ವಿದ್ಯುತ್ ಕೇಂದ್ರಗಳಿಗೆ ಕಲ್ಲಿದ್ದ ಕೊರತೆ ಇಲ್ಲ-ಪ್ರಲ್ಹಾದ ಜೋಷಿ

ರಾಯಚೂರು : ರಾಜ್ಯದ ಶಾಖೋತ್ಪನ್ನ ವಿದ್ಯುತ್ ಕೇಂದ್ರ ಗಳಿಗೆ ಕಲ್ಲಿದ್ದಲು ಕೊರತೆ ಇಲ್ಲ ಗಣಿಗಳಿಂದ ನಿಗದಿತ ಪ್ರಮಾಣದಲ್ಲಿ ಪೂರೈಕೆ ಆಗುತ್ತಿದೆ ಎಂದು ಕೇಂದ್ರ ಕಲ್ಲಿದ್ದಲು ಸಚಿವ ಪ್ರಹ್ಲಾದ್ ಜೋಶಿ ತಿಳಿಸಿದರು. ರಾಯಚೂರಿನ ಆರ್ ಟಿಪಿಎಸ್ ಗೆ ಸಿಂಗ್ರೇಣಿಯಿಂದ ಪ್ರತಿ ದಿನ ೭ ರೇಖು ಬರಬೇಕಿತ್ತು.ಈಗ ಅದನ್ನು ೯-೧೦ಕ್ಕೆ ಹೆಚ್ಚಳ ಮಾಡಲಾಗಿದೆ. ಮಹಾನದಿ, ಎಮ್ಸಿಎಲ್ ನಿಂದ ರೋಡ್ ಕಂ ರೈಲು ಮೂಲಕ ಕಲ್ಲಿದ್ದಲು ಪೂರೈಕೆ ಮಾಡಲಾಗುತ್ತಿದೆ. ನರೇಂದ್ರ ಮೋದಿ ಅವರು ಅಧಿಕಾರಕ್ಕೆ ಬಂದ ಮೇಲೆ ರಾಜ್ಯಕ್ಕೆ ೨ ದೊಡ್ಡ ಕಲ್ಲಿದ್ದಲು ಗಣಿ ನೀಡಲಾಗಿದೆ. ಬಿಸ್ ವೈ ಅವಧಿಯಲ್ಲಿ ಒಂದು ಗಣಿಯಿಂದ ೧ ರೇಖು ಬರುತ್ತಿದೆ ಅದನ್ನು ಹೆಚ್ಚಿಸಲು ಸಲಹೆ‌ ನೀಡಲಾಗಿದೆ.
ಮಂದಾಕಿನಿ ಕೋಲ್ ಬ್ಲಾಕ್ ಕೊಟ್ಟು ಅಲೊಕೇಷನ್ ಹೆಚ್ಚಿಸಿದ್ದೇವೆ. ಹೆಚ್ಚಿನ ವಿದ್ಯುತ್ ಬೇಡಿಕೆ ಇಲ್ಲದಿರುವುದರಿಂದ ಬಂದ್ ಮಾಡಿದ್ದಾಗಿ ಇಂಧನ ಸಚಿವರೇ ಹೇಳಿದ್ದಾರೆ.
ದೇಶದಲ್ಲಿ ಪ್ರತಿ ದಿನ ೩.೧ ಬಿಲಿಯನ್ ಯುನಿಟ್ ಡಿಮಾಂಡ್ ಇತ್ತು ಅದು ಈಗ ೩.೪ ಬಿಲಿಯನ್ ಯುನಿಟ್ ಬೇಡಿಕೆಗೆ ಹೆಚ್ಚಿದೆ. ರಷ್ಯಾದಿಂದ ಗ್ಯಾಸ್ ಸಪ್ಲೈ ಬಂದಾಗಿದ್ದರಿಂದ ಎಲ್ಲದಕ್ಕೂ ಕಲ್ಲಿದ್ದಲು ಅನಿವಾರ್ಯ ಆಗಿದ್ದರೂ ನಿತ್ಯಬ೨ ಮಿಲಿಯನ್ ಟನ್ ನಿತ್ಯ ಬೇಕಿದೆ. ಅಷ್ಟೆ ಪ್ರಮಾಣದಲ್ಲಿ ಪೂರೈಕೆ ಆಗುತ್ತಿದೆ.


ಪ್ರತಿ ಘಟಕದಲ್ಲಿ ೧೦ ದಿನದ ಸ್ಟಾಕ್ ಇದೆ. ಬಿಜೆಪಿಗೆ ಭ್ರಷ್ಟಾಚಾರ, ಗುಂಡಾ ಬರುತ್ತಿದ್ದಾರೆಂಬ ಆಪ್ ಮುಖ್ಯಸ್ಥ ಕೇಜ್ರಿವಾಲ್ ಹೇಳಿಕೆ‌ ಅಲ್ಲ‌ಗಳೆದ ಅವರು ರಾಜ್ಯ ಸಭಾಕ್ಕೆ ಅವರ ಅಳಿಯನ್ನು ಕಳಿಸಿದ್ದಾರಲ್ಲ ಅದಕ್ಕೇನಂತಾರೆ. ನಾವು ಪರಿವಾರ ರಾಜಕೀಯ ವಾದ ವಿರೋಧಿಸುತ್ತೇವೆ. ಸರ್ಕಾರದ ಜಾಗದಲ್ಲಿ ಅಕ್ರಮವಾಗಿ ಕಟ್ಟಡ ಕಟ್ಟಿದರೆ ಬುಲ್ಡೋಜರ್ ಮೂಲಕ ಧ್ವಂಸ ಮಾಡುತ್ತೇವೆ. ಸಕ್ರಮ ಇದ್ರೆ ಬಿಡುತ್ತೇವೆ ಎಂದರು. ಹುಬ್ಬಳ್ಳಿ ಗಲಭೆಗೆ ಸಂಬಂಧಿಸಿದಂತೆ ಪೊಲೀಸರು ಸರಿಯಾದ ದಿಕ್ಕಲ್ಲಿ ಕೆಲಸ ಮಾಡುತ್ತಿದ್ದಾರೆ. ಇದರಲ್ಲಿ ರಾಜಕೀಯ ಲಾಭ, ನಷ್ಟ‌,‌ ತುಷ್ಟೀಕರಣ ಸಂಸ್ಕೃತಿ ಕಾಂಗ್ರೆಸ್ ಬಿಡಬೇಕು. ಐಕ್ಯತೆ ಗೆ ಒತ್ತು ಕೊಡಬೇಕು. ಎಲ್ಲ ಮುಸ್ಲಿಂರು ಮತಾಂದರಲ್ಲ ಕೆಲವು ಕಿಡಿಗೇಡಿಗಳು ಕಲ್ಲು ಹಾಕುತ್ತಿದ್ದಾರೆ ಅವರ ಸಹಿಸಲು ಸಾಧ್ಯವಿಲ್ಲ ಎಂದು ಜೋಷಿ ಹೇಳಿದರು.

Leave a Comment

Your email address will not be published. Required fields are marked *

Translate »
Scroll to Top