಕಾಂಶ ಹಾಗೂ ಗುಣಲಕ್ಷಣ ಹೊಂದಿದೆ. ಭಾರತದ ಬಹುತೇಕ ಎಲ್ಲಾ ಭಾಗಗಳಲ್ಲಿ ಕಡಲೆಕಾಯಿ ಅಂದರೆ ಶೇಂಗಾವನ್ನು ಬೆಳೆಯುತ್ತಾರೆ. ಶೇಂಗಾ ಬೀಜ ಅಥವಾ ಕಡಲೆಕಾಯಿ ಇದು ಭಾರತೀಯರ ಪ್ರತಿ ಅಡುಗೆಮನೆಯಲ್ಲಿ ಕಂಡುಬರುವ ಸಾಮಾನ್ಯ ವಸ್ತು.ಕಡಲೆಕಾಯಿ ಇದು ಅಂತಹ ಒಂದು ಆರೋಗ್ಯಕರ ಆಹಾರ ಪದರ‍್ಥ ಆಗಿದೆ. ಕಡಲೆಕಾಯಿ ಸೇವನೆಯು ದೇಹಕ್ಕೆ ಶಕ್ತಿ ನೀಡುತ್ತದೆ. ಮತ್ತು ಇದು ಅನೇಕ ದರ‍್ಘಕಾಲದ ಕಾಯಿಲೆಗಳಿಂದ ನಿಮ್ಮನ್ನು ದೂರವಿಡಲು ಸಹಾಯ ಮಾಡುತ್ತದೆ

ಕಡಲೆಕಾಯಿಯಲ್ಲಿ ಪ್ರೋಟೀನ್, ಫೈಬರ್ ಮತ್ತು ಆರೋಗ್ಯಕರ ಕೊಬ್ಬಿನ ಸಂಯೋಜನೆಯು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಸ್ಥಿರಗೊಳಿಸಲು ಸಹಾಯ ಮಾಡುತ್ತದೆ. ಕಡಲೆಕಾಯಿಯು ಮೆಗ್ನೀಸಿಯಮ್, ಫಾಸ್ಫರಸ್ ಮತ್ತು ಇತರ ಖನಿಜಗಳ ಉತ್ತಮ ಮೂಲವಾಗಿದೆ.ಕಡಲೆಕಾಯಿ ಸೇವನೆಯು ದೇಹಕ್ಕೆ ಶಕ್ತಿ ನೀಡುತ್ತದೆ. ಮತ್ತು ಇದು ಅನೇಕ ದರ‍್ಘಕಾಲದ ಕಾಯಿಲೆಗಳಿಂದ ನಿಮ್ಮನ್ನು ದೂರವಿಡಲು ಸಹಾಯ ಮಾಡುತ್ತದೆ.

ನಮ್ಮ ಆರೋಗ್ಯಕ್ಕೆ ಪ್ರೋಟೀನ್ ಬಹಳ ಮುಖ್ಯ. ಇದರಿಂದ ನಮ್ಮ ಮಾಂಸ ಖಂಡಗಳ ಬೆಳವಣಿಗೆ ಮತ್ತು ಮಾಂಸ ಖಂಡ ಗಳಿಗೆ ಯಾವುದೇ ತೊಂದರೆ ಎದುರಾಗಿದ್ದರೆ ಅದನ್ನು ಸರಿ ಪಡಿಸಲು ಪ್ರೋಟಿನ್ ಅಂಶ ಸಹಾಯವಾಗುತ್ತದೆ. ಮನುಷ್ಯನ ದೈಹಿಕ ಬೆಳವಣಿಗೆ ಕೂಡ ಕಡಲೆ ಬೀಜಗಳಲ್ಲಿ ಸಿಗುವ ಪ್ರೋಟಿನ್ ಅಂಶಗಳಿಂದ ಸಾಧ್ಯವಿದೆ.ಇವುಗಳು ಹೃದಯಕ್ಕೆ ತುಂಬಾ ಸಹಕಾರಿಯಾಗಿದ್ದು ಹೃದಯದ ಹಾಗೂ ಹೃದಯ ರಕ್ತನಾಳದ ಕಾಯಿಲೆಗಳು ಬರಲು ಸಾಧ್ಯವಾಗದಂತೆ ನೋಡಿಕೊಳ್ಳುತ್ತದೆ.ಶೇಂಗಾವು ಪಿ–ಕೌಮಾರಿಕ್‌ ಆಸಿಡ್‌ ಎಂಬ ಫಾಲಿಫಿನಾಲಿಕ್‌ ಆಂಟಿಆಕ್ಸಿಡೆಂಟ್‌ನಿಂದ ಸಮೃದ್ಧವಾಗಿದೆ. ಇದು ಕರ‍್ಸೆನೊಜೆನಿಕ್‌ ನೈಟ್ರೋಸಮೈನಿಸ್‌ ರಚನೆಯನ್ನು ಸೀಮಿತಗೊಳಿಸುತ್ತದೆ. ಆ ಮೂಲಕ ಹೊಟ್ಟೆಯ ಕ್ಯಾನ್ಸರ್‌ ಅಪಾಯವನ್ನು ಕಡಿಮೆ ಮಾಡುತ್ತದೆ. ಶೇಂಗಾವು ರೆಸ್ಟೆರಾಟ್ರೊಲ್‌ನ ಅತ್ಯುತ್ತಮ ಮೂಲವಾಗಿದೆ. ಇದು ಕ್ಯಾನ್ಸರ್‌ ಮತ್ತು ಇತರ ಕಾಯಿಲೆಗಳ ವಿರುದ್ಧ ರಕ್ಷಣೆ ಒದಗಿಸುತ್ತದೆ.
ಶೇಂಗಾದಲ್ಲಿ ರಕ್ತನಾಳಗಳ ಕರ‍್ಯವಿಧಾನವನ್ನು ಬದಲಾಯಿಸುವ ರೆಸ್ವೆರಾಟ್ರೋಲ್‌ ಕಂಡುಬರುತ್ತದೆ. ಇದು ನೈಟ್ರಿಕ್‌ ಆಕ್ಸೆಡ್‌ ಮತ್ತು ವೆಸೊಡಿಲೇಟರ್‌ ಹರ‍್ಮೋನ್‌ ಉತ್ಪಾದನೆಯನ್ನು ಹೆಚ್ಚಿಸುತ್ತದೆ. ಇದರಿಂದ ಪರ‍್ಶ್ವವಾಯು ಅಪಾಯ ಕಡಿಮೆಯಾಗುತ್ತದೆ.

ಕಡಲೆಕಾಯಿ ಆರೋಗ್ಯಕರ ಕೊಬ್ಬಿನ ಉತ್ತಮ ಮೂಲ. ಇದು ಒಲೀಕ್ ಆಮ್ಲದಿಂದ ಬರುತ್ತದೆ. ಆಲಿವ್ ಎಣ್ಣೆಯಲ್ಲಿ ಕಂಡು ಬರುವ ಅದೇ ಸಂಯುಕ್ತ ಆಗಿದೆ. ಕಡಲೆಕಾಯಿಯಲ್ಲಿರುವ ಈ ವಿಶೇಷ ಗುಣವು ಜೀವಕೋಶಗಳಲ್ಲಿನ ಉರಿಯೂತ ಮತ್ತು ಸ್ವತಂತ್ರ ರಾಡಿಕಲ್ಗಳ ವಿರುದ್ಧ ಹೋರಾಡುತ್ತದೆ.ಶೇಂಗಾ ತೂಕ ಇಳಿಸಲು ಉತ್ತಮವಾಗಿದೆ. ಇದು ಹೆಚ್ಚಿನ ಪ್ರೋಟೀನ್ ಮತ್ತು ಫೈಬರ್ ಹೊಂದಿದೆ. ಈ ಎರಡೂ ಪೋಷಕಾಂಶಗಳು ತೂಕ ನಿಯಂತ್ರಣಕ್ಕೆ ಪರಿಣಾಮಕಾರಿ. ಇದು ಶಕ್ತಿ ಹೆಚ್ಚಿಸುತ್ತದೆ. ಮತ್ತು ಹಸಿವನ್ನು ನಿಯಂತ್ರಿಸುತ್ತದೆ.

Share This Article
WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

error: Content is protected !!
";