ಸಂಸ್ಕೃತಿಯ ಉಳಿವಿನ ಜೊತೆಗೆ ಪುನರುಜ್ಜೀವನವೂ ಆಗಬೇಕು

ದೇವನಹಳ್ಳಿ,,ಮಾ,4 : ದೇವಾಲಯಗಳ ಪುರಾವೆಗಳನ್ನು ಸಾಕ್ಷ್ಯಚಿತ್ರಗಳ ಮೂಲಕ ಸಂಗ್ರಹಿಸಿ ಇಡುವುದು ಅತ್ಯಂತ ಮಹತ್ತರವಾದುದು ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎ.ಸಿ. ಶ್ರೀನಿವಾಸ್ ಹೇಳಿದರು. ದೇವನಹಳ್ಳಿ ತಾಲ್ಲೂಕು ವಿಜಯಪುರ ಪಟ್ಟಣದ ಗಿರಿಜಾ ಶಂಕರ ಕಲ್ಯಾಣ ಮಂಟಪದಲ್ಲಿ ಆಯೋಜಿಸಿದ್ದ ಸೋಮೇಶ್ವರದೇವಾಲಯದ ಸಾಕ್ಷ್ಯಚಿತ್ರ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿ, ದೇವಾಲಯಗಳು ನಮ್ಮ ಸಂಸ್ಕೃತಿಯ ಪ್ರತೀಕ. ಅವುಗಳನ್ನು ಉಳಿಸುವುದರ ಜೊತೆಗೆ ಪುನರುಜೀವನಗೊಳಿಸಬೇಕು . ಅವುಗಳ ಮಹತ್ವ ತಿಳಿದುಕೊಂಡು ಮುಂದಿನ ಪೀಳಿಗೆಗೂ ತಿಳಿಸಬೇಕಾಗಿದೆ . ಹಿಂದಿನವರು ಮಾಡಿರುವ ಶಿಲ್ಪಕಲೆಗಳಲ್ಲಿ ಸಾಕಷ್ಟು ಗೌಣವಾಗಿರುತ್ತವೆ . ಅವುಗಳನ್ನು ಹೊರಗೆ ತರುವಂತಹ ಕೆಲಸವಾಗಬೇಕು . ಈ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಕೈ ಜೋಡಿಸಿ ಕೆಲಸ ಮಾಡಬೇಕು ಎಂದರು.

ಸೋಮೇಶ್ವರಸ್ವಾಮಿ ದೇವಾಲಯ ಅಭಿವೃದ್ಧಿ ಟ್ರಸ್ಟ್‌ ನ ಗೌರವಾಧ್ಯಕ್ಷ ಎಂ . ಸತೀಶ್ ಕುಮಾರ್ ಮಾತನಾಡಿ , ಸೋಮೇಶ್ವರ ದೇವಾಲಯವು ಅತ್ಯಂತ ಪುರಾತನವಾದುದು. ಸ್ಥಳೀಯರ ಸಹಕಾರದಿಂದ ಸಾಕ್ಷ್ಯಚಿತ್ರಗಳನ್ನು ಸಂಗ್ರಹಿಸುವ ಪುಣ್ಯದ ಕಾರ್ಯವಾಗುತ್ತಿದೆ. ಇಂತಹ ಕಾರ್ಯಕ್ಕೆ ಜಾತಿ , ಧರ್ಮರಹಿತವಾಗಿ ಸಹಕರಿಸಬೇಕು ಎಂದು ಹೇಳಿದರು. ಬೆಂಗಳೂರು ಗ್ರಾಮಾಂತರ ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಬಿ . ಚೇತನ್ ಗೌಡ ಮಾತನಾಡಿ , ನಮ್ಮ ಪ್ರಾಚೀನ ದೇವಾಲಯಗಳನ್ನು ಪುನರು ಜೀವನಗೊಳಿಸುವ ಮೂಲಕ ಸಂಸ್ಕಾರ , ಸಂಸ್ಕೃತಿಯನ್ನು ಮುಂದಿನ ಪೀಳಿಗೆಗೂ ಕೊಂಡೊಯ್ಯಲು ಸಾಧ್ಯವಾಗುತ್ತದೆ ಎಂದರು. ಮಹಂತಿನ ಮಠದ ಕಾರ್ಯದರ್ಶಿ ವಿ . ವಿಶ್ವನಾಥ್ , ಕಾರ್ಯಾಧ್ಯಕ್ಷ ವಿ . ರವೀಂದ್ರ , ದೇವಾಲಯದ ಟ್ರಸ್ಟಿ ಪಿ . ಸದಾನಂದ್ , ಕಾರ್ಯದರ್ಶಿ ಬಿ . ಶಿವರುದ್ರ , ಸಮಿತಿಯ ಮುನಿರುದ್ರಪ್ಪ , ಸಂಚಾಲಕ ಪಿ . ಬಸವರಾಜು , ರಾಷ್ಟ್ರ ಪ್ರಶಸ್ತಿ ವಿಜೇತ ಶಿಕ್ಷಕ ನಂದೀಶ್ ಹಾಜರಿದ್ದರು.

Leave a Comment

Your email address will not be published. Required fields are marked *

Translate »
Scroll to Top